ಕಾಡ್ಲೂರು: ಶ್ರಾವಣ ಮಾಸದ ಅಮವಾಸ್ಯ ಅಂಗವಾಗಿ ಭಕ್ತರಿಂದ ಪಾದಯಾತ್ರೆ ಮತ್ತು ಪಲ್ಲಕ್ಕಿ ಸೇವೆ.


 ಕಾಡ್ಲೂರು: ಶ್ರಾವಣ ಮಾಸದ ಅಮವಾಸ್ಯ ಅಂಗವಾಗಿ ಭಕ್ತರಿಂದ ಪಾದಯಾತ್ರೆ ಮತ್ತು ಪಲ್ಲಕ್ಕಿ ಸೇವೆ        ರಾಯಚೂರು,ಆ.27-  ಪ್ರತಿ  ವರ್ಷದಂತೆ ಈ ವರ್ಷವು ಶ್ರಾವಣ ಮಾಸದ ಅಮವಾಸ್ಯ ಅಂಗವಾಗಿ ಭಕ್ತರಿಂದ ಪಾದಯಾತ್ರೆ ಮತ್ತು ಪಲ್ಲಕ್ಕಿ ಸೇವೆ ನಡೆಯಿತು. ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾನದಿ ತೀರದ ಶ್ರೀವನವಾಸಿ ರಾಮದೇವರ ಹಾಗೂ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನದಲ್ಲಿ ಹುಣಸಿಹಾಳ ಹುಡಾ ಹಾಗೂ ಹೊಸಪೇಟೆ ಗ್ರಾಮಸ್ಥರಿಂದ ಪಲ್ಲಕ್ಕಿ ಸೇವೆ ನೇರವೇರಿತು. 

ತಮ್ಮ ಗ್ರಾಮಗಳಿಂದ ಪಾದಯಾತ್ರೆ ಮೂಲಕ ಇಷ್ಟದೇವರನ್ನು ಪಲ್ಲಕ್ಕೀಯಲ್ಲಿ ಕುಳ್ಳಿರಿಸಿ ಹತ್ತಾರು ಕಿ.ಮಿ ಕ್ರಮಿಸಿ ರಾತ್ರಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿ ಇಂದು ಬೆಳಿಗ್ಗೆ ನಸುಕಿನಲ್ಲಿ ಪೂಜೆ ನೆರವೇರಿಸಿ ನದಿಯ ನೀರನ್ನು ಕಳಸದಲ್ಲಿ ತೆಗೆದುಕೊಂಡು ಪ್ರಸಾದ ಸ್ವೀಕರಸಿ ಸ್ವಗ್ರಾಮಕ್ಕೆ ತೆರಳಿದರು.

ಕಾಡ್ಲೂರು ಸಂಸ್ಥಾನದಿಂದ ಭಕ್ತರಿಗೆ ತಂಗಲು ವ್ಯವಸ್ಥೆ ಸೇರಿದಂತೆ ಇತರ ನೆರವು ಕಲ್ಪಿಸಲಾಗಿತ್ತು.

ನೂರಾರು ಸಂಖೆಯಲ್ಲಿ ಭಕ್ತರು ಆಗಮಿಸಿದ್ದರು.         
     

Comments

Popular posts from this blog