ಶೃಂಗೇರಿ ಶ್ರೀ ಶಂಕರ ಮಠ: ರುದ್ರಾಭಿಷೇಕ ಮತ್ತು ಬುತ್ತಿ ಪೂಜೆ.
ಶೃಂಗೇರಿ ಶ್ರೀ ಶಂಕರ ಮಠ: ರುದ್ರಾಭಿಷೇಕ ಮತ್ತು ಬುತ್ತಿ ಪೂಜೆ. ರಾಯಚೂರು,ಆ.27- ನಗರದ ಶೃಂಗೇರಿ ಶ್ರೀ ಶಂಕರ ಮಠದಲ್ಲಿ, ಶ್ರೀ ಆದಿ ಶಂಕರ ಸೇವಾ ಸಂಘದವತಿಯಿಂದ ಶ್ರಾವಣ ಮಾಸ ನಿಮಿತ್ಯ ರುದ್ರಾಭಿಷೇಕ ಮತ್ತು ಬುತ್ತಿ ಪೂಜೆಯನ್ನು ಹಮ್ಮಿ ಕೊಳ್ಳಲಾಗಿತ್ತು. ಇದರ ಜೊತೆಗೆ ಸಂಘದವತಿಯಿಂದ ರಾಯಚೂರಿನ ಅಖಿಲ ಕರ್ನಾಟಕ ಭ್ರಾಹ್ಮಣ ಮಹಾಸಭಾವತಿಯಿಂದ ಗೌರವ ವಿಪ್ರ ಶ್ರೀ ಪ್ರಶಸ್ತಿಯನ್ನು ನಮ್ಮ ಸಂಘದ ಹಿರಿಯ ಶಿಕ್ಷಕರಾದ ವೆಂಕಟೇಶ್ ರಾವ್ ಇವರಿಗೆ ನೀಡಲಾಗಿದ್ದು ಮತ್ತು ಕುಮಾರಿ ಸ್ನೇಹ ದೇಶಪಾಂಡೆ ಇವರಿಗೆ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕಾರಣ, ಇವರಿಬ್ಬರನ್ನು ಶ್ರೀ ಆದಿ ಶಂಕರ ಸೇವಾ ಸಂಘದವತಿಯಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ವಿ. ಹನುಮಂತ ರಾವ್ ಅವರು ವಹಿಸಿ ಸ್ವಾಗತವನ್ನು ಕೋರಿದರು. ಸನ್ಮಾನ ಸ್ವೀಕರಿಸಿದ ಶ್ರೀ ವೆಂಕಟೇಶ್ ರಾವ್ ಅವರು ಮಾತನಾಡುತ್ತ ಸಮಾಜದ ಉನ್ನತಿಗಾಗಿ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದರು.
ಈ ಕಾರ್ಯಕ್ರಮಕ್ಕೆ ಶ್ರೀ ಆದಿ ಶಂಕರ ಸೇವಾ ಸಂಘದ ಉಪದಕ್ಷ್ಯರಾದ ಸಿ. ಎಸ್. ಶಿವಪ್ರಸಾದ್ ಹಾಗೂ ಸಹ ಕಾರ್ಯದರ್ಶಿಗಳಾದ ಹರೀಶ್ ಭಟ್, ಶ್ರೀಪಾದ್ ರಾವ್ ದೇಸಾಯಿ, ಗೋಪಾಲ ಜೋಶಿ, ಗುರುರಾಜ್ ಕುಲಕರ್ಣಿ, ನಂದೀಶ್ ಅಗ್ನಿಹೋತ್ರಿ ಶ್ರೀಧರ್ ಪೂತ್ದಾರ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಯಾಗಳು ಕಾರಣೀಭೂತರಾದರು, ಶ್ರೀ ಶೃಂಗೇರಿ ಶರದಾಂಬ ಭಜನಾ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ಹಾಗೂ ಅನೇಕ ಇತರ ಸದಸ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಶೋಭೆ ತಂದರು. ವೇದಿಕೆ ಮೇಲೆ ಸಂಘದ ಅಧ್ಯಕ್ಷರಾದ ವಿ. ಹನುಮಂತ ರಾವ್ , ಕಾರ್ಯದರ್ಶಿಗಳಾದ ಸಿ. ವಸಂತ್ ರಾವ್, ಖಜಾಂಚಿಗಳಾದ ಈಶ್ವರ್ ಹೆಗಡೆಯವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರ್ಥನ ಗೀತೆಯನ್ನು ಗಾಯತ್ರಿ ಶೇಲವಾಡಿ ಹಾಡಿದರು. ಗಣ್ಯರ ಪರಿಚಯವನ್ನು ಕುಮಾರಿ ರಮ್ಯಾ ನೀಡಿದರು. ಧನ್ಯವಾದಗಳನ್ನು ಈಶ್ವರ್ ಹೇಗೆಡೆಯವರು ಅರ್ಪಿಸಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಸುಪ್ರಿಯಾ ಶಿವಪ್ರಸಾದ್ ನಡೆಸಿಕೊಟ್ಟರು. ಈ ಕಾರ್ಯಕ್ರಮಕ್ಕೆ ವೆಂಕಟೇಶ್ವರ ರಾವ್ ಅವರ ಅನೇಕ ಶಿಷ್ಯ ಬಳಗದವರಾದ ಉದಯ್ ದೇಸಾಯಿ, ಚಂದ್ರಕಾಂತ್ ವೈದ್ಯ, ಸದಾನಂದ್ ಹೇಮಾದ್ರಿ ಮತ್ತು ದಯಾನಂದ್ ಭಟ್ ಅವರು ನೆನಪಿನ ಕಾಣಿಕೆಯನ್ನು ನೀಡಿ ಗುರುಗಳಿಗೆ ವಂಧಿಸಿದರು. ಕಾರ್ಯಕ್ರಮದ ನಂತರ ಎಲ್ಲರಿಗೂ ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

Comments
Post a Comment