ಒಂದಿಂಚು ಜಾಗ ತೆಲಂಗಾಣಕ್ಕೆ ಬಿಟ್ಟುಕೊಡುವುದಿಲ್ಲ-ಸಿಎಂ.
ಒಂದಿಂಚು ಜಾಗ ತೆಲಂಗಾಣಕ್ಕೆ ಬಿಟ್ಟುಕೊಡುವುದಿಲ್ಲ-ಸಿಎಂ. ರಾಯಚೂರು,ಆ.27-ಒಂದಿಂಚು ಜಾಗವನ್ನು ತೆಲಂಗಾಣಕ್ಕೆ ಬಿಟ್ಟುಕೊಡುವುದಿಲ್ಲವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರಿಂದು ಕೃಷಿ ವಿವಿಯಲ್ಲಿ ಸಿರಿಧಾನ್ಯ ಸಮಾವೇಶ ಉದ್ಘಾಟನೆಗೂ ಪೂರ್ವ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ ತೆಲಂಗಾಣ ಸಿಎಂ ಕೆಸಿಆರ್ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಬೇಕೆಂದು ನೀಡಿರುವ ಹೇಳಿಕೆ ರಾಜಕೀಯ ಪ್ರೇರಿತವಾಗಿದ್ದು ತೆಲಂಗಾಣ ಅತ್ಯಂತ ಹಿಂದುಳಿದ ರಾಜ್ಯವೆಂದು ಆಂಧ್ರ ವಿಭಜನೆಯಾಗಿ ತೆಲಂಗಾಣ ರಾಜ್ಯ ಉದಯಿಸಿದೆ ಮೊದಲು ಆ ರಾಜ್ಯ ಅಭಿವೃದ್ದಿ ಮಾಡುವುದು ಹೇಗೆಂದ ಕೆಸಿಆರ್ ಆಲೋಚಿಸಲಿ ರಾಯಚೂರಿನಲ್ಲಿ ಈಗಾಗಲೆ ವಿದ್ಯುತ್ ಉತ್ಪಾದನಾ ಘಟಕ, ಐಐಐಟಿ ಇತ್ಯಾದಿಗಳು ಇವೆ ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣ ಮುಂತಾದ ಸೌಕರ್ಯ ದೊರಯಲಿವೆ ಒಂದಿಂಚೂ ಜಾಗ ತೆಲಂಗಾಣಕ್ಕೆ ಹೋಗುವುದಿಲ್ಲವೆಂದು ಸ್ಪಷ್ಟನೆ ನೀಡಿದರು. ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದ್ದು ಕೇಂದ್ರ ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳುತ್ತದೆ ಎಂದರು.
ಒಟ್ಟಾರೆ ಜಿಲ್ಲೆಯ ಸಮಗ್ರ ಅಭಿವೃದ್ದಿ ನಮ್ಮ ಧ್ಯೇಯವೆಂದರು.ಈ ಸಂದರ್ಭದಲ್ಲಿ ಸಚಿವರು, ಶಾಸಕರು, ಬಿಜೆಪಿ ಮುಖಂಡರಿದ್ದರು.
Comments
Post a Comment