ತುಮಕೂರು ಬಳಿ ಭೀಕರ ಅಪಘಾತ: ಜಿಲ್ಲೆಯ ಒಂಬತ್ತು ಜನರ ಸಾವು
ತುಮಕೂರು ಬಳಿ ಭೀಕರ ಅಪಘಾತ: ಜಿಲ್ಲೆಯ ಒಂಬತ್ತು ಜನರ ಸಾವು
ರಾಯಚೂರು,ಆ.25- ಕ್ರೂಷರ್ ವಾಹನ ಲಾರಿಗೆ ಡಿಕ್ಕಿಯಾಗಿ ಒಂಬತ್ತು ಜನ ಸಾವನ್ನಪ್ಪಿದ ಘಟನೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಇಂದು ಬೆಳಗಿನ ಜಾವ 4 ಗಂಟೆ ಸುಮಾರು ಕಳ್ಳಂಬೆಳ್ಳ ಸಮೀಪ ಚಿಕ್ಕನಹಳ್ಳಿ ಸಮೀಪ ಬಾಳೇನಹಳ್ಳಿ
ಬಳಿ ಈ ಅವಘಡ ನಡೆದಿದ್ದು, ಮೃತರು ಎಲ್ಲರೂ ಜಿಲ್ಲೆಯ ಸಿರವಾರ, ಮಾನ್ವಿ ತಾಲೂಕಿನವರೆಂದು ತಿಳಿದು ಬಂದಿದೆ.
ಕ್ರೂಷರ್ ನಲ್ಲಿ 24 ಜನ ಕೂಲಿಕಾರ್ಮಿಕರು, ಮಾನ್ವಿ ಯಿಂದ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು ಗಾಯಾಳುಗಳನ್ನ ಶಿರಾ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದ್ದು ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments
Post a Comment