ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಜಿ.ವೀರಾರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ವಿಶ್ವನಾಥ ಬಿ.ಸ್ವಾಮಿ ಆಯ್ಕೆ.
ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಜಿ.ವೀರಾರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ವಿಶ್ವನಾಥ ಬಿ.ಸ್ವಾಮಿ ಆಯ್ಕೆ.
ರಾಯಚೂರು,ಆ.24- ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿ ಜನಕೂಗು ಪತ್ರಿಕೆ ಸಂಪಾದಕ ಜಿ.ವೀರಾರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸುದ್ದಿಮೂಲ ಪತ್ರಿಕೆ ವ್ಯವಸ್ಥಾಪಕ ಸಂಪಾದಕ ವಿಶ್ವನಾಥ ಬಿ.ಸ್ವಾಮಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ರಾಯಚೂರು ನಗರದ ಪತ್ರಿಕಾ ಭವನದಲ್ಲಿ ಸಂಘದ ರಾಜ್ಯ ಕೋಶಾಧ್ಯಕ್ಷ ನಾಗರಾಜ ನಾಗತೀಹಳ್ಳಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಉಪಾಧ್ಯಕ್ಷರಾಗಿ ಸಿಂಧೂರಬಿಂಬ ಪತ್ರಿಕೆ ಸಂಪಾದಕ ವೀರಭದ್ರಪ್ಪ ಜವಳಗೇರಾ, ಕಾರ್ಯದರ್ಶಿಯಾಗಿ ಪ್ರಜಾ ಸಾಕ್ಷಿ ಪತ್ರಿಕೆ ಸಂಪಾದಕ ರಮೇಶ ಗೋರೆಬಾಳ, ಖಜಾಂಚಿಯಾಗಿ ರಾಯಚೂರು ವಾರ್ತೆ ಸಂಪಾದಕ ಗಿರಿಧರ ಕುಲ್ಕರ್ಣಿ ಹಾಗೂ ಐದು ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯ ಹಾಗೂ ರಾಯಚೂರವಾಣಿ ವ್ಯವಸ್ಥಾಪಕ ಸಂಪಾದಕ ಅರವಿಂದ ಕುಲಕರ್ಣಿ, ರಾಯಚೂರು ಪ್ರಭ ಸಂಪಾದಕ ಸುಶೀಲೆಂದ್ರ ಸೊದೆಗಾರ, ಬೆಂಕಿ ಬೆಳಕು ಪತ್ರಿಕೆ ಸಂಪಾದಕ ಆರ್.ಗುರುನಾಥ, ಸಮರ್ಥವಾಣಿ ಸ್ಥಾನಿಕ ಸಂಪಾದಕ ಆನಂದ ವಿ.ಕೆ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Comments
Post a Comment