ರೈಲ್ವೆ ನಿಲ್ದಾಣ: ಡಿಲಕ್ಸ್ ಶೌಚಾಲಯ ಉದ್ಘಾಟನೆ
ರೈಲ್ವೆ ನಿಲ್ದಾಣ: ಡಿಲಕ್ಸ್ ಶೌಚಾಲಯ ಉದ್ಘಾಟನೆ ರಾಯಚೂರು,ಆ.23- ರೈಲ್ವೆ ನಿಲ್ದಾಣದಲ್ಲಿ ಡಿಲಕ್ಸ್ ಶೌಚಾಲಯವನ್ನು ಇಂದು ರಿಬ್ಬನ್ ಕತ್ತರಿಸುವುದರ ಮೂಲಕ ಸೌತ್ ಸೆಂಟ್ರಲ್ ರೈಲ್ವೆ ಸದಸ್ಯರಾದ ಬಾಬುರಾವ್ ಹಾಗೂ ರಾಯಚೂರು ಸ್ಟೇಷನ್ ಮಾಸ್ಟರ್ ಎಸ್ ಕೆ ಸರ್ಕಾರ್ ಜಂಟಿಯಾಗಿ ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು.
ಶೌಚಾಲಯದ ನಿರ್ವಹಣೆಯನ್ನು ಸುಲಭ ಇಂಟರ್ನ್ಯಾಷನಲ್ ಆರ್ಗನೈಸೇಶನ್ ಆಂಧ್ರ ಪ್ರದೇಶ್ ನಿರ್ವಹಿಸಲಿದ್ದಾರೆ ಸೌತ್ ಸೆಂಟ್ರಲ್ ರೈಲ್ವೆ ಗುಂತ್ಕಲ್ ಇವರ ಸಹಯೋಗದಲ್ಲಿ ಶೌಚಾಲಯ ನಿರ್ಮಾಣಗೊಂಡಿದೆ ಎಂದು ಸ್ಟೇಷನ್ ಮಾಸ್ಟರ್ ಎಸ್ ಕೆ ಸರ್ಕಾರ್ ಹೇಳಿದರು .ಈ ಸಂದರ್ಭದಲ್ಲಿ ಎಸ್ ಜಿ ಚೌಹಾನ್ ಸಿಸಿಐ ಹಾಗೂ ರೈಲ್ವೆ ಇಲಾಖೆ ವೈದ್ಯಾಧಿಕಾರಿಯಾದ ವಿ ಅಮರನಾಥ ಉಪಸ್ಥಿತರಿದ್ದರು.
Comments
Post a Comment