ಗುಸ್ಮಾ ಒಕ್ಕೂಟ: ಸೆ.24 ಕಾಡ್ಲೂರಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಗುಸ್ಮಾ ಒಕ್ಕೂಟದ 6ನೇ ವರ್ಷದ ಸಂಭ್ರಮ ಆಚರಣೆ:
ಸೆ.24 ರಂದು ಕಾಡ್ಲೂರಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ರಾಯಚೂರು,ಸೆ.೨೧-ಗ್ರಾಮಾ0ತರ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ(ಗುಸ್ಮಾ)ದ 6ನೇ ವರ್ಷದ ಸಂಭ್ರಮಾಚರಣೆ ನಿಮಿತ್ಯ ಸೆ.24 ರಂದು ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕ ಶಿಕ್ಷಕಿಯರಿಗೆ "ಶಿಕ್ಷಕ ರತ್ನ" ಪ್ರಶಸ್ತಿ ಪ್ರದಾನ ಸಮಾರಂಭವನ್ನು ತಾಲೂಕಿನ ಕಾಡ್ಲೂರು ಗ್ರಾಮದಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ ೧೦ ಗಂಟೆಗೆ ಕಾಡ್ಲೂರು ಗ್ರಾಮದ ಮೇಧಾ ಪಬ್ಲಿಕ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠ ಶ್ರೀ ೧೦೮ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದು ,ಉದ್ಘಾಟನೆಯನ್ನು ಸಂಸದ ರಾಜಾ ಅಮರೇಶ್ವರ ನಾಯಕ ನೆರವೇರಿಸಲಿದ್ದು ಜ್ಯೋತಿಯನ್ನು ಗ್ರಾಮೀಣ ಶಾಸಕರಾದ ದದ್ದಲ ಬಸನಗೌಡ ಬೆಳಗಿಸಲಿದ್ದು, ಪ್ರಶಸ್ತಿಯನ್ನು ಶಾಸಕರಾದ ಡಾ.ಶಿವರಾಜ ಪಾಟೀಲ ವಿತರಿಸಲಿದ್ದು, ಅಧ್ಯಕ್ಷತೆಯನ್ನು ಗುಸ್ಮಾ ಅಧ್ಯಕ್ಷರಾದ ಎಸ್.ರವಿಕುಮಾರ್ ಗೋನಾಳ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿ.ಪಂ ಮಾಜಿ ಸದಸ್ಯೆ ಹೇಮಾವತಿ ಸತೀಶ ಕುಮಾರ್, ತಾ.ಪಂ ಮಾಜಿ ಸದಸ್ಯ ಎಸ್.ಎಫ್.ಖಾದ್ರಿ, ಕಾಡ್ಲೂರು ಗ್ರಾ.ಪಂ ಅಧ್ಯಕ್ಷೆ ಸುನೀತಾ ಮುನೀಂದ್ರ ಹಾಗೂ ಸರ್ವ ಸದಸ್ಯರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೃಷಭೇಂದ್ರಯ್ಯ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತೆದಾರ,ಜಿಲ್ಲಾ ಪರಿಶಿಷ್ಟ ಕಲ್ಯಾಣಾಧಿಕಾರಿ ರಾಜೇಂದ್ರ ಜಲ್ದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಕನ್ನನ್,ಶಿಕ್ಷಣ ಸಂಯೋಜಕ ಕೃಷ್ಣ ಕುರ್ಡಿಕರ್, ವಲಯ ಸಂಪನ್ಮೂಲ ವ್ಯಕ್ತಿ ಶಿವಾನಂದ ಆಗಮಿಸಲಿದ್ದಾರೆ.
ವಿಶೇಷ ಅಹ್ವಾನಿತರಾಗಿ ಕಲಬುರ್ಗಿ ವಿವಿ ಸಿಂಡಿಕೇಟ ಸದಸ್ಯ ಶರಣ ಬಸವ ಜೋಳದೆಡ್ಗಿ, ವಿದ್ಯಾ ವಿಷಯಕ ಪರಿಷತ್ ಸದಸ್ಯ ರಾಜಾ ಶ್ರೀನಿವಾಸ್,ರುಸ್ಮಾ ಅಧ್ಯಕ್ಷರಾದ ನಾಗಿರೆಡ್ಡಿ,ಕುಸ್ಮಾ ಅಧ್ಯಕ್ಷ ಕೇಶವರೆಡ್ಡಿ, ಗ್ರಾಮೀಣ ಪಿಎಸ್‌ಐ ರಂಗಪ್ಪ ದೊಡ್ಡಮನಿ ಆಗಮಿಸಲಿದ್ದಾರೆ.
ಅತಿಥಿಗಳಾಗಿ ಕಾಡ್ಲೂರು ಸಂಸ್ಥಾನದ ಸುವರ್ಣಬಾಯಿ ರಾಘವೇಂದ್ರರಾವ್ ದೇಸಾಯಿ ಕಾಡ್ಲೂರು, ಗ್ರಾಮದ ಹಿರಿಯ ಮುಖಂಡರಾದ ಎಸ್.ಎ.ಅಜೀಜ ಖಾದ್ರಿ, ಬಸವರಾಜಪ್ಪ ಮಾಲಿ ಪಾಟೀಲ, ಸಿದ್ದಣ್ಣ ಸಾಹುಕಾರ, ಕೆಜಿಬಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ರಾಘವೇಂದ್ರ ಆಚಾರ್ ಜೋಷಿ,ಸಾಯಿ ಬಾಬಾ ಸೇವಾ ಸಮಿತಿಯ ಡಾ.ಯು.ಮೋಹನರಾವ್, ನಿವೃತ್ತ ಶಿಕ್ಷಕ ಮಹಾದೇವಪ್ಪ ಸಾಹುಕಾರ್,ತಾ.ಪಂ ಮಾಜಿ ಅಧ್ಯಕ್ಷ ಮಲ್ಲನಗೌಡ, ನರಸಿಂಗಪ್ಪ ಕಾಶಣ್ಣ ಅಮರ್, ದೇವೇಂದ್ರಪ್ಪ, ಮಾರುಫ ಸೋಫಿ, ಬಾಲಾಜಿ ಸಿಂಗ್, ಸೋಮರೆಡ್ಡಿ ಶ್ರೀನಿವಾಸ
ಹೆಚ್.ತಿಮ್ಮಾಪೂರು,ಗ್ರಾ.ಪಂ ಉಪಾಧ್ಯಕ್ಷ ಎಂ.ಡಿ.ಸಾಧಿಕ, ಗ್ರಾ.ಪಂ ಸದಸ್ಯೆ ಶಾಂತಮ್ಮ ಮಹಾದೇವಪ್ಪ ಸಾಹುಕಾರ್, ಗ್ರಾ,ಪಂ ಸದಸ್ಯರಾದಜಂಷೇರ್ ಅಲಿ ಕೊತ್ವಾಲ್, ಸೂಗಮ್ಮ ಚಂದ್ರಶೇಖರ್,ತಿಮ್ಮಾರೆಡ್ಡಿ, ಅಕ್ಕ ನಾಗಮ್ಮ ಮಾರೆಪ್ಪ ಆಗಮಿಸಲಿದ್ದಾರೆ. ಸರ್ವರಿಗೂ ಸ್ವಾಗತವನ್ನು ಮೇಧಾ ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ರೋಜಾಶ್ರೀ ಮತ್ತು ಪ್ರದೀಪ ಕುಮಾರ್ ಮತ್ತು ಗುಸ್ಮಾ ಒಕ್ಕೂಟದ ಸರ್ವ ಸದಸ್ಯರು ಕೋರುತ್ತಾರೆ.
Comments
Post a Comment