ಸ್ವಾತಂತ್ರ್ಯ ದಿನಾಚರಣೆಯಷ್ಟೆ ಮಹತ್ವದ್ದು ಕಲ್ಯಾಣ ಕರ್ನಾಟಕ ಮಹೋತ್ಸವ- ಚಂದ್ರಶೇಖರ ನಾಯಕ


 ಸ್ವಾತಂತ್ರ್ಯ ದಿನಾಚರಣೆಯಷ್ಟೆ  ಮಹತ್ವದ್ದು  ಕಲ್ಯಾಣ ಕರ್ನಾಟಕ ಮಹೋತ್ಸವ- ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ

ರಾಯಚೂರು,ಸೆ.17- ಸ್ವಾತಂತ್ರ ದಿನಾಚರಣೆಯಷ್ಟೆ  ಮಹತ್ವದ್ದು  ಕಲ್ಯಾಣ ಕರ್ನಾಟಕ ಮಹೊತ್ಸವೆಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಹೇಳಿದರು. ಅವರಿಂದು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.   ಕಲ್ಯಾಣ-ಕರ್ನಾಟಕ (ಹೈದ್ರಾಬಾದ್-ಕರ್ನಾಟಕ) ಪ್ರದೇಶ ನಿಜಾಮರ ಆಳ್ವಿಕೆಯಿಂದ ಸ್ವಾತಂತ್ರö್ಯಗೊಂಡು ೭೪ ವರ್ಷಗಳಾದ ನೆನಪಿನಲ್ಲಿ ಇಂದು ಏರ್ಪಡಿಸಿರುವ ವಿಮೋಚನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ನನಗೆ ಸಂತೋಷವೆನಿಸುತ್ತದೆ. ಇದಕ್ಕಾಗಿ ಹೋರಾಡಿದ ಎಲ್ಲ ಮಹನೀಯರಿಗೆ ನಮ್ಮ ನಿಮ್ಮೆಲ್ಲರ ಪರವಾಗಿ ಗೌರವದ ವಂದನೆಗಳು ಸಲ್ಲಿಸುತ್ತೇನೆಂದರು. 

ನಮ್ಮ ಜಿಲ್ಲೆಯವರೇ ಆದ ಎಂ. ನಾಗಪ್ಪ, ಡಾ. ಬಿ.ಜಿ. ದೇಶಪಾಂಡೆ, ಜನಾರ್ಧನರಾವ ದೇಸಾಯಿ, ಗುಡಿಹಾಳ ಹನುಮಂತರಾವ, ರಾಮಾಚಾರ ಗುರಾಚಾರ‍ ಜೋಷಿ, ಎಲ್.ಕೆ. ಸರಾಫ್, ಗಾಣದಾಳ ನಾರಾಯಣಪ್ಪ, ಕಸಬೆ ಪಾಂಡುರಂಗರಾವ, ಜಿ. ಮಧ್ವರಾಯರು ಸೇರಿದಂತೆ ಸಹಸ್ರ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಹೈದ್ರಾಬಾದ್-ಕರ್ನಾಟಕ (ಕಲ್ಯಾಣ ಕರ್ನಾಟಕ) ವಿಮೋಚನಾ ಹೋರಾಟ ಈ ನಾಡಿನ ಭವ್ಯ ಇತಿಹಾಸವಾಗಿ ಉಳಿದಿದೆ.

೧೫ನೇ ಆಗಸ್ಟ್ ಸ್ವತಂತ್ರ ದಿನಾಚರಣೆ ಎಷ್ಟು ಮಹತ್ವದಾಗಿದೆಯೋ ಅಷ್ಟೇ ಮಹತ್ವ ೧೭ನೇ ಸೆಪ್ಟೆಂಬರ್ ರಂದು ಆಚರಿಸಲಾಗುವ ಕಲ್ಯಾಣ ಕರ್ನಾಟಕ ಮಹೊತ್ಸವಕ್ಕೂ ಇದೆ. ಈ ದಿನಾಚರಣೆ ಆಚರಿಸುವುದು ನಮ್ಮ ಭಾಗದ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ.


ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ದಿಗಾಗಿ ವಿಶೇಷ ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕಾಗಿಯೇ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿ, ಹಲವಾರು ಯೋಜನೆಗಳನ್ನು ಕೈಗೊಂಡು ಜನಪರ ನೀತಿ, ಸಾಮಾಜಿಕ ನ್ಯಾಯ ಮತ್ತು ರೈತರ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು


೨೦೧೯ರಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿರುವಂತೆ, ಹೈ.ಕ. ವಿಮೋಚನಾ ದಿನಾಚರಣೆಯನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ರೂಪದಲ್ಲಿ ಆಚರಣೆ ಮಾಡುತ್ತಾ ಬರಲಾಗುತ್ತಿದೆ.



ಈ ಭಾಗದ ಸಮಗ್ರ ಕಲ್ಯಾಣವೇ ಎಲ್ಲರ ಧ್ಯೇಯ ಮತ್ತು ಪ್ರಾದೇಶಿಕ ಅಸಮತೋಲನ ನಿವಾರಣೆಯೇ ನಮ್ಮ ಮುಂದಿನ ಗುರಿಯಾಗಿದೆ. 


ಟ್ರಿಪ್ಪಲ್ ಐಟಿ:

ಯರಮರಸ್‌ನಲ್ಲಿರುವ ಸರ್ಕಾರಿ ಎಂಜಿನಿಯರಿAಗ್ ಕಾಲೇಜಿನಲ್ಲಿ ಈ ಸಾಲಿನಲ್ಲಿ ಆಫ್‌ಲೈನ್ ಮೂಲಕಟ್ರಿಪ್ಪಲ್ ಐಟಿ ತರಗತಿಗಳು ಆರಂಭಗೊAಡಿವೆ. ಐಟಿ-ಬಿಟಿ ಇಲಾಖೆಯಿಂದ ೨.೭೫ ಕೋಟಿ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿAದ ೭.೪೬ಕೋಟಿ ಸೇರಿದಂತೆ ಒಟ್ಟು ೧೦.೮೩ ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ.


ನೂತನ ವಿಮಾನ ನಿಲ್ದಾಣ:

ಜಿಲ್ಲೆಯ ಜನತೆಯ ಬಹುದಿನಗಳ ಕನಸಾದ ರಾಯಚೂರು ವಿಮಾನ ನಿಲ್ದಾಣವು ಈಗ ನನಸಾಗುವ ಹಂತಕ್ಕೆ ಬಂದಿದೆ. ಈಗಾಗಲೇ ಯರಮರಸ್ ಹೊರವಲಯದಲ್ಲಿ ೩೧೫ ಎಕರೆ ಭೂಮಿಯನ್ನು ಇದಕ್ಕಾಗಿ ಕಾಯ್ದಿರಿಸಲಾಗಿದ್ದು, ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೈಟ್ಸ್ ಇಂಡಿಯಾ ಲಿ. ಸಂಸ್ಥೆಯ ವಿಸ್ಕೃತ ಯೋಜನಾ ವರದಿಯೊಂದಿಗೆ ೧೮೫.೫೭ ಕೋಟಿ ರೂ.ಗಳ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ.


ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯಡಿ ೫೫.೦೦ ಕೋಟಿರೂ. ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ ೧೦.೦೦ ಕೋಟಿ ರೂ. ಒಟ್ಟು ೬೫.೦೦ ಕೋಟಿ ರೂ.ಗಳ ಹಣವನ್ನು ಮೀಸಲಿರಿಸಿದೆ. 


ಪ್ರವಾಹ:

೨೦೨೨ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯಿಂದ ಪ್ರಾಥಮಿಕ ವರದಿಯಂತೆ ಜಿಲ್ಲೆಯಲ್ಲಿ ೬,೭೧೦ ಹೆಕ್ಟರ್ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಮೊದಲನೇ ಹಂತದಲ್ಲಿ ೪೩೮ ರೈತರಿಗೆ ರೂ.೩೬.೦೦ ಲಕ್ಷವನ್ನು ಭೂಮಿ ಪರಿಹಾರ ತಂತ್ರಾAಶದ ಮೂಲಕ ನೇರವಾಗಿ ಬ್ಯಾಂಕ ಖಾತೆಗೆ ಜಮೆ ಮಾಡಲಾಗಿರುತ್ತದೆ. ಬಾಕಿ ಉಳಿದ ರೈತರಿಗೆ ಹಂತ ಹಂತವಾಗಿ ಪರಿಹಾರ ನೀಡುವುದು ಪ್ರಗತಿಯಲ್ಲಿರುತ್ತದೆ.   


ಭಾರಿ ಮಳೆಯಿಂದ ರಾಯಚೂರು ಜಿಲ್ಲೆಯಲ್ಲಿ ಮನೆ ಹಾನಿ, ಬೆಳೆ ಹಾನಿ ಮತ್ತು ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆ, ಶಾಲೆ, ಆಸ್ಪತ್ರೆ, ಅಂಗನವಾಡಿ ಮತ್ತು ವಿದ್ಯತ್ ಕಂಬಗಳು ಇತ್ಯಾದಿ ಹಾನಿಯಾಗಿದ್ದು ಒಟ್ಟು ಅಂದಾಜು ರೂ.೭೫.೫೩ ಕೋಟಿ ಹಾನಿ ಉಂಟಾಗಿರುತ್ತದೆ. ಎನ್.ಡಿ.ಆರ್.ಎಫ್/ಎಸ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ರೂ.೧೩.೭೬ ಕೋಟಿಯಷ್ಟು ಹಾನಿಯಾದ ಬಗ್ಗೆ ಮಾನ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ. 

ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ ರೂ.೨೧.೦೦ ಕೋಟಿ ಮತ್ತು ಸಹಾಯಕ ಆಯುಕ್ತರು ಹಾಗೂ ತಾಲೂಕು ತಹಶೀಲ್ದಾರರ ಖಾತೆಯಲ್ಲಿ ರೂ.೭.೦೦ ಕೋಟಿ ಲಭ್ಯವಿದ್ದು, ಒಟ್ಟು ರೂ.೨೮.೦೦ ಕೋಟಿ ಜಿಲ್ಲೆಯಲ್ಲಿ ಲಭ್ಯವಿದ್ದು, ತುರ್ತು ಪರಿಹಾರ ಕಾರ್ಯಗಳನ್ನು ತ್ವರಿತಗತಿಯಲ್ಲಿ ನೆರೆ ಸಂತ್ರಸ್ಥರಿಗೆ ಅನುದಾನ ಬಿಡುಗಡೆ ಗೊಳಿಸಲು ಕ್ರಮ ಕೈಗೊಳ್ಳಲಾಗುವುದು.  


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ:

ಜಿಲ್ಲೆಯಲ್ಲಿ ಈಗಾಗಲೇ ೧೫,೩೨,೪೬೬ ಫಲಾನುಭವಿಗಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ.

ಜನನಿ ಸುರಕ್ಷಾ ಯೋಜನೆಯಡಿ ೨,೯೮೫ ಫಲಾನುಭವಿಗಳಿಗೆ ೧೯,೪೧,೪೩೦ರೂ. ಹಾಗೂ ಜನನಿ ಶಿಶುಸುರಕ್ಷಾ ಕಾರ್ಯಕ್ರಮದಡಿ ೧೩೦೮೩ ಫಲಾನುಭವಿಗಳಿಗೆ ೩೮,೮೨,೦೩೧ರೂ. ವೆಚ್ಚ ಮಾಡಲಾಗಿದ್ದು, ಜಿಲ್ಲೆಯಲ್ಲಿ ನಗು-ಮಗು ಯೋಜನೆಯಡಿ ೭ ವಾಹನಗಳಿದ್ದು, ೬೦೦ ಫಲಾನುಭವಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಅಲ್ಲದೆ ಜಿಲ್ಲೆಯ ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ೯ ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತಿದೆ.


ಕೃಷಿ ಇಲಾಖೆ:

ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ               ೨೦೨೨-೨೩ನೇ ಸಾಲಿನಲ್ಲಿ ೫೦೭೫.೬೦ ಕ್ವಿಂಟಲ್ ಬೀಜಗಳನ್ನು ಒಟ್ಟು ೨೪,೭೯೮ ಫಲಾನುಭವಿಗಳಿಗೆ ವಿತರಿಸಲಾಗಿದ್ದು, ೧೦೫.೦೭ ಲಕ್ಷ ರೂಗಳ ಪ್ರಯೋಜನ ಮುಂಗಾರು ಹಂಗಾಮಿನಲ್ಲಿ ಪಡೆದಿದ್ದಾರೆ.

ಪ್ರಧಾನಮಂತ್ರಿಗಳ ಕೃಷಿಸಮ್ಮಾನ್‌ನಿಧಿ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಈಗಾಗಲೇ ನೇರವಾಗಿ ೨,೩೦,೯೧೫ರೂ.ಗಳ ರೈತರ ಬ್ಯಾಂಕ್‌ಖಾತೆಗೆ ಜಮೆಯಾಗಿವೆ.

ಪ್ರಧಾನಮಂತ್ರಿಗಳ ಕೃಷಿ ಸಿಂಚಾಯಿ ಯೋಜನೆಯಡಿ ಜಿಲ್ಲೆಯ ರೈತರಿಗೆ ೧೪.೯೨ಲಕ್ಷ ರೂಪಾಯಿ ಸಹಾಯಧನ ನೀಡಲಾಗಿದೆ. ಅಲ್ಲದೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ೨೦೨೨-೨೩ನೇ ಸಾಲಿನಲ್ಲಿ ೫೧೩.೯೦ರೂ.ಗಳ ಲಕ್ಷ ಆರ್ಥಿಕ ಗುರಿ ನಿಗಧಿ ಪಡಿಸಲಾಗಿದೆ.


ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ:

ಜಾನುವಾರುಗಳಿಗೆ ಸುಸಜ್ಜಿತ ಸೇವೆಗಾಗಿ ಆಂಬುಲೆನ್ಸ್ ಒದಗಿಸಲು ಜಿಲ್ಲೆಗೆ ಹೆಚ್ಚುವರಿಯಾಗಿ ೦೯ ಅಂಬಲೆನ್ಸ್ ವಾಹನಗಳು ಒದಗಿಸಲಾಗಿದೆ.

ಪ್ರಪ್ರಥಮವಾಗಿ ಜಿಲ್ಲೆಗೊಂದು ಸರ್ಕಾರಿ ಗೋಶಾಲೆಯನ್ನು ಮಂಜೂರು ಮಾಡಿದ್ದು, ಇನ್ನು ಹೆಚ್ಚುವರಿಯಾಗಿ ಜಿಲ್ಲೆಗೆ ೦೨ಗೋಶಾಲೆಯನ್ನು ಮಂಜೂರುಮಾಡಲಾಗಿದೆ. ಅಲ್ಲದೆ ಗೋವುಗಳನ್ನು ದತ್ತು ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸಲು ಘನ ಸರ್ಕಾರವು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪುಣ್ಯಕೋಟಿ ದತ್ತು ಯೋಜನೆಯನ್ನು ಘೋಷಿಸಿದೆ. ಅಲ್ಲದೆ ಈಗಾಗಲೇ ಜಿಲ್ಲೆಯಲ್ಲಿ ೦೯ಗೋಶಾಲೆಗಳನ್ನು ನೀಡಲಾಗಿದೆ.


ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ:

ಕಲ್ಯಾಣ ಕರ್ನಾಟಕಪ್ರದೇಶಾಭಿವೃದ್ಧಿಮಂಡಳಿಯಿAದ ಜಿಲ್ಲೆಗೆ ಈವರೆಗೆ ೨೦೧೩-೧೪ ರಿಂದ ೨೦೨೨ ರವರೆಗೆ ಒಟ್ಟು ೧೬೭೯ ಕೋಟಿ ಮಂಜೂರಿಯಾಗಿದ್ದು, ನಮ್ಮಸರ್ಕಾರದಲ್ಲಿ ೨೦೧೯-೨೦ ರಿಂದಪ್ರಸ್ತುತ ೨೦೨೨ ರವರೆಗೆ ೮೯೮ ಕೋಟಿಗಳುಮಂಜೂರಿಯಾಗಿದ್ದು, ೧೩೦೪ ಕಾಮಗಾರಿಗಳುಮಂಜೂರಾಗಿದ್ದು, ಇದುವರೆಗೆ ೬೧೦ ಕಾಮಗಾರಿಗಳು ಮುಕ್ತಾಯವಾಗಿರುತ್ತದೆ.


ಜಲಧಾರೆ ಮತ್ತು ಜಲಜೀವನ್ ಮಷಿನ್:

ಜಲಧಾರೆ ಯೋಜನೆಯು ೨೨೯೦ ಕೋಟಿ ರೂಗಳುಸರ್ವೆ ಕಾರ್ಯನಡೆಯುತ್ತಿದ್ದು, ಈಗಾಗಲೇ ೧೦೮ ಕೋಟಿ ಅನುದಾನವುವೆಚ್ಚಮಾಡಲಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆಮತ್ತು ಜಲಜೀವನ್ ಯೋಜನೆಯಲ್ಲಿ ಒಟ್ಟು ೧೦೦ ಕೋಟಿ ಮಂಜೂರಿಯಾಗಿದ್ದು, ಇದುವರೆಗೆ ಒಟ್ಟು ೯೮ ಕೋಟಿ ವೆಚ್ಚವಾಗಿದ್ದು, ಜಲಧಾರೆ ಮತ್ತು ಜಲ ಜೀವನ್ ಮಷೀನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ.


ಮಹತ್ಮಾಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ:

೨೦೨೨-೨೩ನೇ ಸಾಲಿನಲ್ಲಿ ಪ್ರಸ್ತಕ ವರ್ಷದಲ್ಲಿಮಹತ್ಮಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯದಡಿ ೧೦೫ಲಕ್ಷ ಮಾನವ ದಿನಗಳ ಗುರಿಗಳಿಗೆ ಅನುಸಾರವಾಗಿ ೭೦ಲಕ್ಷ ಮಾನವ ದಿನಗಳನ್ನು ಸೃಜಿಸಿ, ರೂ.೧೭೭೨೬.೭೮ ಕೋಟಿಗಳನ್ನು ವೆಚ್ಚ ಮಾಡಲಾಗಿದ್ದು, ರಾಜ್ಯದಲ್ಲಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿರುತ್ತದೆ.

ನರೇಗಾದಡಿ ರೈತರ ಜಮೀನುಗಳಲ್ಲಿ ಕೈಗೆತ್ತಿಕೊಂಡಿರುವ ಅಂತರ್ಜಲವೃದ್ಧಿಗೆ ಈ ವರ್ಷ ಕ್ರಿಯಾ ಯೊಜನೆ ಪ್ರಕಾರ ಜಿಲ್ಲೆಯಲ್ಲಿ ಕೃಷಿಹೊಂಡ ೩,೭೪೫ ಬದು ನಿರ್ಮಾಣ ೧೪,೪೫೪ ತೆರೆದ ಬಾವಿ ೪೩೧ ಸೋಕ್ ಪಿಟ್ ೨೦,೧೮೪ ಬೋರ್‌ವೆಲ್ ರಿಚಾರ್ಜ್ ೧೬೮ ಕಾಮಗಾರಿಗಳಿಗೆ ಅನುಮೊದನೆ ನೀಡಲಾಗಿದೆ.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ:

ಭಾಗ್ಯಲಕ್ಷಿö್ಮÃ- ಸುಕನ್ಯಾ ಸಮೃದ್ಧಿ ಯೋಜನೆಯಡಿ ಇದುವರೆಗೆ ೧,೨೬,೭೦೪ ಫಲಾನುಭವಿಗಳಿಗೆ ಬಾಂಡ್ ನೀಡಲಾಗಿದೆ. ಹಾಗೂ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ೨೦೨೨-೨೩ನೇ ಸಾಲಿನಲ್ಲಿ ಜಿಲ್ಲೆಯ ೪೨೪೮ ಫಲಾನುಭವಿಗಳ ಖಾತೆಗೆ ಒಟ್ಟು ೪೮೯.೨೯ ಕೋ. ರೂಗಳ ಜಮಾ ಮಾಡಲಾಗಿದ್ದು, ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ೪ ಸ್ಥಾನ ಪಡೆಯಲಾಗಿದೆ.

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ೨೦೨೨-೨೩ನೇ ಸಾಲಿನಲ್ಲಿ ೨,೬೭,೧೮೩ ಫಲಾನುಭವಿಗಳಿಗೆ ೨,೨೧೪.೪ ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ.

ಮಾತೃಪೂರ್ಣ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ೨೪,೨೦೯ ಗರ್ಭಿಣಿಯರಿಗೆ ಹಾಗೂ ೨೩,೭೫೯ ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರ ವಿತರಿಸಲಾಗಿದೆ.

ಕ್ಷೀರಭಾಗ್ಯ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ೨,೬೬೨ ಅಂಗನವಾಡಿ ಕೇಂದ್ರಗಳಲ್ಲಿ ೨,೧೩,೯೩೨ ಮಕ್ಕಳಿಗೆ ಕೆನೆಸಹಿತ ಹಾಲು ವಿತರಿಸಲಾಗಿದೆ.


ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ:

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಒಟ್ಟು ೧೪ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ೯೭೫ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ ಮೊರಾರ್ಜಿ ದೇಸಾಯಿ ೭ ವಸತಿ ಶಾಲೆಗಳಲ್ಲಿ ೨,೩೬೦ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಕ್ರೆöÊಸ್ತರ ಅಭಿವೃದ್ಧಿ ಯೋಜನೆಯಡಿ ಸಮುದಾಯ ಭವನ ನಿರ್ಮಾಣಕ್ಕಾಗಿ ೨೦೨೨-೨೩ನೇ ಸಾಲಿನಲ್ಲಿ ೦೧ ಸಂಸ್ಥೆಗೆ ೧೫.೦೦ ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಅರಿವು ಶೈಕ್ಷಣಿಕ ಸಾಲದ ಯೋಜನೆಯಡಿ ಪ್ರತಿ ವರ್ಷಕ್ಕೆ ೧೦ಸಾವಿರ ದಿಂದ ೭೫ ಸಾವಿರದವರೆಗೆ ಸಾಲಸೌಲಭ್ಯ ಒದಗಿಸಲಾಗುತ್ತಿದೆ.


ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ:

ಅಮೃತ ಶಾಲಾ ಯೋಜನೆಯಡಿಯಲ್ಲಿ ಜಿಲ್ಲೆಗೆ ಒಟ್ಟು ೨೬೦.೦೦ಲಕ್ಷ ರೂ.ಗಳು ನಿಗಧಿಯಾಗಿದ್ದು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕ್ರಮವಹಿಸಲಾಗುತ್ತಿದೆ.

ನಬಾರ್ಡ್ ಸಹಯೋಗದಲ್ಲಿ ಜಿಲ್ಲೆಯ ೨೦೭ಶಾಲೆಗಳಲ್ಲಿ ೪೧೨ ಕೊಠಡಿಗಳ ಮರು ನಿರ್ಮಾಣಕ್ಕಾಗಿ ೪,೯೬೨.೦೦ಲಕ್ಷ ರೂ.ಅನುದಾನ ನಿಗಧಿಯಾಗಿದ್ದು, ಅದರಲ್ಲಿರೂ. ೪,೭೭೨.೧೯ ಲಕ್ಷಗಳ ಅನುದಾನ ಬಿಡುಗಡೆಯಾಗಿದ್ದು, ಇದುವರೆಗೂ ೩೭೬ ಕೊಠಡಿಗಳು ಪೂರ್ಣಗೊಂಡಿದ್ದು, ಉಳಿದವುಗಳು ವಿವಿಧ ಹಂತಗಳ ಪ್ರಗತಿಯಲ್ಲಿರುತ್ತದೆ.

ಸಮಾಜ ಕಲ್ಯಾಣ ಇಲಾಖೆ:

೨೦೨೨-೨೩ನೇ ಸಾಲಿಗೆ ಕಾರ್ಯಕ್ರಮಗಳಿಗೆ ವಾರ್ಷಿಕವಾಗಿ ಒಟ್ಟು ೪,೭೮೮.೪೭ ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿದ್ದು, ೨೦೧೦.೧೩ ಲಕ್ಷ ರೂ.ಗಳು ಬಿಡುಗಡೆ ಆಗಿರುತ್ತದೆ. ೭೦೭.೯೯ ಲಕ್ಷ ರೂ.ಗಳು ಖರ್ಚಾಗಿರುತ್ತವೆ.

ಜಿಲ್ಲೆಯಲ್ಲಿ ೩೫ ಮೆಟ್ರಿಕ್ ಪೂರ್ವ ಬಾಲಕರ, ೧೧ ಮೆಟ್ರಿಕ್ ಪೂರ್ವ ಬಾಲಕಿಯರ, ೧೬ ಮೆಟ್ರಿಕ್ ನಂತರ ಬಾಲಕರ, ೧೨ ಮೆಟ್ರಿಕ್ ನಂತರ ಬಾಲಕಿಯರ ಒಟ್ಟು ೭೪ ವಸತಿ ನಿಲಯಗಳು ಹಾಗೂ ೦೯ ಮೊರಾರ್ಜಿ ದೇಸಾಯಿ, ೦೨ ಕಿತ್ತೂರು ರಾಣಿ ಚೆನ್ನಮ್ಮ, ೦೪ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ೦೨ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಸೇರಿದಂತೆ ಒಟ್ಟು ೧೭ ವಸತಿ ಶಾಲೆಗಳು ನಿರ್ವಹಣೆಯಾಗುತ್ತಿವೆ.


ಜಿಲ್ಲಾ ನಗರಾಭಿವೃದ್ಧಿ ಕೋಶ:

ರಾಯಚೂರು ಜಿಲ್ಲೆಗೆ ನಗರೋತ್ಥಾನ ಹಂತ-೪ರ ಅಡಿಯಲ್ಲಿ ಜಿಲ್ಲೆಯ ೧೨ನಗರ ಸ್ಥಳೀಯ ಸಂಸ್ಥೆಗಳಿಗೆಮAಜೂರಿಯಾಗಿದ್ದು, ಅದರಲ್ಲಿ ೨ ನಗರಸಭೆಗಳಿಗೆ ೭೦ ಕೋಟಿ ರೂ. ೬ ಪುರಸಭೆಗಳಿಗೆ ತಲಾ ೧೦.೦೦ಕೋಟಿ ರೂ. ಹಾಗೂ ೫ ಪಟ್ಟಣ ಪಂಚಾಯತಗಳಿಗೆ ತಲಾ ೫.೦೦ ಕೋಟಿ ರೂ. ಅನುದಾನ ನಿಗಧಿಪಡಿಸಲಾಗಿರುತ್ತದೆ.


“ನಮ್ಮ ಜಿಲ್ಲೆಯಲ್ಲಿ ಕೈಗೊಂಡ ಈ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಾಕಾರಗೊಳಿಸುವಲ್ಲಿ ಇಲ್ಲಿಯ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸ್ಥಳೀಯ ಮಹಾಜನತೆ ನಮಗೆ ಸರ್ವ ರೀತಿಯಲ್ಲೂ ಸಹಕಾರ ನೀಡಿರುವುದನ್ನು ನಾನು ಅತ್ಯಂತ ಕೃತಜ್ಞತೆಯಿಂದ ಈ ಸಂದರ್ಭದಲ್ಲಿ ಸ್ಮರಿಸಬಯಸುತ್ತೇನೆ. ಇನ್ನು ಮುಂದೆಯೂ ಜಿಲ್ಲೆಯ ಪ್ರಗತಿಗೆ ನಾವೆಲ್ಲರೂ ಶ್ರಮಿಸುವ ಮೂಲಕ ದೇಶದ ಸರ್ವತೋಮುಖ ಪ್ರಗತಿಗೆ ನಾವು, ನೀವೆಲ್ಲಾ ಪ್ರಾಮಾಣಿಕವಾಗಿ ಕೊಡುಗೆ ನೀಡೋಣ ಎಂದರು. ಈ ಸಂದರ್ಭದಲ್ಲಿ  ಜನ ಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು ಇತರರು ಇದ್ದರು.   



Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್