ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ಕೇವಲ ಹಣ ಮೀಸಲಿರಿಸದೆ ಅಗತ್ಯ ಯೋಜನೆ ರೂಪಿಸಿ: ಸಿಎಂ ಬೊಮ್ಮಾಯಿ ಸಮಗ್ರ ಅಭಿವೃದ್ದಿಗೆ ದೃಷ್ಟಿ ಹರಿಸಲಿ-ರಾಯರೆಡ್ಡಿ


 ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ಕೇವಲ ಹಣ ಮೀಸಲಿರಿಸದೆ ಅಗತ್ಯ ಯೋಜನೆ ರೂಪಿಸಿ:

ಸಿಎಂ ಬೊಮ್ಮಾಯಿ ಸಮಗ್ರ ಅಭಿವೃದ್ದಿಗೆ ದೃಷ್ಟಿ ಹರಿಸಲಿ-ರಾಯರೆಡ್ಡಿ


ರಾಯಚೂರು,ಸೆ.೧೮-ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇವಲ ಹಣ ಮೀಸಲಿರಿಸದೆ ಅಗತ್ಯ ಯೋಜನೆ ರೂಪಿಸುವ ಮೂಲಕ ಈ ಭಾಗದ ಸಮಗ್ರ ಅಭೀವೃದ್ದಿಗೆ ದೃಷ್ಟಿ ಹರಿಸಬೇಕೆಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.


ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಇತ್ತೀಚೆಗೆ ಕಲಬುರ್ಗಿಯಲ್ಲಿ ಕಲ್ಯಾಣ ಕರ್ನಾಟಕ ಮಹೋತ್ಸವದಲ್ಲಿ ಸಿಎಂ ಕೆಕೆಅರ್‌ಡಿಬಿಗೆ ಮುಂದಿನ ವರ್ಷದಿಂದ ೫ ಸಾವಿರ ಕೋಟಿ ನೀಡುವ ಮಾತನಾಡಿದ್ದು ಅವರು ಕೇವಲ ಹಣ ನೀಡದರೆ ಸಾಲದು ಬದಲಾಗಿ ಈ ಭಾಗದ ಅಗತ್ಯತೆಗೆ ಅನುಗುಣವಾಗಿ ಯೋಜನೆ ರೂಪಿಸಬೇಕೆಂದು ಹೇಳಿದ ಅವರು ಶಾಸಕರ ಅಭಿಪ್ರಾಯ ಆಲಿಸಿ ಅವರೊಂದಿಗೆ ಚರ್ಚಿಸಿ ಹಣ ನೀಡದರೆ ಅನುದಾನ ಸದ್ಬಳಿಕೆಯಾಗುತ್ತದೆ ಎಂದರು.


ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಕೆಕೆಅರ್‌ಡಿಬಿ ಅಸ್ತಿತ್ವಕ್ಕೆ ಬಂದಿತು ಅವರು ಅನುದಾನ ನೀಡುವ ಮೂಲಕ ಈ ಬಾಗಕ್ಕೆ ವಿಶೇಷ ಕಾಳಜಿ ಮೆರೆದರು ನಂತರ ಬಂದ ಸರ್ಕಾರಗಳು ಕೆಕೆಅರ್‌ಡಿಬಿ ಬಗ್ಗೆ ನಿರ್ಲಕ್ಷö್ಯ ವಹಿಸಿದವು ಎಂದ ಅವರು ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ರಾಯಚೂರು ವಿವಿ ಸ್ಥಾಪನೆಗೆ ಹೆಜ್ಜೆಯಿಡಲಾಯಿತು ಈಗಿನ ಸರ್ಕಾರ ಅದಕ್ಕೆ ಸಮರ್ಪಕ ಅನುದಾನ ನೀಡದೆ ವಿವಿಗೆ ಬೆಳವಣಿಗೆಗೆ ಆಸಕ್ತಿ ವಹಿಸುತ್ತಿಲ್ಲವೆಂದರು.


ರಾಯಚೂರು ವಿವಿಗೆ ಒಂದು ನೂರು ಕೋಟಿ ಅನುದಾನ ಬೇಕಿತ್ತು ನಾನಿದ್ದಾಗ ಅದನ್ನು ಜಿಲ್ಲಾ ಅಭೀವೃದ್ದಿ ನಿಧಿಯಿಂದ ಪಡೆದುಕೊಳ್ಳುತ್ತೇನೆಂದು ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ತಿಳಿಸಿದ್ದೆ ಎಂದರು.


ಐಐಟಿ ಕೈತಪ್ಪಲು ರಾಜಕೀಯ ಇಚ್ಚಾಶಕ್ತಿ ವಿಫಲತೆ ಎಲ್ಲರೂ ಒಪ್ಪಿಕೊಳ್ಳಬೇಕೆಂದ ಅವರು ಐಐಟಿ ಬದಲಿಗೆ ಐಐಐಟಿ ಬಂದಿದೆ ಮುಂದೆ ನಾನು ಸಿಎಂ ಆದರೆ ಖಂಡಿತ ನಿಮಗೆ ಐಐಟಿ ನೀಡುತ್ತೇನೆಂದು ಹಾಸ್ಯಭರತಿತ ಶೈಲಿಯಲ್ಲಿ ಹೇಳಿದರು.


ಐಐಐಟಿಗೆ ಆರ್ ಟಿಪಿಎಸ್ ಪ್ರಾಯೋಜಕತ್ವದಲ್ಲಿ ಅಭೀವೃದ್ದಿಗೆ ಸರ್ಕಾರ ಚಿಂತಿಸಬೇಕೆಂದ ಅವರು ನನಗೆ ಈ ಭಾಗದ ಅಭಿವೃದ್ದಿ ಪಡಿಸುವುದು ಮುಖ್ಯ ವಿಷಯ ರಾಜಕೀಯ ಅಭೀವೃದ್ದಿಗೆ ಮಾರಕವಾಗಬಾರದೆಂದ ಅವರು ಮೆಹೆಬೂಬು ನಗರ ಮುನಿರಾಬಾದ್ ರೈಲ್ವೆ ಯೋಜನೆ ನಾನು ಎಂಪಿಯಾಗಿದ್ದಾಗ ಮುತುವರ್ಜಿ ವಹಿಸಿ ಚಾಲನೆ ನೀಡಲಾಯಿತು ಇಂದಿಗೂ ಅದು ಪೂರ್ಣ ಗೊಳ್ಳದಿರಲು ಸರ್ಕಾರ ಭೂಸ್ವಾಧೀನಕ್ಕೆ ನಿರ್ಲಕ್ಷö್ಯ ವಹಿಸಿರುವುದೆ ಕಾರಣವೆಂದರು.


ಹೈದ್ರಾಬಾದ ಕರ್ನಾಟಕ ವಿಮೋಚನೆಗೆ ಕಾಂಗ್ರೆಸ್ ಕೊಡುಗೆಯಿದೆ ಎಂದ ಅವರು ಈ ಭಾಗದ ಅಭೀವೃದ್ದಿಯಾಗಬೇಕಾದರೆ ಕಾಂಗ್ರೆಸ್ ಸರ್ಕಾರ ನೀಡಿರುವ ಅನುದಾನ ಕಾರಣವೆಂದರು.


ಈ ಸಂದರ್ಭದಲ್ಲಿ ರಜಾಕ ಉಸ್ತಾದ್ ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್