ನೇತ್ರದಾನ ಮೂಲಕ ತಾಯಿಯ ಅಂತಿಮ ಇಚ್ಛೆ ಪೂರೈಸಿದ ಮಕ್ಕಳ ಕಾರ್ಯಕ್ಕೆ ಶ್ಲಾಘನೆ


ನೇತ್ರದಾನ ಮೂಲಕ ತಾಯಿಯ ಅಂತಿಮ ಇಚ್ಛೆ ಪೂರೈಸಿದ ಮಕ್ಕಳ ಕಾರ್ಯಕ್ಕೆ ಶ್ಲಾಘನೆ

ರಾಯಚೂರು,ಸೆ.20-  ನೇತ್ರದಾನ ಮೂಲಕ ದೃಷ್ಟಿಹೀನರಿಗೆ ಹೊಸಬೆಳಕು ನೀಡುವ ಕನಸು ಕಂಡಿದ್ದ ನಿವೃತ್ತ ಮುಖ್ಯಶಿಕ್ಷಕಿ  ಲಕ್ಷ್ಮಿದೇವಿ  ನಿಧನರಾದರು. ಅವರ ಅಂತಿಮ ಇಚ್ಛೆಯಂತೆ ಮಕ್ಕಳಾದ ನ್ಯಾಯವಾದಿ ಎನ್. ಶಿವಶಂಕರ, ಎನ್ .ಜಯಶಂಕರ್, ಉಪಪ್ರಾಂಶುಪಾಲರಾದ  ಎನ್. ರಾಜಾಶಂಕರ ರವರುಗಳು ತಾಯಿಯ ನೇತ್ರದಾನ ಮೂಲಕ ಅವರ ಅಂತಿಮ ಇಚ್ಛೆ ಪೂರೈಸಿದ ಕಾರ್ಯಕ್ಕೆ ಸರ್ವತ್ರ ಶ್ಲಾಘನೆ .ವ್ಯಕ್ತವಾಗುತ್ತಿದೆ.

 ಸಾವಿನಲ್ಲೂ ಸಾರ್ಥಕತೆ ಕಾಣುವ ತಾಯಿಯ ಅಂತಿಮ ಇಚ್ಛೆ ಪೂರೈಸುವುದು ಮಕ್ಕಳ ಕರ್ತವ್ಯವಾಗಿದ್ದು ಇಬ್ಬರು ಅಂಧರಿಗೆ ಜಗತ್ತನ್ನು ನೋಡುವ ಭಾಗ್ಯ ನಮ್ಮ ತಾಯಿಯಿಂದ ಸಿಗುತ್ತಿರುವುದು ದುಃಖದಲ್ಲಿಯೂ ಸಮಾಧಾನ ತಂದಿದೆ ಎಂದು ಮಕ್ಕಳು ನುಡಿದರು.

  ನವೋದಯ ವೈದ್ಯಕೀಯ ವಿದ್ಯಾಲಯದ ನೇತ್ರ ವಿಭಾಗ ಮುಖ್ಯಸ್ಥರಾದ ಡಾ. ಅನುಪಮಾ ವಾಲ್ವೆಕರ ಮಾರ್ಗದರ್ಶನದಲ್ಲಿ ಡಾ. ನಿತಿನ್. ಡಾ. ಜಯಶ್ರೀ. ಡಾ. ಆಶೀಯಾ ನೇತ್ರದಾನ ಪ್ರಕ್ರಿಯೆ ಪೂರ್ಣಗೊಳಿಸಿದರು.



ದಾನವೆಂಬುದು ಶ್ರೇಷ್ಠ ಕಾರ್ಯವಾಗಿದ್ದು. ಮೃತ್ಯು ನಂತರ ದೇಹದಾನ ನೇತ್ರದಾನ ಮೂಲಕ ಮೃತ್ಯುಂಜಯರಾಗುವ  ಪದ್ಧತಿ ಸಾಮಾಜಿಕ ಪರಂಪರೆಯಾಗಬೇಕಿದ್ದು ಮಾತೋಶ್ರೀ ಲಕ್ಷ್ಮಿದೇವಿಯವರ ಇಚ್ಛೆ ಸರ್ವರಿಗೂ ಪ್ರೇರಣೆನೀಡುವಂತಾಗಿದೆ ಎಂದು ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿ ರಾಯಚೂರು ಜಿಲ್ಲಾಧ್ಯಕ್ಷ ಮತ್ತು ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ರಾಜೇಂದ್ರಕುಮಾರ ಶಿವಾಳೆ ಶ್ರದ್ಧಾಂಜಲಿ ಸಲ್ಲಿಸಿ ನುಡಿದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ