ಯುವ ಬ್ರಿಗೇಡ್ ನಿಂದ ಸೆ.೨೪ ರಂದು ಉಘೇ ಕಲ್ಯಾಣ ಕರ್ನಾಟಕ ಕಾರ್ಯಕ್ರಮ: ಚಕ್ರವರ್ತಿ ಸೂಲಿಬೆಲೆಯವರಿಂದ ದಿಕ್ಸೂಚಿ ಭಾಷಣ-ವರ್ಧಮಾನ್ ತ್ಯಾಗಿ
ಯುವ ಬ್ರಿಗೇಡ್ ನಿಂದ ಸೆ.೨೪ ರಂದು ಉಘೇ ಕಲ್ಯಾಣ ಕರ್ನಾಟಕ ಕಾರ್ಯಕ್ರಮ:
ಚಕ್ರವರ್ತಿ ಸೂಲಿಬೆಲೆಯವರಿಂದ ದಿಕ್ಸೂಚಿ ಭಾಷಣ-ವರ್ಧಮಾನ್ ತ್ಯಾಗಿ
ರಾಯಚೂರು,ಸೆ.೨೩-ಯುವ ಬ್ರಿಗೇಡ್ ಸಂಸ್ಥೆಯಿ0ದ ಸೆ.೨೪ ರಂದು ಉಘೇ ಕಲ್ಯಾಣ ಕರ್ನಾಟಕ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯುವ ಬ್ರಿಗೇಡ್ ಸಂಸ್ಥೆಯ ಉತ್ತರ ಕರ್ನಾಟಕ ಸಂಚಾಲಕ ವರ್ಧಮಾನ ತ್ಯಾಗಿ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸೆ.೨೪ ರಂದು ನಗರದ ಎಲ್‌ವಿಡಿ ಕಾಲೇಜು ಮುಂಭಾಗದ ಯಾದವ ಸಮಾಜದ ಮೈದಾನದಲ್ಲಿ ಸಂಜೆ ೬ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲಿ ದಿಕ್ಸೂಚಿ ಭಾಷಣ ಮಾಡಲಿದ್ದು ಕಲ್ಯಾಣ ಕರ್ನಾಟಕ ಕುರಿತು ಮಾತನಾಡಲಿದ್ದಾರೆಂದರು. ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಶ್ರೀಗಳು ವಹಿಸಲಿದ್ದಾರೆಂದರು.
ಈ ಹಿಂದೆ ಹೈದ್ರಾಬಾದ ಕರ್ನಾಟಕವೆಂದು ಕರೆಯಲ್ಪಡುತ್ತಿದ್ದ ಕಲ್ಯಾಣ ಕರ್ನಾಟಕದ ವಿಮೋಚನೆ ಕುರಿತು ಬೆಳಕು ಚೆಲ್ಲಲಿದ್ದಾರೆ ಎಂದರು.
ನಿಜಾಮ ಹೈದ್ರಾಬಾದ್ ಸಂಸ್ಥಾನ ಆಳವಿಕೆಯಲ್ಲಿ ಕಲ್ಯಾಣ ಕರ್ನಾಟಕ ನಲುಗಿ ಹೋಗಿತ್ತು ಮತಾಂತರ ಸೇರಿದಂತೆ ರಜಾಕಾರರ ದೌರ್ಜನ್ಯಕ್ಕೆ ಅನೇಕರು ನಲುಗಿದರು ತದನಂತರ ಸೆ.೧೭, ೧೯೪೮ ರಂದು ದೇಶದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭಬಾಯಿ ಪಟೇಲರು ಆಪರೇಷನ್ ಪೋಲೊ ಮುಖಾಂತರ ಭಾರತ ಒಕ್ಕೂಟದಲ್ಲಿ ಸೇರ್ಪಡೆಯಾಯಿತು ಎಂದರು.
ಈ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ದಿ ಬಗ್ಗೆಯೂ ಸೂಲಿಬೆಲೆ ಮಾತನಾಡಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಕೋರಿದರು. ಈ ಸಂದರ್ಭದಲ್ಲಿ ಯುವ ಬ್ರಿಗೇಡ ಜಿಲ್ಲಾಧ್ಯಕ್ಷ ಲಕ್ಷö್ಮಣ, ಬಸವರಾಜ ಇದ್ದರು.
Comments
Post a Comment