ಕಾಡ್ಲೂರಲ್ಲಿ ಗ್ರಾಮಾಂತರ ಖಾಸಗಿ ಶಾಲೆಗಳ ಒಕ್ಕೂಟ (ಗುಸ್ಮಾದಿಂದ) ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ: ಖಾಸಗಿ ಶಾಲೆಗಳ ಕಟ್ಟಡಗಳಿಗೆ ಸರ್ಕಾರದಿಂದ ಅನುದಾನ ನೀಡಲು ಸಿಎಂಗೆ ಪ್ರಸ್ತಾವನೆ-ದದ್ದಲ್
ಕಾಡ್ಲೂರಲ್ಲಿ ಗ್ರಾಮಾಂತರ ಖಾಸಗಿ ಶಾಲೆಗಳ ಒಕ್ಕೂಟ (ಗುಸ್ಮಾದಿಂದ) ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ:
ಖಾಸಗಿ ಶಾಲೆಗಳ ಕಟ್ಟಡಗಳಿಗೆ ಸರ್ಕಾರದಿಂದ ಅನುದಾನ ನೀಡಲು ಸಿಎಂಗೆ ಪ್ರಸ್ತಾವನೆ-ದದ್ದಲ್
ರಾಯಚೂರು,ಸೆ.೨೫- ಖಾಸಗಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ದೊರಕಿಸಿಕೊಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಗಿದೆ ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಹೇಳಿದರು.
ಅವರು ತಾಲೂಕಿನ ಕಾಡ್ಲೂರು ಗ್ರಾಮದ ಮೇಧಾ ಪಬ್ಲಿಕ್ ಶಾಲೆಯಲ್ಲಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಖಾಸಗಿ ಶಾಲೆಗಳ ಒಕ್ಕೂಟ (ಗುಸ್ಮಾ )ವತಿಯಿಂದ ಆಯೋಜಿಸಲಾದ ಶಿಕ್ಷಕರ
ದಿನಾಚರಣೆ ಹಾಗೂ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ಷೇತ್ರ ಬಲವರ್ಧನೆಗೆ ಖಾಸಗಿ ಶಾಲೆಗಳ ಪಾತ್ರ ಬಹುಮುಖ್ಯವಾಗಿದ್ದು ಖಾಸಗಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ನೀಡುವಂತೆ ಈ ಭಾಗದ ಎಲ್ಲ ಶಾಸಕರು ಮುಖ್ಯಮಂತ್ರಿಗಳಿಗೆ ಕೋರಿದ್ದು ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಲ್ಲಿ ಈ ಪ್ರಸ್ತಾವನೆ ಕೋರಲಾಗಿದ್ದು ಅದು ಕಾರ್ಯಗತವಾದರೆ ಅನುದಾನ ದೊರಕಿಸಿಕೊಡಲಾಗುತ್ತದೆ ಅಲ್ಲದೆ ತಮ್ಮ ಅನುದಾನದಲ್ಲಿಯೂ ಆರ್ಥಿಕ ಇತಿಮಿತಿಯಲ್ಲಿ ಅನುದಾನ ನೀಡುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಖಾಸಗಿ ಶಾಲೆಗಳು ನನ್ನ ಗ್ರಾಮಾಂತರ ಕ್ಷೇತ್ರದಲ್ಲಿ ಸುಮಾರು ೪೫ ಶಾಲೆಗಳಿದ್ದು ಈ ಶಾಲೆಗಳು ಗ್ರಾಮಾಂತರ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಶಿಕ್ಷಕರಿಗೆ ಉದ್ಯೋಗ ನೀಡುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಶ್ರಮಿಸುತ್ತಿವೆ ಹಾಗೂ ಇಂಗ್ಲೀಷ್ ಮಾಧ್ಯಮಗಳ ಮೂಲಕ ನಗರ ಪ್ರದೇಶಗಳ ಶಾಲೆಗಳಿಗೆ ಪೈಪೋಟಿ ನೀಡುವ ಹಂತಕ್ಕೆ ಬೆಳೆದಿದ್ದು ಇದೊಂದು ಉತ್ತಮ ಬೆಳೆವಣಿಗಿಯಾಗಿದೆ ಎಂದರು.
ಕರೋನಾ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳ ಪಾಲಕರಿಗೆ ಹೊರೆಯಾಗದೆ ತಮ್ಮ ಸೀಮಿತ ಸಂಪನ್ಮೂಲಗಳ ಪರಿಧಿಯಲ್ಲಿ ಉತ್ತಮ ಶಿಕ್ಷಣ ನೀಡಿವೆ ಎಂದ ಅವರು ಕಲ್ಯಾಣ ಕರ್ನಾಟಕ ಭಾಗದ
ಹಿಂದುಳಿವಿಕೆಯನ್ನು ದೂರಮಾಡಲು ೩೭೧ಜೆ ಅತ್ಯಂತ ಸಹಕಾರಿಯಾಗಿದ್ದು ಉದ್ಯೋಗ, ಶಿಕ್ಷಣ ಮತ್ತು ಅಭಿವೃದ್ದಿಗೆ ನಾವು ಆದ್ಯತೆ ನೀಡಬೇಕೆಂದರು.
ಕೇoದ್ರ ಸರ್ಕಾರದ ನೀತಿ ಆಯೋಗ ಯಾದಗೀರಿ ಮತ್ತು ರಾಯಚೂರು ಎರೆಡು ಜಿಲ್ಲೆಗಳನ್ನು ಮಹತ್ವಾಕಾಂಕ್ಷೆ ಜಿಲ್ಲೆಗಳೆಂದು ಆಯ್ಕೆ ಮಾಡಿಕೊಂಡು ಹೆಚ್ಚಿನ ಮುತುವರ್ಜಿ ವಹಿಸಿ ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಿದೆ ಎಂದ ಅವರು ನಮ್ಮ ದೇಶದ ಇತಿಹಾಸ ಮೆಲಕು ಹಾಕಿದಾಗ ಗ್ರಾಮಾಂತರ ಪ್ರದೇಶದಿಂದ ಬಂದು ಬಡತನ ಬೇಗೆಯಲ್ಲಿ ಬೆಂದವರು ಉನ್ನತ ಸ್ಥಾನಕ್ಕೇರಿದ್ದು ಉದಾಹರಣೆಗೆ ರಾಷ್ಟçಪತಿ ಎಪಿಜೆ ಅಬ್ದುಲ್ ಕಲಾಂ ಉತ್ತಮ ನಿದರ್ಶನ ಅಂತಹ ಅನೇಕೆ ಉದಾಹರಣೆ ಸಿಗುತ್ತವೆ ಎಂದರು.
ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಆಸ್ತಿ ಮಾಡದೆ ಉತ್ತಮ ಸಂಸ್ಕಾರ ಶಿಕ್ಷಣ ಮೂಲಕ ಅವರನ್ನೆ ಆಸ್ತಿಯನ್ನಾಗಿ ಮಾಡಿ ಸಮಾಜಕ್ಕೆ ಕೊಡುಗೆ ನೀಡಬೇಕೆಂದ ಅವರು ತಾವು ಗುಸ್ಮಾ ಒಕ್ಕೂಟಕ್ಕೆ ೧೦ ಲಕ್ಷ
ಅನುದಾನ ನೀಡಿದ್ದು ಅದರ ಸದ್ಬಳಿಕೆ ಮಾಡಿಕೊಳ್ಳಬೇಕೆಂದರು.
ಸಾನಿಧ್ಯ ವಹಿಸಿದ್ದ ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿ ಕಲ್ಯಾಣ ಕರ್ನಾಟಕ ಹಿಂದುಳಿದ ಭಾಗವೆಂ¨À ಹಣೆ ಪಟ್ಟಿ ಕಿತ್ತೋಗೆಯಬೇಕಾದರೆ ಶಿಕ್ಷಣ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ ಎಂದ ಅವರು ಖಾಸಗಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಅವಿರತ ಪ್ರಯತ್ನ ಮಾಡುತ್ತಿದ್ದು ಅದನ್ನು ಕೊಂಡಾಡಿದರು.
ಶಾಸಕ ಬಸನಗೌಡ ದದ್ದಲ್ ರವರು ಸದನದಲ್ಲಿ ಏಮ್ಸ್ ಹೋರಾಟದ ಬಗ್ಗೆ ಧ್ವನಿ ಎತ್ತಿದ್ದು ಈ ಭಾಗಕ್ಕೆ ಏಮ್ಸ್ ದೊರಕಬೇಕೆಂದ ಅವರು ಏಮ್ಸ್ ದೊರಕುವುದರಿಂದ ಆರೋಗ್ಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದಂತಾಗುತ್ತದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತೆದಾರ್ ಮಾತನಾಡಿ ಶಿಕ್ಷಕರು ಜಗತ್ತನ್ನು ಬೆಳೆಗುವ ಶಕ್ತಿಯಾಗಿದ್ದಾರೆ ಎಂದು ತಾವು ಸಹ ಶಿಕ್ಷಕ ವೃತ್ತಿ ಮಾಡಿದ್ದು ಇಂದಿನ ಕಾರ್ಯಕ್ರಮ ಸಂತಸ ಉಂಟುಮಾಡಿದ್ದು ತಮ್ಮ ಸಂತೋಷವನ್ನು ಹಾಡಿನ ಮೂಲಕ ಪ್ರಸ್ತುತಪಡಿಸಿದರು.
ಪ್ರಸ್ತಾವಿಕವಾಗಿ ಗುಸ್ಮಾ ಒಕ್ಕೂಟದ ಅಧ್ಯಕ್ಷ ಎಸ್.ರವಿಕುಮಾರ್ ಗೋನಾಳ ಮಾತನಾಡಿ ನಮ್ಮ ಕರೆಗೆ ಓಗೊಟ್ಟು ಆಗಮಿಸಿದ ಶಾಸಕರು, ಜನ ಪ್ರತಿನಿಧಿಗಳು ಗಣ್ಯರಿಗೆ ಅಭಿನಂದಿಸಿ ಗುಸ್ಮಾ ಒಕ್ಕೂಟ ಕಾರ್ಯವನ್ನು ತಿಳಿಸಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ಷೇತ್ರ ಸದೃಡಗೊಳಿಸಲು ಶ್ರಮಿಸುವುದಾಗಿ ಹೇಳಿದ ಅವರು ಶಾಸಕರು ಒಕ್ಕೂಟಕ್ಕೆ ಅನುದಾನ ನೀಡಿದನ್ನು ಶ್ಲಾಘಿಸಿದರು.
ಶಾಲಾ ಮಕ್ಕಳಿಂದ ಮನಮೋಹಕವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು ಉತ್ತಮ ಸಾಧನೆಗೈದ ಶಿಕ್ಷಕರಿಗೆ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆ ಮೇಲೆ ಮಲ್ಲಿಕಾರ್ಜುನ ತಾತಾ ಸರ್ಜಾಪೂರು, ಜಿ.ಪಂ ಮಾಜಿ ಸದಸ್ಯ ಸತೀಶ ಕುಮಾರ್, ಮಾಜಿ ತಾ.ಪಂ ಅಧ್ಯಕ್ಷ ಮಲ್ಲಗೌಡ, ತಾ.ಪಂ ಮಾಜಿ ಸದಸ್ಯ ಎಸ್.ಎಫ್. ಖಾದ್ರಿ, ಗುಲಬರ್ಗ ವಿವಿ ಸಿಂಡಿಕೇಟ ಸದಸ್ಯ ಶರಣಬಸವ ಪಾಟೀಲ ಜೋಳದಡಗಿ, ಕಾಡ್ಲೂರು ಸಂಸ್ಥಾನದ ಸುವರ್ಣಬಾಯಿ ರಾಘವೇಂದ್ರರಾವ್ ದೇಸಾಯಿ, ರಾಮಾಂಜಿನೇಯ, ಸಿದ್ದಣ್ಣ ಸಾಹುಕಾರ ,ಮಹಾದೇವಪ್ಪ ಸಾಹುಕಾರ, ಗ್ರಾ.ಪಂ ಉಪಾಧ್ಯಕ್ಷ ಸಾಧೀಕ, ಮುಖಂಡರಾದ ಪಂಪಾಪತಿ, ಶಶಿಕಲಾ ಭೀಮರಾಯ, ಪತ್ರಕರ್ತರಾದ ಜಯಕುಮಾರ್ ದೇಸಾಯಿ ಕಾಡ್ಲೂರು, ನರಸಿಂಗಪ್ಪ ಕಾಶಣ್ಣ ಅಮರ್, ಬಾಲಾಜಿ ಸಿಂಗ, ಮಾರೆಪ್ಪ ಸೇರಿದಂತೆ ಕಾಡ್ಲೂರು ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಗುಸ್ಮಾ ಒಕ್ಕೂಟದ ಪದಾಧಿಕಾರಿಗಳು ಇನ್ನಿತರರು ಇದ್ದರು.
ಪಾಂಡುರ0ಗ ಕಾಡ್ಲೂರು, ಸುರೇಶ ಆಲ್ಕೋಡ್ ನಿರೂಪಿಸಿದರು, ಮೂಕಪ್ಪ ಪ್ರಾರ್ಥಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.
Comments
Post a Comment