ರಾಯಲವಾಣಿ ನೂತನ ಕನ್ನಡ ದಿನ ಪತ್ರಿಕೆ ಬಿಡುಗಡೆ ಸಮಾರಂಭ: ಶೋಷಿತರ ಧ್ವನಿಯಾಗಿ ಪತ್ರಿಕಾರಂಗ ಕಾರ್ಯ ನಿರ್ವಹಿಸಲಿ-ನಟ ಚೇತನ್


 ರಾಯಲವಾಣಿ ನೂತನ ಕನ್ನಡ ದಿನ ಪತ್ರಿಕೆ ಬಿಡುಗಡೆ ಸಮಾರಂಭ:

ಶೋಷಿತರ ಧ್ವನಿಯಾಗಿ ಪತ್ರಿಕಾರಂಗ ಕಾರ್ಯ ನಿರ್ವಹಿಸಲಿ-ನಟ ಚೇತನ್

ರಾಯಚೂರು,ಸೆ.೨೫-ಶೋಷಿತರ ಧ್ವನಿಯಾಗಿ ಪತ್ರಿಕಾರಂಗ ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯವೆಂದು ನಾಯಕ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಭಿಪ್ರಾಯಪಟ್ಟರು.

ಅವರಿಂದು ಸಂಜೆ ನಗರದ ಸಿದ್ದರಾಮ ಜಂಬಲದಿನ್ನಿ ರಂಗಮoದಿರದಲ್ಲಿ ರಾಯಲವಾಣಿ ನೂತನ ಕನ್ನಡ ದಿನಪತ್ರಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಲ್ಯಾಣ ಕರ್ನಾಟಕದ ಭಾಗವಾಗಿರುವ ರಾಯಚೂರು ಅತ್ಯಂತ ಫಲಪ್ರದವಾಗಿರುವ ಪ್ರದೇಶವಾಗಿದೆ ಆದರೆ ಇಲ್ಲಿ ಈಗ ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ ಎಂದ ಅವರು ಅಪೌಷ್ಟಿಕತೆ ,ನಿರುದ್ಯೋಗ, ಆರ್ಥಿಕ ಅಸಮಾನತೆ ಮುಂತಾದ ತಾಪತ್ರಯದಿಂದ ಈ ಭಾಗ ಬಳಲುತ್ತಿದೆ ಎಂದರು.

ನಾನು ಅಮೇರಿಕದಲ್ಲಿ ವ್ಯಾಸಂಗ ಮಾಡಿ ಅಲ್ಲಿಯೆ ಐಷಾರಾಮಿ ಜೀವನ ನಡೆಸಬಹುದಿತ್ತು ಆದರೆ ನಾನು ಹುಟ್ಟಿ ಬೆಳೆದ ನಾಡಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಿAದ ಪುನಃ ತಾಯಿನಾಡಿಗೆ ವಾಪಸ್ಸು ಬಂದೆ ನಟನೆಯಲ್ಲಿ ಆಸಕ್ತಿ ಹಿನ್ನಲೆಯಲ್ಲಿ ಚಿತ್ರರಂಗದಲ್ಲಿ ನಾಯಕ ನಟನಾಗಿ ಆಭಿನಯಿಸುವ ಪಾತ್ರ ಲಭಿಸಿತು ನಿರ್ದೇಶಕರು, ನಿರ್ಮಾಪಕರು ಅನೇಕರ ಪರಿಶ್ರಮದಿಂದ ಅನೇಕ ಚಿತ್ರಗಳು ಯಶಸ್ಸು ಕಂಡವು ಎಂದರು.

ವೈಜ್ಞಾನಿಕತೆ ಮತ್ತು ವೈಚಾರಿಕತೆ ತಳಹದಿ ಮೇಲೆ ಸಮಾಜ ನಿರ್ಮಾಣವಾಗಬೇಕೆಂದ ಅವರು ಮೂಢನಂಬಿಕೆ ಕಂದಾಚಾರಕ್ಕೆ ನಾವೆಲ್ಲರೂ ವಿರೋಧ ವ್ಯಕ್ತಪಡಿಸಬೇಕೆಂದ ಅವರು ನಾನು ಯಾವುದೆ ಜಾತಿ ಮತ್ತು ಧರ್ಮದ ವಿರೋಧಿಯಲ್ಲ ಬದಲಾಗಿ ಶೋಷಣೆ ಮಾಡುವ ವ್ಯವಸ್ಥೆ ವಿರುದ್ಧ ನನ್ನ ಧ್ವನಿ ಸದಾಯಿರುತ್ತದೆ ಎಂದರು.

ಆಳುವ ಸರ್ಕಾರ ಶಾಲೆಗಳಲ್ಲಿ ಭಗವದ್ಗೀತೆ ಹೇಳುತ್ತೇವೆ ಎನ್ನುತ್ತಾರೆ ವಿರೋಧ ಪಕ್ಷಗಳು ಅದನ್ನು ವಿರೋಧಿಸದೆ  ಇನ್ನಿತರ ಧರ್ಮ ಗ್ರಂಥಗಳ ಬೋಧನೆಯೂ ಮಾಡಿ ಎನ್ನುತ್ತಾರೆ ಹೊರತು ಶಿಕ್ಷಣದಲ್ಲಿ ಒಂದೆ ಧರ್ಮ ಬೋಧನೆ ಏಕೆ ಎಂದು ಪ್ರಶ್ನಿಸುವುದಿಲ್ಲವೆಂದ ಅವರು ಸರ್ಕಾರದ ನೀತಿ ಜನರ ವಿರುದ್ದವಾದಾಗ ನಾನು ಪ್ರತಿಭಟಿಸುತ್ತೇನೆಂದರು.

ಇತ್ತೀಚೆಗೆ ಕೋಲಾರ ಜಿಲ್ಲೆಯಲ್ಲಿ ದಲಿತ ಬಾಲಕಿಗೆ ದೇವಸ್ಥಾನ ಪ್ರವೇಶ ಮಾಡಿದಳೆಂದು ಹಲ್ಲೆ ಮಾಡಲಾಯಿತು ತದನಂತರ ಅದು ತಿಳಿದು ನಾವೆಲ್ಲರೂ ತೆರಳಿ ಅದರ ವಿರುದ್ದ ಧ್ವನಿಯತ್ತಿದೆವೆಂದ ಅವರು ಕುವೆಂಪು ಸಾರಿದ ವಿಶ್ವ ಮಾನವ ಕಲ್ಪನೆ ಅಡಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕೆಂದರು.

ಶಾಸಕ ಕೆ.ಶಿವನಗೌಡ ನಾಯಕ ಮಾತನಾಡಿ ನನ್ನ ಮತಕ್ಷೇತ್ರವಾದ ಗಬ್ಬೂರಿನ ಆಲಂಘಣನಿ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಹಿರಿಯ ಪತ್ರಕರ್ತ ಹೆಚ್.ವೀರನಗೌಡರ ಸಂಪಾದಕತ್ವದಲ್ಲಿ ರಾಯಲವಾಣಿ ನೂತನ ದಿನಪತ್ರಿಕೆ ಹೊರಬರುತ್ತಿದ್ದು ಅದಕ್ಕೆ ಶುಭಾಶಯ ವ್ಯಕ್ತಪಡಿಸಿದ ಅವರು ಹೆಸರಿಗೆ ತಕ್ಕಂತೆ ಸಮಾಜಮುಖಿಯಾಗಿ ರಾಯಲ ಪದದಂತೆ ಕಂಗೊಳಿಸಲಿ ಎಂದ ಅವರು ದಿನಪತ್ರಿಕೆ ನಡೆಸುವುದು ಸುಲಭದ ಕೆಲಸವಲ್ಲ ಈ ಹಿಂದೆ ನಾನು ಚಿಕ್ಕವನಾಗಿದ್ದಾಗ ಬಸವರಾಜ ಸ್ವಾಮಿಗಳ ಸುದ್ದಿಮೂಲ ಪತ್ರಿಕೆ ಪ್ರಾರಂಭವಾಯಿತು ಅದು ಈಗ ಈ ಭಾಗದ ಪ್ರಖ್ಯಾತ ಪತ್ರಿಕೆಯಾಗಿ ರೂಪುಗೊಳ್ಳಬೇಕಾದರೆ ಪತ್ರಿಕೆ ಸಂಪಾದಕರ, ವರದಿಗಾರರ ,ಸಿಬ್ಬಂದಿಗಳ ಪರಿಶ್ರಮ ಕಾರಣವೆಂದರು.ರಾಯಲ ಪತ್ರಿಕೆ ಸಮಾಜದ ಬೆಳಕಾಗಲಿ ಎಂದ ಹಾರೈಸಿದರು.

ನಟ ಚೇತನ್‌ರವರನ್ನು ಟೀವಿಯಲ್ಲಿ ನೋಡಿದ್ದೆ ಅವರ ಅಭಿನಯ ಮೆಚ್ಚಿಕೊಂಡಿದ್ದೆ ಇಂದು ಅವರು ಮುಖತಃ ಭೇಟಿಯಾಗಿದ್ದು ಸಂತಸ ತಂದಿದ್ದು ಅವರ ಸಾಮಾಜಿಕ ಚಿಂತನೆ ಜೊತೆಗೆ ಎಸ್ಟಿ ಸಮುದಾಯಕ್ಕೆ ಮೀಸಲಾತಿ ದೊರಕಬೇಕೆನ್ನುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಅವರಿಗೆ ಧನ್ಯವಾದ ಅರ್ಪಿಸುತ್ತೇನೆಂದರು.

ಗ್ರಾಮೀಣ ಶಾಸಕ ದದ್ದಲ ಬಸನಗೌಡ ಮಾತನಾಡಿ ಈಗಿನ ಆಧುನಿಕತೆ ಭರಾಟೆಯಲ್ಲಿ ಮೊಬೈಲ್ ಯುಗದಲ್ಲಿ ತತಕ್ಷಣದಲ್ಲಿ ಸುದ್ದಿಗಳು ದೊರಕುತ್ತವೆ ಆದರೆ ಇಂದಿಗೂ ಸಹ ಮುದ್ರಣ ಮಾಧ್ಯಮಕ್ಕೆ ಇರುವ ಮೌಲ್ಯ ಕುಸಿತವಾಗಿಲ್ಲ ಎಷ್ಟೆ ತಂತ್ರಜ್ಞಾನ ಬೆಳೆದರು ಪತ್ರಿಕೆ ಓದುವ ಖುಷಿ ಆಗಾಧವಾಗಿದೆ ಎಂದ ಅವರು ಚೇತನರವರ ಜನಪರ ಕಾಳಜಿಯನ್ನು ಕೊಂಡಾಡಿದರು.

ನಿರ್ಮಾಪಕ ಹಾಗೂ ಕಾಂಗ್ರೆಸ್ ಮುಖಂಡ ಸಂಜಯಗೌಡ ಮಾತನಾಡಿ ಪತ್ರಿಕೆ ನಡೆಸುವುದು ಕ್ಲಿಷ್ಟಕರ ಸಂಗತಿಯಾಗಿದೆ ಆದರೆ ಓದುಗರ ಬೆಂಬಲ ಮತ್ತು ಸತ್ಯನಿಷ್ಟ ವರದಿಗೆ ಸದಾ ಸಮಾಜ ಬೆಂಬಲ ಸೂಚಿಸುತ್ತದೆ ಎಂದ ಅವರು ರಾಯಚೂರು ಜನರು ರಾಯಲವಾಣಿಗೆ ಸದಾ ಬೆನ್ನೆಲುಬಾಗಿರುತ್ತಾರೆಂದರು.

ರೈತ ಹೋರಾಟಗಾರ್ತಿ ರೂಪಾ ಶ್ರೀನಿವಾಸ್ ಮಾತನಾಡಿ ಚೇತನರವರ ಹೋರಾಟ ನಮಗೆಲ್ಲರಿಗೂ ಸ್ಪೂರ್ತಿ ನೀಡುತ್ತದೆ ಎಂದ ಅವರು ನಾನು ಸಹ ಅನೇಕ ಹೋರಾಟ ಮಾಡುತ್ತೇನೆ ಜನರಿಗೆ ನಮ್ಮ ಹೋರಾಟ ತಲುಪಿಸುವ ಕಾರ್ಯ ಪತ್ರಿಕೆಗಳು ಮಾಡುತ್ತಿರುವುದು ಶ್ಲಾಘನೀಯ ಕಾರ್ಯವೆಂದರು.

ಹಿರಿಯ ಪತ್ರಕರ್ತ ಹಾಗೂ ಕಂಪಿಲವಾಣಿ ಪತ್ರಿಕೆ ಸಂಪಾದಕ ಭೀಮರಾಯ ಹದ್ದಿನಾಳ ಮಾತನಾಡಿ ಹೊಸ ಪತ್ರಿಕೆ ತೆರೆಯಲು ಅದಕ್ಕೆ ಲೈಸನ್ಸ್(ಟೈಟಲ್) ಪಡೆಯುವುದು ಸುಲಭ ಮತ್ತು ಅಗ್ಗ ಆದರೆ ಟೈಟಲ್ ದೊರೆತ ನಂತರ ಪತ್ರಿಕೆ ನಡೆಸುವುದು ಅತ್ಯಂತ ದುಬಾರಿ ವೆಚ್ಚದ ಕೆಲಸವಾಗಿದ್ದು ನಿಮ್ಮಲ್ಲಿ ಛಲ ಮತ್ತು ಪರಿಶ್ರಮವಿದ್ದರೆ ಮತ್ತು ಓದುಗರ ವಿಶ್ವಾಸ ಗಳಿಸಿದರೆ ಪತ್ರಿಕೆ ಯಶಸ್ವಿಯಾಗಿ ನಡೆಯುತ್ತದೆ ಎಂದರು.

ಮಾಧ್ಯಮ ರಂಗ ತಾನೆ ತೀರ್ಪುಗಾರರಾಗದೆ ಸುದ್ದಿಯನ್ನು ಪರಾಮರ್ಶಿಸಬೇಕೆಂದ ಅವರು ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆ ಪ್ರಕರಣದಲ್ಲಿ ಮಾಧ್ಯಮಗಳು ಅವಸರದ ಸುದ್ದಿ ಬಿತ್ತರಿಸಿದವು ಎಂದು ಕಳವಳ ವ್ಯಕ್ತಪಡಿಸಿ ಅದಕ್ಕೆ ಯಾರು ಹೊಣೆ ಎಂದರು.

ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಶ್ರೀಗಳು ವಹಿಸಿದ್ದರು, ವೇದಿಕೆ ಮೇಲೆ ಹಿರಿಯ ಪತ್ರಕರ್ತ ಬಿ.ವೆಂಕಟಸಿಂಗ್, ಎಂ.ಈರಣ್ಣ, ರವಿ ಪಾಟೀಲ, ರಾಮನಗೌಡ ಏಗನೂರು, ಎನ್.ಶಿವಶಂಕರ ವಕೀಲ, ರಾಯಚೂರು ಸಂಜೆ ಸಂಪಾದಕ ಚೆನ್ನಬಸವ ಬಾಗಲವಾಡ್, ಜಂಬಣ್ಣ ನೀಲಗಲ್, ಶಿವಪ್ಪ ನಾಯಕ, ಆಲಂಘನಿ ,ಹೆಚ್. ವೀರನಗೌಡ, ಅಂಬಣ್ಣ ಅರೋಲಿಕರ್ ಸೇರಿದಂತೆ ಅನೇಕ ಮುಖಂಡರು ಇದ್ದರು.


 

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್