ಸದೃಢ ಭಾರತ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದಾಗಿದೆ- ವೇಣುಗೋಪಾಲ

 




ಸದೃಢ ಭಾರತ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದಾಗಿದೆ-ವೇಣುಗೋಪಾಲ

ರಾಯಚೂರು,ಸೆ.26-  ಸದೃಢ ಭಾರತ ನಿರ್ಮಾಣದಲ್ಲಿ  ಶಿಕ್ಷಕರ ಪಾತ್ರ ಬಹಳ ಮಹತ್ವದಾಗಿದ್ದು, ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿ ಗುರುತಿಸಿ  ಪ್ರೋತ್ಸಾಹಿಸುವ ಕಾರ್ಯ ಶಿಕ್ಷಕರಿಂದ ಎಂದು ರಾಮಕೃಷ್ಣ ಆಶ್ರಮದ ಸಂಚಾಲಕ ಪಿ ವೇಣುಗೋಪಾಲ ಅವರು ಹೇಳಿದರು.

ಅವರು ಇತ್ತಿಚೆಗೆ ಲಾಯನ್ಸ ಕ್ಲಬ್ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಅಂಗವಾಗಿ  ಜಿಲ್ಲೆಯ ಶಿಕ್ಷಕರನ್ನು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿ, ಶಾಲಾ ವಾತಾವರಣದಲ್ಲಿ ಯಾವುದೇ ತಾರತಮ್ಯವಿಲ್ಲದೇ ವಿವಿಧ ಜಾತಿ ,ಮತ ಧರ್ಮಗಳ ವಿದ್ಯಾರ್ಥಿಗಳು ಸಮಾನವಾಗಿ ಕಲಿಯುವಂತಹ ಅವಕಾಶಗಳನ್ನು   ಸೃಷ್ಟಿಸುವದರಿಂದ ಮುಂದಿನ ನಾಗರಿಕರನ್ನು ಸುಸಂಸ್ಕೃತಗೊಳಿಸುವುದರ ಜೊತೆಗೆ ಅವರ ಸರ್ವಾಂಗೀಣ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರವಾಗಿದೆ.


ಮಕ್ಕಳ ಸರ್ವಾಂಗೀಣ  ಅಭಿವೃದ್ಧಿಯಲ್ಲಿ ಶಿಕ್ಷಕರು   ಮೂಲ ಬುನಾದಿಯಾಗಿದ್ದು, ಅವರಿಗೆ ನಮ್ಮ ಸಂಸ್ಕೃತಿಯ ಪರಿಚಯಿಸಿ  ಸಮಾಜದಲ್ಲಿ ಉತ್ತಮ ಸುಸಂಸ್ಕೃತ ವ್ಯಕ್ತಿಯನ್ನಾಗಿಸು ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು

 ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ. ಎಂ ವೃಷಭೇಂದ್ರಸ್ವಾಮಿ  ಮಾತನಾಡಿ, ಇಂದು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತಲು ಚೆನ್ನಾಗಿವೆ,  ಖಾಸಗಿ ಶಾಲೆಯ ಸಕಲ ಸೌಲಭ್ಯ ಸರ್ಕಾರಿ ಶಾಲೆಗಳು ಹೊಂದಿದ್ದು,

ಪ್ರತಿಭಾವಂತ ಶಿಕ್ಷಕರನ್ನು ಹೊಂದಿದ್ದೇವೆ. ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳ ಪ್ರತಿಭೇಯನ್ನು ಹೊರತೆಗೆಯುಂತಹ ಕೆಲಸವನ್ನು ಶಿಕ್ಷಕರು ಮಾಡಬೇಕು, ಜಿಲ್ಲೆಯ ಸಾಧಕ ಶಿಕ್ಷಕರನ್ನು ಗುರುತಿಸಿ ಪ್ರತಿವರ್ಷವೂ ಅವರನ್ನು ಸನ್ಮಾನಿಸುತ್ತಿರುವ ಲಾಯನ್ಸ ಕ್ಲಬ್ ಕಾರ್ಯ

 ಶ್ಲಾಘನೀಯ  ಎಂದರು

ಸಮಾರಂಭದಲ್ಲಿ ಜಿಲ್ಲೆಯ  9 ಶಿಕ್ಷಕರನ್ನು ಇಂಜಿನಿಯರಗಳ ದಿನಾಚರಣೆ ನಿಮಿತ್ತ ಇಬ್ಬರು ಪರಿಣಿತಿ ಇಂಜಿನಿರಗಳನ್ನು ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ  ಲಾಯನ್ಸ ಕ್ಲಬ್ ಅದ್ಯಕ್ಷ ಲಾಯನ್ ಮಲ್ಲಿಕಾರ್ಜುನ ಬಾಳಿ , ಲಾಯನ್ಸ ಶಾಲೆಯ ಟ್ರಸ್ಟ್ ನ ಅದ್ಯಕ್ಷ ಲಾಯನ್ ಶರಣಭೂಪಾಲ್ ನಾಡಗೌಡ ,ಲಾಯನ್ ಕಾರ್ಯದರ್ಶಿ ಕೆ ಎಮ್ ಪಾಟೀಲ್,ಲಯನ್ ಅಶೋಕ ಪಾಟೀಲ ಅತ್ನೂರ,  ಲಯನ್ ಗೋವಿಂದ ರಾಜು, ಲಯನ್ ಹನುಮಂತರಾವ್, ಲಯನ್ ಹೇಮಣ್ಣ ಉಣ್ಣಿ, ಲಯನ್ ವೀರಭೂಷಣಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.


 ವಲಯ ಅದ್ಯಕ್ಷ ಲಾಯನ್ ಡಾ ವಾಯ್ ವೆಂಕಟೇಶ್ ನಾಯಕ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಲಾಯನ್ಸ ಕ್ಲಬ್ ಅನೇಕ ದಶಕಗಳಿಂದ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ,ವರ್ಷಪೂರ್ತಿ ಅನೇಕ ಸೇವೆ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದು ಹೇಳಿದರು.


ಲಾಯನ್ಸ ಕ್ಲಬ್ ಖಜಾಂಚಿ ಲಾಯನ್ ಪರಿಟಾಲ ರಾಮು , ಬಸವರಾಜ ಗದಗಿನ್ ,ಕಾರ್ಯದರ್ಶಿ ಲಾಯನ್ ರಾಜೇಂದ್ರ ಕುಮಾರ್ ಶಿವಾಳೆ,ಶಾಲೆಯ ಮುಖ್ಯ ಶಿಕ್ಷಕಿಯಾದ ರಜನಿ ರೆಡ್ಡಿ, ಇನ್ನಿತರು ಮತ್ತು ಲಾಯನ್ಸ ಸದಸ್ಯರು ಉಪಸ್ಥಿತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್