ಬಿಜೆಪಿ ಸರ್ಕಾರದಲ್ಲಿ ಭ್ರಹ್ಮಾಂಡ ಬ್ರಷ್ಠಾಚಾರವಿದೆ: ಪ್ರಧಾನಿ ಹುದ್ದೇಗೆ ರಾಹುಲ್ ಗಾಂಧಿ ಸಮರ್ಥ ವ್ಯಕ್ತಿ-ಖಂಡ್ರೆ
ಬಿಜೆಪಿ ಸರ್ಕಾರದಲ್ಲಿ ಭ್ರಹ್ಮಾಂಡ ಭ್ರಷ್ಠಾಚಾರವಿದೆ:
ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ಸಮರ್ಥ ವ್ಯಕ್ತಿ-ಖಂಡ್ರೆ
ರಾಯಚೂರು,ಸೆ.೨೬-ಪ್ರಧಾನ ಮಂತ್ರಿ ಹುದ್ದೆಗೆ ರಾಹುಲ ಗಾಂಧಿ ಸಮರ್ಥ ವ್ಯಕ್ತಿಯಾಗಿದ್ದು ಮೋದಿಯವರನ್ನು ರಾಜಕೀಯವಾಗಿ ಎದುರಿಸಲು ಸೂಕ್ತ ವ್ಯಕ್ತಿಯಾಗಿದ್ದಾರೆಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಅವರಿಂದು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾರತ ಐಕ್ಯತಾ ಯಾತ್ರೆಯ ಪೂರ್ವಭಾವಿ ಸಭೆ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ರಾಹುಲ ಗಾಂಧಿ ಭಾರತದಲ್ಲಿ ಸಾಮರಸ್ಯ ಮೂಡಿಸಲು ಬಡವರಿಗೆ ಶಕ್ತಿ ತುಂಬಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಕೈಗೊಂಡಿದ್ದು ಸುಮಾರು ೩೫೭೦ ಕಿ.ಮಿ ಕ್ರಮಿಸಲಿದ್ದು ರಾಜ್ಯಕ್ಕೆ ಸೆ.೩೦ಕ್ಕೆ ಚಾಮರಾಜನಗರ ಮೂಲಕ ಪ್ರವೇಶ ಮಾಡಲಿದ್ದು ರಾಜ್ಯದ ಎಂಟು ಜಿಲ್ಲೆಗಳಲ್ಲಿ ಅವರು ಹಾದುಹೋಗಲಿದ್ದು ಕಲ್ಯಾಣ ಕರ್ನಾಟಕದ ಬಳ್ಳಾರಿಗೆ ಅ.೧೮ ಅಥವಾ ೧೯ ಆಗಮಿಸಲಿದ್ದು ಸುಮಾರು ೫ ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದರು.
ರಾಯಚೂರು ಜಿಲ್ಲೆಗೆ ಅ.೨೧ ಅಥವಾ ೨೨ ಆಗಮಿಸಲಿದ್ದು ಗ್ರಾಮೀಣ ವಿಧಾನಸಭಾ ಕ್ಷೇತ್ರ ಮತ್ತು ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು ೫೧ ಕಿ.ಮಿ ಕ್ರಮಿಸಲಿದ್ದು ಎರೆಡು ದಿನಗಳ ಕಾಲ ಜಿಲ್ಲೆಯಲ್ಲಿ ಕ್ರಮಿಸಲಿದ್ದಾರೆಂದ ಅವರು ಒಟ್ಟಾರೆ ಕಲ್ಯಾಣ ಕರ್ನಾಟಕದ ೪೧ ಕ್ಷೇತ್ರಗಳಲ್ಲಿ ಅವರು ಸಂಚರಿಸಲಿದ್ದು ರಾಯಚೂರು ಜಿಲ್ಲೆಯಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಯಾದಗೀರಿ, ಕಲ್ಬುರ್ಗಿ, ಬೀದರ್ ಜಿಲ್ಲೆಯ ಜನರು ಇದರಲ್ಲಿ ಭಾಗವಹಿಸಲಿದ್ದಾರೆಂದರು.
ಭಾರತ ಐಕ್ಯತೆಯಾತ್ರೆ ಕೇವಲ ಪಕ್ಷದ ಬಲವರ್ಧನೆಗೆ ಮಾತ್ರವಲ್ಲ ದೇಶದಲ್ಲಿ ದಿನನಿತ್ಯ ಆಗುತ್ತಿರುವ ಶೋಷಣೆ ಧರ್ಮಗಳ ನಡುವಿನ ಸಂಘರ್ಷ ಇಂಧನ ಮತ್ತು ದಿನಬಳಿಕೆ ವಸ್ತುಗಳ ದರ ಏರಿಕೆ ಬಗ್ಗೆ ಜನರೊಂದಿಗೆ ಸಂವಾದ ಸಹ ನಡೆಸಲಾಗುತ್ತದೆ ದೇಶದ ಬೆನ್ನೆಲುಬಾದ ರೈತರೊಂದಿಗೆ ಸಂವಾದ ನಡೆಸಿ ರೈತರ ಕಲ್ಯಾಣಕ್ಕೆ ಮಾಡಬೇಕಾದ ಕಾರ್ಯದ ಬಗ್ಗೆ ಅರಿತುಕೊಳ್ಳಲಾಗುತ್ತದೆ ಎಂದರು.
ಕಲ್ಯಾಣ ಕರ್ನಾಟ ಭಾಗಕ್ಕೆ ಕಾಂಗ್ರೆಸ್ ಸರ್ಕಾರ ೩೭೧ಜೆ ತಿದ್ದುಪಡಿ ಮಾಡುವ ಮೂಲಕ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ನೀಡಿತು ಆದರೆ ಬಿಜೆಪಿ ಸರ್ಕಾರ ಈ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದ ಅವರು ಶೇ.೪೦ ರಷ್ಟು ಕಮೀಷನ್ ಪಡೆಯುವ ಅತಿ ಭ್ರಷ್ಟ ಸರ್ಕಾರವೆಂದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ ಇದು ನಾಚಿಕೆಗೇಡಿನ ಸಂಗತಿ ಎಂದರು.
ಗಾಂಧೀ ಕುಟುಂಬ ದೇಶಕ್ಕೆ ಪ್ರಾಣ ಅರ್ಪಿಸಿದೆ ಜವಾಹರ್ ಲಾಲ್ ನೆಹರು ಸಮರ್ಥವಾಗಿ ದೇಶವನ್ನು ಮುನ್ನೆಡಿಸಿದ್ದರು ನಂತರ ಇಂದಿರಾಗಾಂಧಿ, ರಾಜೀವಗಾಂಧಿ ತಮ್ಮ ಜೀವ ಬಲಿದಾನ ಮಾಡುವ ಮೂಲಕ ಅಪಾರವಾದ ದೇಶಪ್ರೇಮ ಮೆರೆದಿದ್ದಾರೆ ಬಿಜೆಪಿಯ ಒಬ್ಬರು ಸಹ ದೇಶಕ್ಕೆ ಜೀವ ನೀಡಿಲ್ಲವೆಂದ ಅವರು ದೇಶದಲ್ಲಿ ಕೋಮುಭಾವನೆ ಮೂಲಕ ಒಡೆದಾಳುವ ನೀತಿ ಬಿಜೆಪಿ ಅನುಸರಿಸುತ್ತಿದೆ ಮೋದಿ ಅಮಿತ್ ಶಾ ದೇಶವನ್ನು ಛಿದ್ರ ಮಾಡಿದ್ದಾರೆಂದು ಆರೋಪಿಸಿದರು.
ಭ್ರಷ್ಟಾಚಾರ ಅರೋಪ ಮಾಡಿದರೆ ಅದನ್ನು ಜಾತಿ ಧರ್ಮಕ್ಕೆ ಜೋಡಿಸಿ ಕಾಂಗ್ರೆಸ್ ಲಿಂಗಾಯಿತ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ದೂರಲಾಗುತ್ತಿದೆ ನಾನು ಲಿಂಗಾಯಿತನಲ್ಲವೆ ನನಗೆ ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡಲಾಗಿಲ್ಲವೆ, ಹಿಂದೆ ನಿಜಲಿಂಗಪ್ಪರನ್ನು ಸಿಎಂ ಮಾಡಿದ್ದು ಕಾಂಗ್ರೆಸ್ ನಂತರ ವಿರೇಂದ್ರ ಪಾಟೀಲ ಮುಂತಾದವರು ಸಿಎಂ ಆಗಿದ್ದಾರೆ ಕಾಂಗ್ರೆಸ್ ಹೇಗೆ ಲಿಂಗಾಯಿತ ವಿರೋಧಿಯಾಗಿದೆ ಎಂದು ಪ್ರಶ್ನಿಸಿದ ಅವರು ಬಿಜೆಪಿ ಪ್ರಶ್ನಾತೀತ ನಾಯಕ ಬಿಎಸ್‌ವೈರನ್ನು ಏಕಾಏಕಿ ಸಿಎಂ ಹುದ್ದೆಯಿಂದ ನಿರ್ಗಮಿಸುವಂತೆ ಮಾಡಿದ ಬಿಜೆಪಿ ಲಿಂಗಾಯಿತ ವಿರೋಧಿಯಾಗಿದೆ ಎಂದರು.
ಬಿಜೆಪಿಯಲ್ಲಿ ಹಿರಿಯರಿಗೆ ಮನ್ನಣೆ ಗೌರವ ನೀಡುವುದಿಲ್ಲ ಪಕ್ಷ ಕಟ್ಟಿದ ಎಲ್.ಕೆ.ಆಡ್ವಾನಿ ಯವರನ್ನು ಮೂಲೆ ಗುಂಪು ಮಾಡಿದ ಬಿಜೆಪಿ ನಮ್ಮ ಬಗ್ಗೆ ಮಾತನಾಡುವುದಕ್ಕೆ ನೈತಿಕತೆ ಉಳಿದಿಲ್ಲವೆಂದ ಅವರು ಜಿಲ್ಲೆಯಲ್ಲಿ ಪಕ್ಷದ ನಿಷ್ಟಾವಂತರಿಗೆ ಟಿಕೆಟ್ ದೊರೆಯಲಿದ್ದು ಹೈಕಮಾಂಡ್ ಸೂಕ್ತ ವ್ಯಕ್ತಿಗೆ ಟಿಕೆಟ್ ನೀಡುತ್ತದೆ ಎಲ್ಲರೂ ಪಕ್ಷ ಸೂಚಿಸುವ ಅಭ್ಯರ್ಥಿಗಳ ಗೆಲವಿಗೆ ಶ್ರಮಿಸಲಿದ್ದಾರೆಂದರು.
ಎಐಸಿಸಿ ಕಾರ್ಯದರ್ಶಿ ಹಾಗೂ ಪಕ್ಷದ ಕಲ್ಯಾಣ ಕರ್ನಾಟಕ ಉಸ್ತುವಾರಿ ಶ್ರೀಧರ್ ಬಾಬು ಮಾತನಾಡಿ ಭಾರತ ಐಕ್ಯತೆ ಯಾತ್ರೆಗೆ ಎಲ್ಲರ ಬೆಂಬಲ ಬೇಕು ಮಾಧ್ಯಮ ಸಹ ಜನರ ಆಶೋತ್ತರಗಳೀಗೆ ಸ್ಪಂದಿಸಿ ಪಕ್ಷದ ಕಾರ್ಯಕ್ರಮ ಯಶಸ್ಸಿಗೆ ಕೋರಿದರು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು, ಶಾಸಕರಾದ ದದ್ದಲ ಬಸನಗೌಡ, ಡಿ.ಎಸ್.ಹೂಲಗೇರಿ, ಬಸನಗೌಡ ತುರ್ವಿಹಾಳ, ಮಾಜಿ ಶಾಸಕರಾದ ಸೈಯದ್ ಯಾಸೀನ, ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ, ಕೆಪಿಸಿಸಿ ಕಾರ್ಯದರ್ಶಿ ಎ.ವಸಂತಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಬಸವರಾಜ ಪಾಟೀಲ ಇಟಗಿ, ಶರಣಪ್ಪ ಮಟ್ಟೂರು, ಮಲ್ಲಿಕಾರ್ಜುನ ಯದ್ದಲದಿನ್ನಿ, ಬಸನಗೌಡ ಬಾದರ್ಲಿ, ಸೇರಿದಂತೆ ಅನೇಕರಿದ್ದರು.
Comments
Post a Comment