ಗ್ರಾಮಾಂತರ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಸಣ್ಣ ನರಸಿಂಹ ನಾಯಕಗೆ ಟಿಕೆಟ್ ಘೋಷಣೆ ಸಾಧ್ಯತೆ : ಸೆ.೩೦ ರಂದು ಗಿಲ್ಲೆಸುಗೂರಿನಲ್ಲಿ ಜನತಾ ಸಮಾವೇಶ ಮಾಜಿ ಸಿಎಂ ಹೆಚ್‌ಡಿಕೆ ಆಗಮನ-ವಿರುಪಾಕ್ಷಿ
ಗ್ರಾಮಾಂತರ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಸಣ್ಣ ನರಸಿಂಹ ನಾಯಕಗೆ ಟಿಕೆಟ್ ಘೋಷಣೆ ಸಾಧ್ಯತೆ
ಸೆ.೩೦ ರಂದು ಗಿಲ್ಲೆಸುಗೂರಿನಲ್ಲಿ ಜನತಾ ಸಮಾವೇಶ ಮಾಜಿ ಸಿಎಂ ಹೆಚ್‌ಡಿಕೆ ಆಗಮನ-ವಿರುಪಾಕ್ಷಿ
ರಾಯಚೂರು,ಸೆ.೨೬-ಇದೆ ಸೆ.೩೦ ರಂದು ತಾಲೂಕಿನ ಗಿಲ್ಲೆಸುಗೂರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ್ ಸ್ವಾಮಿ ಆಗಮಿಸಲಿದ್ದು ಅಂದು ಗ್ರಾಮಾಂತರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಹೆಸರು ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ ಬೆಂಗಳೂರಿನಿ0ದ ಹೆಲಿಕಾಪ್ಟರ್ ಮೂಲಕ ೧೨ ಗಂಟೆಗೆ ಮಂತ್ರಾಲಯಕ್ಕೆ ಆಗಮಿಸುವ ಅವರು ಅಲ್ಲಿಂದ ರಸ್ತೆ ಮೂಲಕ ಗಿಲ್ಲೆಸುಗೂರಿಗೆ ಆಗಮಿಸಲಿದ್ದು ಸುಮಾರು ೪ ಸಾವಿರ ದ್ವಿಚಕ್ರ ವಾಹನಗಳ ಮೂಲಕ ಅವರನ್ನು ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಗುತ್ತದೆ ಎಂದರು.
ಜನತಾ ಸಮಾವೇಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಶರವಣ ಸೇರಿದಂತೆ ಅನೇಕ ನಾಯಕರು ಪಾಲ್ಗೊಳ್ಳಲಿದ್ದು ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಗ್ರಾಮಾಂತರ ಕ್ಷೇತ್ರದ ಟಿಕೆಟ್ ನ್ನು ಘೋಷಣೆ ಮಾಡುವ ಸಾಧ್ಯತೆಯಿದ್ದು ಸಣ್ಣ ನರಸಿಂಹ ನಾಯಕರಿಗೆ ಟಿಕೆಟ್ ನೀಡುವ ಬಗ್ಗೆ ಪಕ್ಷದ ವರಿಷ್ಠರಲ್ಲಿ ಒಲವು ವ್ಯಕ್ತವಾಗಿದೆ ಎಂದರು.
ಅನೇಕರು ಆಕಾಂಕ್ಷಿಗಳಾಗಿದ್ದರೂ ಸಣ್ಣ ನರಸಿಂಹ ನಾಯಕರು ಗ್ರಾಮಾಂತರ ಕ್ಷೇತ್ರದಲ್ಲಿ ನೂರಾರು ಹಳ್ಳಿಗಳಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದಾರೆಂದ ಅವರು ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ತೀರ್ಮಾನಿಸಿದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆಂದರು.
ಎನ್.ಶಿವಶOಕರ ಮಾತನಾಡಿ ಸರ್ಕಾರದ ಭ್ರಷ್ಠಾಚಾರದ ಬಗ್ಗೆ ಕಾಂಗ್ರೆಸ್ ಪಕ್ಷ ಪೇ ಸಿಎಂ ಎಂಬ ಪೋಸ್ಟರ್ ಅಂಟಿಸುತ್ತಿದೆ ಆದರೆ ಜನರ ಸಮಸ್ಯೆ ಬಗ್ಗೆ ಜೆಡಿಎಸ್ ಅರಿವು ಮೂಡಿಸಲು ಪಬ್ಲಿಕ್ ಪೋಸ್ಟ್ರ್ ಎಂಬ ಭಿತ್ತಿ ಪತ್ರ ಬಿಡುಗಡೆ ಮಾಡಿ ಜನರ ಸಮಸ್ಯೆ ನಿವಾರಣೆಗೆ ಹೆಚ್.ಡಿ.ಕುಮಾರಸ್ವಾಮಿಯವರನ್ನು ಮತ್ತೊಮ್ಮೆ ಸಿಎಂ ಮಾಡಬೇಕೆಂದು ಜನರಿಗೆ ಮನವರಿಕೆ ಮಾಡುತ್ತದೆ ಎಂದರು. ಈ ಸಂದರ್ಭದಲ್ಲಿ ನಿಜಾಮುದ್ದೀನ್, ಸಣ್ಣ ನರಸಿಂಹ ನಾಯಕ, ಅಮರೇಶ ಪಾಟೀಲ ಆಶಾಪೂರು ಇದ್ದರು.
Comments
Post a Comment