ಭಾರತ್ ಜೋಡೋ ಅಲ್ಲ, ಮೊದಲು ಕಾಂಗ್ರೆಸ್ ಜೋಡೋ ಮಾಡಿ- ಸಿಎಂ ಇಬ್ರಾಹೀಂ


ಭಾರತ್ ಜೋಡೋ 
ಅಲ್ಲ, ಮೊದಲು ಕಾಂಗ್ರೆಸ್ ಜೋಡೋ ಮಾಡಿ- ಸಿಎಂ ಇಬ್ರಾಹೀಂ.                      ರಾಯಚೂರು,ಸೆ.30-ಕಾಂಗ್ರೆಸ್ ಬಿಜೆಪಿ ನಡುವೆ  ಪೈಪೋಟಿ ನಡೆಯುತ್ತಿದ್ದು ನಾವು ಅವರಿಗಿಂತ ವಿಭಿನ್ನವಾಗಿ ಹೋಗ್ತೇವೆ, ಪಂಚ ರತ್ನ ಜಾರಿಗೆ ತರುತ್ತೇವೆ  ಆ ಯೋಜನೆ ಈಗ ರಾಜ್ಯದ ಜನರ ಮುಂದೆ ಇಟ್ಟಿದ್ದೇವೆ. ಭಯ, ಹಸಿವು ಮುಕ್ತ ಕರ್ನಾಟಕ ಮಾಡುವ ಸಂಕಲ್ಪ ಮಾಡಿದ್ದು,ನಾವು ಕೆಲಸ ಮಾಡದೇ ಇದ್ರೆ ಪಕ್ಷ ವಿಸರ್ಜನೆ ಮಾಡ್ತೇವೆ ಎಂದು ಜೆಡಿಎಸ್ ರಾಜಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಯಾವುದೇ ರಾಜಕೀಯ ಪಕ್ಷ ಇದುವರೆಗೂ ಈ ರೀತಿಯ ವಾಗ್ದಾನ ಮಾಡಿಲ್ಲ. ನಾವು ಎಲ್ಲಾ ನೀರಾವರಿ ಯೋಜನೆ ಮುಕ್ತಾಯಗೊಳಿಸ್ತೇವೆ ಎಂದರು.

ಭಾರತ್ ಜೋಡೋ ಯಾತ್ರೆಗೆ ರಾಹುಲ್ ಗಾಂಧಿ ಅವರು ಬರ್ತಿದ್ದಾರೆ. ನಮ್ಮ  ಕಾರ್ಯಕ್ರಮ ಇಟ್ಕೊಂಡು ನಾವು ಹೋಗ್ತಿದ್ದೇವೆ .ಕೆಲವರು ಜೈಲ್ ನಲ್ಲಿದ್ದಾರೆ, ಇನ್ನೂ ಕೆಲವರು ಬೇಲ್ ಮೇಲಿದ್ದಾರೆ ಎಂದು ಕಟುಕಿದರು.

ನಮಗೆ ಯಾವುದೇ ಹೈಕಮಾಂಡ್ ಇಲ್ಲ,

ತಮಾಷೆ ತೋರಿಸೋದು ನಮ್ಮಲ್ಲಿ ಇಲ್ಲ 

ಭಾರತ್ ಜೋಡೋ ಅಲ್ಲ, ಮೊದಲು ಕಾಂಗ್ರೆಸ್ ಜೋಡೋ ಮಾಡಿ ಎಂದರು.

ಮೊದಲು ಕಾಂಗ್ರೆಸ್ ಗೆ ಅಧ್ಯಕ್ಷರನ್ನ ಮಾಡೋದಕ್ಕೆ ಆಗ್ತಿಲ್ಲ ಎಂದು ಕಿಚಾಯಿಸಿದರು.

ನಮ್ದು ಬಿ ಟೀಂ ಅಂತಿದ್ರು, ಇವಾಗ ಅವ್ರೇ ಬಿ ಟೀಂ ಆಗಿದ್ದಾರೆ .ಇವ್ರೇ 12 ಜನ ಎಮ್ಎಲ್ಎ ಗಳನ್ನ ಕಳಿಸಿ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ.ರಾಹುಲ್ ಗಾಂಧಿ ಅವ್ರು ಇವತ್ತು ಅದನ್ನ ಹೇಳಬೇಕಿದೆ.ಯಾರು ಬಿಜೆಪಿಗೆ ಸಪೋರ್ಟ್ ಮಾಡಿದ್ರು ಅನ್ನೋದನ್ನ ಹೇಳಬೇಕಿದೆ.

ಗುಬ್ಬಿ ಶ್ರೀನಿವಾಸ ಅವ್ರನ್ನ ಕರೆದುಕೊಂಡು ಹೋಗಿ ಮೊದಲ ಓಟ್ ಹಾಕಿದ್ರು ಎಂದು ಕಾಂಗ್ರೆಸ್ ಪಕ್ಷವನ್ನು 

 ಕುಟುಕಿದರು.

ಪಿಎಫ್ಐ ಗೆ ಐದು ವರ್ಷಕ್ಕೆ ಮಾತ್ರ ಡಿವೋರ್ಸ್ ಕೊಟ್ಟಿದ್ದಾರೆ.ಐದು ವರ್ಷ ಆದ್ಮೇಲೆ ಏನ್ಮಾಡ್ತಾರೆ, ಸರಿಹೋಗ್ತಾರಾ ಇವ್ರೇನು ಸರ್ಕಾರ ನಡೆಸ್ತಿದ್ದಾರಾ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಇತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ