ವಿದ್ಯಾಭಾರತಿ ಸಿಬಿಎಸ್‌ಇ ಶಾಲೆಯಲ್ಲಿ ಪೋಷಕರ ದಿನಾಚರಣೆ.

 


ವಿದ್ಯಾಭಾರತಿ ಸಿಬಿಎಸ್‌ಇ ಶಾಲೆಯಲ್ಲಿ  ಪೋಷಕರ ದಿನಾಚರಣೆ.                               ರಾಯಚೂರು,ಸೆ.17- ವಿದ್ಯಾಭಾರತಿ ಸಿಬಿಎಸ್‌ಇ ಶಾಲೆಯಲ್ಲಿ ್ಲಇಂದು ಪೋಷಕರ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲಾಯಿತು.                   ಇದರ ಅಂಗವಾಗಿ ಕೈ ತುತ್ತು ಊಟ, ಪಾದಪೂಜೆ ಹಾಗೂ ಪೋಷಕರಿಗೆ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.               ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.                             ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಾಯಚೂರಿನ ವಿಧಾನ ಸಭಾ ಸದಸ್ಯರಾದ ಡಾ. ಶಿವರಾಜ ಪಾಟೀಲ್ ಇವರು ಆಗಮಿಸಿದ್ದರು.                                     ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.               ಮುಖ್ಯ ಅತಿಥಿಗಳು ಮಾತನಾಡಿ ಪೋಷಕರು ಆಧುನಿಕ ಯುಗದಲ್ಲಿ ಮೊಬೈಲನ್ನು ಬಳಸದೆ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸಬೇಕು, ಕೈ ತುತ್ತು ಮಕ್ಕಳ ಜೀವನಕ್ಕೆ ಬಹಳ ಮುಖ್ಯ, ಇದು ಪೋಷಕರ ಹಾಗೂ ಮಕ್ಕಳ ನಡುವೆ ಅವಿನಾಭಾವ ಸಂಬಂಧವನ್ನು ಬೆಳೆಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಕೈ ತುತ್ತು ಉಣಿಸುವುದಕ್ಕಾಗಿ ವಿವಿಧ ರೀತಿಯ ಭಕ್ಷö್ಯಗಳನ್ನು ತಯಾರಿಸಿಕೊಂಡು ಬಂದಿದ್ದರು. ಮಕ್ಕಳು ಸಂತೋಷವಾಗಿ ತಮ್ಮ ತಾಯಂದಿರ ಕೈ ತುತ್ತು ಉಂಡು ಸಂತೃಪ್ತಗೊಂಡರು.       

                               ಮಕ್ಕಳು ತಮ್ಮ ತಂದೆ ತಾಯಂದಿರುಗಳಿಗೆ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಕೆ.ಎಸ್ ರವಿರಾಜನ್, ಖಜಾಂಚಿಗಳಾದ ಶ್ರೀ ವೆಂಕಟೇಶ ಮಾನ್ವಿಕರ್, ಸಂಸ್ಥೆಯ ಸದಸ್ಯರಾದ ಶ್ರೀ ಗಣೇಕಲ್ ಸೋಮಶೇಖರ ಗೌಡ, ಶ್ರೀ ಎಲಿ ನಿಶಾಂತ್, ಶ್ರೀ ಮೋಹನ್ ಅಗರವಾಲ್ ಮುಂತಾದ ಗಣ್ಯರು , ಮಕ್ಕಳ ಪೋಷಕರು ಉಪಸ್ಥಿತರಿದ್ದರು. 

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್