ಉಪ್ಪಾರವಾಡಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ: ನವರಾತ್ರಿ ವಿಶೇಷ ಕಾರ್ಯಕ್ರಮಗಳು


ಉಪ್ಪಾರವಾಡಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ: ನವರಾತ್ರಿ  ವಿಶೇಷ ಕಾರ್ಯಕ್ರಮಗಳು

 ರಾಯಚೂರು,ಸೆ.26-ಉಪ್ಪಾರವಾಡಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ  ಪ್ರತಿ ವರ್ಷದ ಪದ್ಧತಿಯಂತೆ ಈ ಸೋಮವಾರ ದಿನಾಂಕ 26-09-2012 ರಿಂದವ ಬುಧವಾರ ದಿನಾಂಕ 5-10-2022 ರ ವರೆಗೆ ಶ್ರೀ  ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವನ್ನು ಅತಿ ವಿಜೃಂಭಣೆಯಿಂದ ನೆರೆವೇರಿಸಲಾಗುತ್ತಿದೆ.

ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಗೆ ನಡೆಯುವ ವಿಶೇಷ ಸೇವೆಗಳು

ಬೆಳಿಗ್ಗೆ 5-00 ರಿಂದ 7-00 ರ ವರೆಗೆ ಶ್ರೀ ವೆಂಕಟೇಶ್ವರ ಸುಪ್ರಭಾತ, 5-30 ರಿಂದ 6-30 ರ ವರೆಗೆ ಧ್ವಜಾರೋಹಣ, ಕಲಶಸ್ಥಾಪನೆ, 7-00 ರಿಂದ ಪಂಚಾಮೃತಾಭಿಷೇಕ, 10-00 ತುಳಸಿ ಅರ್ಚನೆ, ನೈವೇದ್ಯ, ಮಹಾಮಂಗಳಾರತಿ ವಿಶೇಷ  ಅಲಂಕಾರಗಳು, ಮಧ್ಯಾಹ್ನ 3-00 ರಿಂದ 4-00 ರ ವರೆಗೆ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪುರಾಣ ಸಂಜೆ 5-00 ರಿಂದ ರಾತ್ರಿ 9-00 ರ ವರೆಗೆ ವಾಹನೋತ್ಸವ, ತೊಟ್ಟಿಲೋತ್ಸವ, ಶಯನೋತ್ಸ ಹಾಗೂ ಪ್ರಸಾದ ವಿತರಣೆ.


ವಿಶೇಷ ಕಾರ್ಯಕ್ರಮಗಳು


ಸೋಮವಾರ ದಿನಾಂಕ 26 -9 -2022 ರಂದು ಸಂಜೆ ಸೂರ್ಯಾವಾಹನೋತ್ಸವ 7 ರಿಂದ 8ವರೆಗೆ ಸಾಮೂಹಿಕ ಪುಷ್ಪಹಾಸನಿಗೆ ನಾಮ ಪುಷ್ಪವಳಿ.

 ಮಂಗಳವಾರ ದಿನಾಂಕ: 27-9-2022 ರಂದು ಸಂಜೆ ಆದಿಶೇಷವಾಹನ ಉತ್ಸವ ಲಕ್ಷ್ಮೀ ಶೋಭಾನ ಪಾರಾಯಣ ಕೃಷ್ಣ ಭಜನ ಮಂಡಳಿ ಹಾಗೂ ಸಂಗಡಿಗರಿಂದ

ಬುಧವಾರ ದಿನಾಂಕ 28-09-2020 ರಂದು ಕಾಮಧೇನು ಅಲ್ಪವೃಕ್ಷವಾಹ ಕಳಸಗಳ ಸಂಗಡ  ನಮಸ್ಕಾರ ಗುಂಬಳ್ಳಿ ರಂಗನಾಥ ಇವರಿಂದ ಹಾಗೂ ಸ್ವರಶ್ರೀ ಸಂಗೀತ ಕಲಾ ವಿದ್ಯಾಸ  ರಾಯಚೂರು ವಿದ್ಯಾರ್ಥಿಗಳಿಂದ ದಾಸ ನಮನ ಶ್ರೀ. ಸಿ.ಎನ್‌. ರಾಘವೇಂದ್ರ ಇವರ ಸಮ್ಮುಖದಲ್ಲಿ ಸಂಜೆ 7:00 ರಿಂದ 8:00 ವರೆಗೆ.ನುಡಿಯತ್ತದೆ.

ಗುರುವಾರ ದಿನಾಂಕ 29-09-2022 ರಂದು ಚಂದ್ರವಹನ ಉತ್ಸವ ಸಂಜೆ 7 :30 ರಿಂದ ರಾತ್ರಿ 8-00 ವರೆಗೆ ಹರಿಕಥಾಮೃತಸಾರ ಪ್ರವಚನ ಕುಮಾರಿ ಪ್ರಮತಿ ಚನೈ ಇವರಿಂದ

 ಶುಕ್ರವಾರ ದಿನಾಂಕ 30-09-2022 ರಂದು ಸಾಯಂಕಾಲ 7-00 ಗಂಟೆಗೆ ಆಂಜನೇಯ ವಾಹನ ಉತ್ಸವ ಹಾಗೂ ಶ್ರೀ: ಮಂಡಳಿ ಇವರಿಂದ ಹನುಮಾನ ಚಾಲಿಸ್‌ ಪಾರಾಯಣ ಹಾಗೂ ಗೀತ ಕುಂಚ ಗಾಯ ಭಜನ ಮಂಡಳಿ ಸದಸ್ಯರಿಂದ, 

ಶನಿವಾರ ದಿನಾಂಕ 01-10-2022 ರಂದು 7 ಗಂಟಗೆ ಗರುಡ ವಾಹನ ಉತ್ಸವ ಹಾಗೂ ಆದಿತ್ಯ ಪುರಾಣದಲ್ಲಿ ಬರುವ ಪ್ರವಚನ ಶ್ರೀ ವೆಂಕಟೇಶ ಸ್ವಾಮಿಯ ವರ್ಣನೆ ಪಂಜ ಮುಕ್ಕುಂದಾಚಾರ್ಯ ರಾಯಚೂರು ಇವರಿಂದ

 ರವಿವಾರ ದಿನಾಂಕ 02-10-2022 ರಂದು 7 ಗಂಟೆಗೆ ಗಜ ವಾಹನ ಉತ್ಸವ ಶ್ರೀಮತಿ ಮಾಲತಿ ಬೋಳಬಂಡಿ ಇವರಿಂದ ನಾಮ ಸಂಕೀರ್ತನ ಹಾಗೂ ಯುವಕರಿಂದ ನಾಟಕ.

ಸೋಮವಾರ ದಿನಾಂಕ 03-10-2022 ರಂದು 5 ಗಂಟೆಗೆ ಸಿಂಹ ವಾಹನೋತ್ಸವ ಹಾಗೂ ಸಂಜೆ 7:00 ಗಂಟೆಗೆ  ದುರ್ಗ ಸ್ವಾಮಿ ಉಚ್ಚಾಯಿ ಮಹೋತ್ಸವ.

 ಮಂಗಳವಾರ ದಿನಾಂಕ 04-10-2022 ರಂದು 5ಗಂಟೆಗೆ ಅಶ್ವ ವಾಹನ ಉತ್ಸವ ಸಾಯಂಕಾಲ6 ಗಂಟೆಗೆ ರಥೋತ್ಸವ (ಖಂಡೆಪೂಜೆ), ಆಯುಧಪೂಜೆ, ರಥೋತ್ಸವ ದಿನದಂದು ತೇರು ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಿಂದ ಆರ್ಯ ವೈಶ್ಯ ಗೀತಾ ಮಂದಿರದವರೆಗೆ ಹೋಗಿ ಬಂದ ನಂತರ ದೇವರ ಕೊರಳಲ್ಲಿರುವ ಮುತ್ತಿನ ಹಾರವನ್ನು ಮತ್ತು ಮುಷ್ಪಮಾಲೆಯ ಹರಾಜು ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾ ಭಾಗವಹಿಸಿ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ

ಬುಧವಾರ ದಿನಾಂಕ 05-10-2022 ಬೆಳಿಗ್ಗೆ 9-00 ಗಂಟೆಯಿಂದ ಮ 1-00 ಗಂಟೆಯವರೆಗೆ ಶ್ರೀ ಪದ್ಮಾವತಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ, ಭಗೀರಥ ಮಹಿಳಾ ಮಂಡಳಿ ವತಿಯಿಂದ ಶ್ರೀ ವೆಂಕಟೇಶ್ವರ ಸ್ವಾಮಿ ಕಲ್ಯಾಣ ಮಂಟಪ ವೇದಿಕೆಗೆ ಅಲಂಕಾರ ಸೇವೆ ಕಲ್ಯಾಣೋತ್ಸವದ ಲಡ್ಡು ಪ್ರಸಾದ ವಿತರಣೆ ಮತ್ತು ಸಾಯಂಕಾಲ 4-00 ರಿಂದ 7-00 ಗಂಟೆಯವರೆಗೆ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವರ ಪಲ್ಲಕ್ಕಿ ಮಹೋತ್ಸವದೊಂದಿಗೆ ಮಹಂಕಾಳಿ ಬನ್ನಿ (ಶಮಿ) ಮುಡಿಯುವುದು ಇವೆಲ್ಲ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 ಸೋಮವಾರದಂದು   ಉಪ್ಪಾರವಾಡಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ 51ನೇ ನವರಾತ್ರಿ ಉತ್ಸವ ಅಂಗವಾಗಿ  ಸೂರ್ಯವಾಹನೋತ್ಸವ  ದೇವಸ್ಥಾನ ಪ್ರಹಂಗಣದಲ್ಲಿ  ನಡೆಯಿತು

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್