ಜಿ.ಪಂ ಸಿಇಒ ರವರಿಂದ ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮಕ್ಕೆ ಸಂಕೇತಿಕವಾಗಿ ಚಾಲನೆ.

 


ಜಿ.ಪಂ ಸಿಇಒ  ರವರಿಂದ ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮಕ್ಕೆ ಸಂಕೇತಿಕವಾಗಿ ಚಾಲನೆ. 


ರಾಯಚೂರು ಸೆ:18 ರಂದು‌ ರಾಯಚೂರು ತಾಲೂಕಿನ‌  ವ್ಯಾಪ್ತಿಯ ಬಿಜನಗೇರಾ  ಗ್ರಾಮ ಪಂಚಾಯತಿಯಲ್ಲಿ ಶಶಿಧರ ಕುರೇರ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ರಾಯಚೂರು ರವರು, ಅಂಗನವಾಡಿ ಮತ್ತು ಶಾಲಾ ಮೈಧಾನ ಸ್ವಚ್ಚ ಮಾಡುವುದರ ಮೂಲಕ  ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.


ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಜಲ ಶಕ್ತಿ ಮಂತ್ರಾಲಯ ಸಂಯುಕ್ತಾಶ್ರಯದಲ್ಲಿ ಗ್ರಾಮಗಳಲ್ಲಿ ಸಂಪೂರ್ಣ ನೈರ್ಮಲ್ಯ  ಕಾಪಾಡುವ ನಿಟ್ಟಿನಲ್ಲಿ ಪ್ರತಿ ವರ್ಷ ಸ್ವಚ್ಚತಾ ಹಿ ಸೇವಾ ಅಂದೋಲನಾ ಅಯೋಜಿಸಿಕೊಂಡು ಬರುತ್ತಿದೆ. 


ಪಸಕ್ತ ಸಾಲಿನಲ್ಲಿ ಇಂದಿನಿಂದ‌ ಅಂದರೆ  ಸೆ 15 ರಿಂದ  ಅ.2 ರವರೆಗೆ ರಾಷ್ಟ ವ್ಯಾಪಿ ಸ್ವಚ್ಚತಾ ಹಿ ಸೇವಾ ಕಾರ್ಯವನ್ನು ಅಯೋಜಿಸಲು ನಿರ್ದೇಶನಗಳು ಇವೆ.


ಈ ನಿಟ್ಟಿನಲ್ಲಿ  ಇಂದು  ರಾಯಚೂರು ತಾಲೂಕಿನ ಬಿಜನಗೇರಾ ಗ್ರಾಮದಲ್ಲಿ " ಸ್ವಚ್ಚತಾ ಹಿ ಸೇವಾ" ಆಂದೋಲನವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ  ಗ್ರಾಮದ ಎಲ್ಲಾ ಸ್ಥಳಗಳಲ್ಲಿ ಕಸ ಸಂಗ್ರಹಣೆ ಮಾಡುವ ಮೂಲದಲ್ಲಿ ಕಸ ವಿಂಗಡಣೆ, ವಿಲೇವಾರಿ, ಮತ್ತು ಸ್ವಚ್ಚತಾ ಶ್ರಮಧಾನ  ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಇಡಿ ಗ್ರಾಮವನ್ನು ಸಂಪೂರ್ಣ ಕಸ ಮುಕ್ತವಾಗುವ ರೀತಿಯಲ್ಲಿ ಈ ಕಾರ್ಯಕ್ರವನ್ನು ಯಶಸ್ವಿಗೊಳಿಸಲು ಗ್ರಾಮ ಪಂಚಾಯತಿಯ ಜವಬ್ದಾರಿಯಾಗಿದೆ. ಅದ್ದರಿಂದ ಗ್ರಾಮ ಪಂಚಾಯತಿ ಅಧ್ಯಕ್ಷರು ಸರ್ವ ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಈ ಒಂದು ಆಂದೋಲನದಲ್ಲಿ ಆಸಕ್ತಿಯಿಂದ ಭಾಗವಹಿಸಿ, ಅರ್ಥಪೂರ್ಣವಾಗಿ ಅಂದೋಲವನ್ನು ಯಶಸ್ವಿಯೊಂದಿಗೆ, ಒಳ್ಳೆಯ ಆರೋಗ್ಯಯುತ ಗ್ರಾಮಗಳನ್ನಾಗಿ ಮಾಡಬೇಕೆಂದು ತಿಳಿಸಿದರು.     ಎಲ್ಲರು ಸೇರಿ ಬಿಜನಗೇರಾ ಗ್ರಾಮದ ಅಂಗನವಾಡಿ ಮತ್ತು ಶಾಲಾ ಆಟದ ಮೈದಾನವನ್ನು ಸಂಪೂರ್ಣ ಸ್ವಚ್ಚ ಮಾಡಲಾಯಿತು..

ಈ ಸಂದರ್ಭದಲ್ಲಿ ರಾಮರೆಡ್ಡಿ ಪಾಟೀಲ್ ಕಾರ್ಯನಿರ್ವಾಹಕ  ಅಧಿಕಾರಿ ತಾ.ಪಂ ರಾಯಚೂರು ಗ್ರಾ.ಪಂ ಅಧ್ಯಕ್ಷರು, ಸರ್ವ ಸದಸ್ಯರು, ವೆಂಕಟೇಶ ದೇಸಾಯಿ ನರೇಗಾ ಎಡಿ, ಶಿವಪ್ಪ ಪಂ.ರಾಜ್ ಎಡಿ, ತಾಲೂಕಿನ ಎಲ್ಲಾ ಪಿಡಿಒ,ಕಾರ್ಯದರ್ಶಿಗಳು  ತಾಲೂಕಿನ ಎಲ್ಲಾ ನರೇಗಾ ಸಿಬ್ಬಂದಿಗಳು ಮತ್ತು  ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್