ಸಂಸದ ರಾಜಾ ಅಮರೇಶ್ವರ ನಾಯಕ ರಿಂದ ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವರ ಭೇಟಿ
ಸಂಸದ ರಾಜಾ ಅಮರೇಶ್ವರ ನಾಯಕ ರಿಂದ ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವರ ಭೇಟಿ
ರಾಯಚೂರು,ಸೆ.23-ವಿವಿಧ ಕಾರ‍್ಯಕ್ರಮಗಳ ನಿಮಿತ್ಯ ಬೆಂಗಳೂರಿಗೆ ಆಗಮಿಸಿರುವ . ರೈಲ್ವೆ ಮತ್ತು ಜವಳಿ ರಾಜ್ಯ ಸಚಿವರಾದ ದರ್ಶನ ಜರ್ದೋಶರವರನ್ನು, ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕರವರು ಸಭೆಯಲ್ಲಿ ಸಚಿವರನ್ನು ಭೇಟಿಯಾಗಿ ರಾಯಚೂರು ಲೋಕಸಭಾ ವ್ಯಾಪ್ತಿಯ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ರೈಲ್ವೆ ನಿಲ್ದಾಣಗಳ ಅಭಿವೃದ್ದಿ ಕಾಮಗಾರಿಗಳ ಪಟ್ಟಿ ಮಾಡಿ ಶೀಘ್ರ ಕಾಮಗಾರಿಗಳನ್ನು ಪೂರ‍್ಣಗೊಳಿಸಲು ಸಂಬಂಧಪಟ್ಟವರಿಗೆ ನರ್ದೇಶನ ನೀಡುವಂತೆ ವಿನಂತಿಸಿದರು. ಮಾನ್ಯ ಲೋಕಸಭಾ ಸದಸ್ಯರು
ಸಲ್ಲಿಸಿದ ಮನವಿ ಪತ್ರಗಳಲ್ಲಿ ಇರುವ ಮುಖ್ಯ ಬೇಡಿಕೆಗಳು:-
೧) ಗಿಣಿಗೇರಾ(ಮುನಿರಾಬಾದ್)-ಮಹೆಬೂಬನಗರ ರೈಲ್ವೆ ಲೈನ್ ಕಾಮಗಾರಿಯು ಅನೇಕ ರ‍್ಷಗಳ ಹಿಂದೆ ಪ್ರಾರಂಭವಾಗಿದ್ದು ಇದುವರೆಗೂ ಈ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯು ಕುಂಟುತ್ತಾ ಸಾಗಿದ್ದು ಬಾಕಿ ಇರುವ ಸಿಂಧನೂರು ತಾಲ್ಲೂಕಿನಲ್ಲಿ ೫೧.೦೬ ಎಕರೆ, ಮಾನ್ವಿ ತಾಲ್ಲೂಕಿನಲ್ಲಿ ೪೪೨.೧೭ ಎಕರೆ, ಸಿರವಾರ ತಾಲ್ಲೂಕಿನಲ್ಲಿ ೧೯೪.೧೦ ಎಕರೆ, ರಾಯಚೂರು ತಾಲ್ಲೂಕಿನಲ್ಲಿ ೧೫.೩೮ ಎಕರೆ ಭೂಸ್ವಾಧೀನ ಕರ‍್ಯವನ್ನು ಶೀಘ್ರ ಪರ‍್ಣಗೊಳಿಸಿ ರೈಲ್ವೆ ಲೈನ್ ಕಾಮಗಾರಿಯು ಪರ‍್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನರ‍್ದೇಶನ ನೀಡಲು ಮತ್ತು ಕೇಂದ್ರದಿಂದ ಬಾಕಿ ಇರುವ ಅನುದಾನವನ್ನು ಬಿಡುಗಡೆಗೊಳಿಸಲು ಕೋರಿದರು.
(೨) ನೂತನವಾಗಿ ಮಂಜೂರಾಗಿರುವ ಗದಗ-ವಾಡಿ ರೈಲ್ವೆ ಲೈನ್ ಮರ‍್ಗದ ಭೂಸ್ವಾಧೀನ ಕಾಮಗಾರಿಯು ಕೊಪ್ಪಳ ಜಿಲ್ಲೆಯಲ್ಲಿ ೧೨೧೩.೧೨ ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ಈಗಾಗಲೆ ೧೨೧೩.೧೨ ಎಕರೆ ಭೂಸ್ವಾಧೀನ ಪರ‍್ಣಗೊಂಡಿರುತ್ತದೆ. ಆದರೆ ರಾಯಚೂರು ಜಿಲ್ಲೆಯಲ್ಲಿ ೧೧೦೧.೩೮ ಎಕರೆ ಗುರಿಗೆ ಇನ್ನೂ ಯಾವುದೇ ಭೂಸ್ವಾಧೀನ ಆಗಿರುವುದಿಲ್ಲ. ಆದ್ದರಿಂದ ಮುನಿರಾಬಾದ್-ಮಹೆಬೂಬನಗರ ರೈಲ್ವೆ ಲೈನ್ ಕಾಮಗಾರಿ ವಿಳಂಬವಾದಂತೆ ಇದನ್ನು ಸಹ ವಿಳಂಬ ಆಗಲು ಬಿಡದೆ, ಪ್ರಾರಂಭದಿಂದಲೇ ಕಾಮಗಾರಿಯನ್ನು ಚುರುಕುಗೊಳಿಸಲು ಸಂಬಂಧಪಟ್ಟವರಿಗೆ ನರ‍್ದೇಶನ ನೀಡಲು ಕೋರಿದರು.
(೩) ಗದಗ-ಕ್ರಿಷ್ಣಾ (೨೧೬) – ಈ ರೈಲ್ವೆ ಲೈನ್ ಕಾಮಗಾರಿಯು ವಯಾ ಕೋಟುಮಚಗಿ, ನರೆಗಲ್, ಗಜೇಂದ್ರಗಡ, ಹನುಮಾಪುರ, ಇಲಕಲ್, ಲಿಂಗಸೂಗೂರು ಮರ‍್ಗ –ರೈಲ್ವೆ ಲೈನ್ ಕಾಮಗಾರಿಯನ್ನು ಪುನ: ಪರಿಗಣಿಸಿ ಮಂಜೂರು ಮಾಡಿದಲ್ಲಿ ಪ್ರಯಾಣಿಕರಿಗೆ ಪ್ರಯಾಣದ ಅಂತರ ಹಾಗೂ ಸಮಯ ಕಡಿಮೆಯಾಗುವ ಕಾರಣ ಶೀಘ್ರ ಪ್ರಾರಂಭಕ್ಕೆ ವಿನಂತಿಸಿದರು.
ಅದಲ್ಲದೆ ಮಾನ್ಯ ಸಂಸದರು ಈ ಕೆಳಗಿನ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಪರಿಗಣನೆಗೆ ತೆಗೆದುಕೊಳ್ಳಲು ಕೋರಿದರು.
೧) ರಾಯಚೂರು-ಕಾಚಿಗುಡ (೦೭೭೯೮)ಡೆಮು – ಈಗಾಗಲೇ ಹಲವಾರು ಬಾರಿ ಮಾನ್ಯ ಕೇಂದ್ರ ರೈಲ್ವೆ ಸಚಿವರಿಗೆ ಹಾಗೂ ಪ್ರಧಾನ ವ್ಯವಸ್ಥಾಪಕರು, ಸೌ.ಸೆಂ.ರೈಲ್ವೆ, ಸಿಕಂದರಾಬಾದ್ ಇವರಿಗೆ ಕೇಳಿರುವಂತೆ, ಈ ಟ್ರೇನ್ ರಾಯಚೂರಿನಿಂದ ಹೊರಡುವ ಸಮಯವು ಪ್ರಸ್ತುತ ಸಂಜೆ ೫.೦೦ ಗಂಟೆ ಇದ್ದದನ್ನು ಮರ‍್ಪಡಿಸಿ ಬೆಳಿಗ್ಗೆ ೫-೦೦ ರಿಂದ ೮-೦೦ ಗಂಟೆಗೆ ಬದಲಾವಣೆ ಮಾಡಿ, ರಾತ್ರಿ ಕಾಚಿಗುಡಾದಿಂದ ಹಿಂದಿರುಗುವಂತೆ ಮಾಡಲು ಹಾಗೂ ಸದರಿ ಟ್ರೈನ್‌ನ್ನು ಸ್ಪೆಷಲ್ ಫಾಸ್ಟ್ ಪ್ಯಾಸೆಂಜರ್ ಆಗಿ ಬದಲಾವಣೆ ಮಾಡಲು ಕೇಳಿರುವರು.
೨) ಟ್ರೇನ್ ಸಂಖ್ಯೆ ೫೭೬೩೨ ಗುಲರ‍್ಗಾ-ಗುಂತಕಲ್:- ಕೋವಿಡ್‌ಗಿಂತ ಮೊದಲು ಚಾಲನೆಯಲ್ಲಿದ್ದ ಈ ಟ್ರೇನ್ ಇದುವರೆಗೂ ಪ್ರಾರಂಭವಾಗದಿರುವುದರಿಂದ ದಿನನಿತ್ಯ ಓಡಾಡುವ ಹಲವಾರು ಚಿಕ್ಕಪುಟ್ಟ ವ್ಯಾಪಾರಸ್ಥರಿಗೆ, ಕೂಲಿ ಕರ‍್ಮಿಕರಿಗೆ ಅನಾನುಕೂಲವಾಗಿರುತ್ತದೆ, ಕಾರಣ ಕೂಡಲೇ ಸದರಿ ರೈಲನ್ನು ಫಾಸ್ಟ್ ಪ್ಯಾಸೆಂಜರ್ ಎಂದು ಪರಿಗಣಿಸಿ ಪುನ: ಪ್ರಾರಂಭಿಸಿ ಸರ‍್ವಜನಿಕರಿಗೆ ಅನುಕೂಲ ಮಾಡಿಕೊಡಲು ಕೋರಿರುವರು.
ಇದಲ್ಲದೆ ರಾಯಚೂರು ರೈಲ್ವೆ ನಿಲ್ದಾಣವು ಸೌತ್ ಸೆಂಟ್ರಲ್ ರೈಲ್ವೆಯಲ್ಲಿಯೇ ಅತ್ಯಂತ ಹಳೆಯ ನಿಲ್ದಾಣವಾಗಿದ್ದು, ಇತ್ತೀಚೆಗೆ ಪ್ರಯಾಣಿಕರ ಸಂಖ್ಯೆಯು ಹೆಚ್ಚಾಗಿದ್ದು ಹಾಗೂ ಸರಕು ಸಾಗಣಿಕೆಗಳ ಸಾರಿಗೆಯು ಸುಗಮವಾಗಿ ಸಾಗಲು ಇನ್ನೊಂದು ಹೊಸ ಪ್ಲಾಟ್‌ಫಾರಂನ್ನು ನರ‍್ಮಿಸಲು ಹಾಗೂ ೧೮೭೧ ರ‍್ಷದಲ್ಲಿ ನರ‍್ಮಿಸಿರುವ ರೈಲ್ವೆ ನಿಲ್ದಾಣದ ಆಧುನೀಕರಣ ಕಾಮಗಾರಿಯನ್ನು ಮಂಜೂರು ಮಾಡಿ ಸರ‍್ವಜನಿಕರಿಗೆ ಹೆಚ್ಚಿನ ಸೌಲಭ್ಯ ದೊರಕಿಸಿಕೊಡುವಂತೆ ಕೋರಿದರು. ಹಾಗೂ ದಕ್ಷಿಣ ಮಧ್ಯ ರೈಲ್ವೆಯ ಗುಂತಕಲ್ ವಿಭಾಗದಿಂದ ಮಟಮಾರಿ, ರ‍್ಚಟಹಾಳ್ ಲೆವೆಲ್ ಕ್ರಾಸಿಂಗ್‌ಗಳ ಕಾಮಗಾರಿಗಳನ್ನು ಶೀಘ್ರವಾಗಿ ಕೈಗೊಂಡು ಈ ಮರ‍್ಗದಿಂದ ಓಡಾಡುವ ಸರ‍್ವಜನಿಕರಿಗೆ / ರೈತರಿಗೆ ಅನುಕೂಲ ಮಾಡಿಕೊಡುವಂತೆ ಕೇಳಿದರು. ಇದಲ್ಲದೆ ಗುಂತಕಲ್ ರೈಲ್ವೆ ವಿಭಾಗದಲ್ಲಿಯೇ ಅತ್ಯಂತ ಹೆಚ್ಚು ಆದಾಯ ತರುತ್ತಿರುವ ಯಾದಗಿರಿ ರೈಲ್ವೆ ನಿಲ್ದಾಣದ ಅಗಲೀಕರಣಕ್ಕಾಗಿ ಮನವಿ ಮಾಡಿರುವರು. ಇದಲ್ಲದೆ ರಾಯಚೂರು ಜಿಲ್ಲೆಯ ಆಶಾಪುರ-ಗಾರಲದಿನ್ನಿ-ಆರ್‌ಓಬಿ,ಮನಗುಲಿ-ಬಿಚ್ಚಾಲ(ಆರ್‌ಓಬಿ), ಮಾನ್ವಿ ತಾಲ್ಲೂಕು ಕರ‍್ಡಿ ವಯಾ ರ‍್ಚಟಹಾಳ ಆರ್‌ಓಬಿ, ರಾಯಚೂರು-ಮಂಚಲಾಪುರ ೨೧೯ ಎಂಡಿಆರ್ ಕಿಮೀ ೫೬೭ ಹತ್ತಿರ ಆರ್‌ಓಬಿ ಹಾಗೂ ಯಾದಗಿರಿ ಜಿಲ್ಲೆಯ ಮುದ್ನಾಳ ಲೆವೆಲ್ ಕ್ರಾಸಿಂಗ್ ೨೨೯ ಹತ್ತಿರ ಆರ್‌ಓಬಿ, ವಾಡಿ-ಗುಂತಕಲ್ ಭಾಗದ ಮುದ್ನಾಳ ಹತ್ತಿರ, ಯಾದಗಿರಿ-ಸೈದಾಪುರ, ಮುಂರ‍್ಗ-ಅಕೋಲಾ, ಎಸ್.ಹೆಚ್ ೧೨೭ ಕಿ.ಮಿ. ೬೦೮/೬-೯ ಹತ್ತಿರ ಆರ್‌ಓಬಿ, ಮತ್ತು ಮುದ್ನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ನರಸಿಂಗ್‌ಚೌಕಿ ತಾಂಡಾದ ೬೩೯ ಕಿ.ಮೀ.ಹತ್ತಿರ ಆರ್‌ಯುಬಿ ಗಳನ್ನು ಆದ್ಯತೆ ಮೇರೆಗೆ ಮಂಜೂರು ಮಾಡಲು ಕೋರಿರುವರು.
ಇದಲ್ಲದೆ ಮಾನ್ಯ ಪ್ರಧಾನ ಮಂತ್ರಿಗಳ ದಿವ್ಯ ದೃಷ್ಟಿಯ ಯೋಜನೆಯಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಈ ಕೆಳಗಿನ ಮರ‍್ಗದಂತೆ ಹೋಗಿ ಬರುವ ಟ್ರೇನ್‌ಗಳು (೧) ರಾಯಚೂರು-ಬೆಂಗಳೂರು, (೨) ರಾಯಚೂರು-ಹೈದ್ರಾಬಾದ್ (ಬೆಳಿಗ್ಗೆ), (೩) ಚೆನ್ನೈ-ಮುಂಬಯಿ (ವಯಾ ಗುಂತಕಲ್, ರಾಯಚೂರು, ಕಲಬರ‍್ಗಿ) (೪) ಹೈದ್ರಾಬಾದ್-ಕೊಲ್ಹಾಪುರ (ವಯಾ ರಾಯಚೂರು, ಬಳ್ಳಾರಿ, ಕೊಪ್ಪಳ, ಹುಬ್ಬಳ್ಳಿ (ಕಲ್ಯಾಣ ರ‍್ನಾಟಕ ಎಕ್ಸ್‌ಪ್ರೆಸ್) ಮತ್ತು (೫) ರಾಯಚೂರು-ಕಾಕಿನಾಡ - ಪ್ರಾರಂಭ ಮಾಡುವಂತೆ ಕೋರಿರುವರು.
ಇದಲ್ಲದೆ ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಯಾದಗಿರಿ ಜಿಲ್ಲೆಯ ವಾಡಿ-ಗದಗ್ (ಸಿಂಧಗಿ ಕೋಡಂಗಲ್ ರಾ.ಹೆ) ರೈಲ್ವೆ ಲೈನ್ ಅಡಿಯಲ್ಲಿ ಶಹಾಪುರ ತಾಲ್ಲೂಕಿನಲ್ಲಿ ೦೬ ತಿಂಗಳ ಹಿಂದೆ ನರ‍್ಮಾಣವಾಗಿರುವ ರೈಲ್ವೆ ಬ್ರಿಡ್ಜ್ ಕೆಳಗಿನ (ಆರ್‌ಯುಬಿ) ರಸ್ತೆಗೆ ಮಳೆ ನೀರು ಯಾವಾಗಲು ನಿಂತು ಸರ‍್ವಜನಿಕರಿಗೆ ತೀವ್ರ ತೊಂದರೆಯಾಗಿ ಹಲವಾರು ಗಂಟೆಗಳು ಕಾಯುವಂತೆ ಆಗುತ್ತಿದೆ. ಇದು ರಾಜ್ಯ ಹೆದ್ದಾರಿ ಆಗಿದ್ದು, ಬ್ರಿಡ್ಜ್ ಕೆಳಗೆ ಮಳೆ ನೀರು ಹರಿದು ಹೋಗದೆ ನಿಲ್ಲುತ್ತಿರುವ ಕಾರಣ ಪ್ರಯಾಣಿಕರಿಗೆ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದ್ದು, ಸರ‍್ವಜನಿಕರು ಈಗಾಗಲೇ ೨-೩ ಬಾರಿ ರೈಲ್ವೆ ಇಲಾಖೆಯ ವಿರುದ್ದ ಪ್ರತಿಭಟನೆಗಳನ್ನು ಮಾಡಿರುವರು. ಸರ‍್ವಜನಿಕರ ಹಿತದೃಷ್ಟಿಯಿಂದ, ವಾಹನಗಳ ಸುಗಮ ಸಂಚಾರಕ್ಕಾಗಿ ಸದರಿ ಸೇತುವೆಯ ಕೆಳಗೆ ಮಳೆ ನೀರು ಹರಿದು ಹೋಗಲು ಬೈಪಾಸ್ ಮರ‍್ಗವನ್ನು ನರ‍್ಮಾಣ ಮಾಡಲು ಸಂಬಂಧಪಟ್ಟವರಿಗೆ ಕೂಡಲೇ ನಿರ‍್ದೇಶನ ನೀಡಬೇಕೆಂದು ಕೋರಿರುವರು.
ಮಾನ್ಯ ಸಂಸದರು ಸಲ್ಲಿಸಿರುವ ಪತ್ರಗಳಲ್ಲಿಯ ಅಂಶಗಳನ್ನು ಶೀಘ್ರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಮಾನ್ಯ ಕೇಂದ್ರ ರೈಲ್ವೆ ರಾಜ್ಯ ಸಚಿವರು ಭರವಸೆ ನೀಡಿರುವರು ಎಂದು ತಿಳಿಸಿದ್ದಾರೆ.
Comments
Post a Comment