ಅ. 20 ರಿಂದ ನ. 3 ರವರೆಗೆ ಖಾದಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ: ಗ್ರಾಮೀಣ ಕಸಬುದಾರರಿಗೆ ಜೀವನ ಮಟ್ಟ ಸುಧಾರಣೆಗೆ ಖಾದಿಯಿಂದ ಕ್ರಮ- ಕೆ.ವಿ.ನಾಗರಾಜು

 



ಅ. 20 ರಿಂದ ನ. 3 ರವರೆಗೆ  ಖಾದಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ:

ಗ್ರಾಮೀಣ ಕಸಬುದಾರರಿಗೆ ಜೀವನ ಮಟ್ಟ ಸುಧಾರಣೆಗೆ ಖಾದಿಯಿಂದ ಕ್ರಮ- ಕೆ.ವಿ.ನಾಗರಾಜು

ರಾಯಚೂರು ಅ.೧೯- ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಮತ್ತು ಸ್ವಾವಲಂಬನೆ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಗ್ರಾಮೀಣ ಕಸಬುದಾರರಿಗೆ ಜೀವನ ಆಧಾರ ಕಲ್ಪಿಸಿ ಅವರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಸ್ಥಾಪನೆಯಾಗಿದೆ ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜು ಅವರು ಹೇಳಿದರು.    

ಅವರು  ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ, ಮಾತನಾಡಿದರು.

ಖಾದಿ ವಲಯದಲ್ಲಿ ಕರ್ನಾಟಕ ರಾಜ್ಯದಲ್ಲಿ ೧೬೪ ಖಾದಿ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ೨೫೫ ಅಧಿಕೃತ ಖಾದಿ ಭಂಡಾರಗಳು ಕಾರ್ಯನಿರ್ವಹಿಸುತ್ತಿದೆ. ೨೦೨೧-೨೨ನೇ ಸಾಲಿನಲ್ಲಿ ಸುಮಾರು ೨೮೫.೧೯ ಕೋಟಿ ಖಾದಿ ಉತ್ಪಾದನೆ ಮಾಡಿದ್ದು, ಸುಮಾರು ೧೬,೦೦೦ ಉದ್ಯೋಗವಕಾಶ ಕಲ್ಪಿಸಲಾಗಿರುತ್ತದೆ. ಅಲ್ಲದೇ ಖಾದಿ ಸಂಘ-ಸAಸ್ಥೆಗಳು ಉತ್ಪಾದಿಸುವ ಖಾದಿ ಉತ್ಪಾದನೆ ಮೇಲೆ ಕರ್ನಾಟಕ ಸರ್ಕಾರದಿಂದ ಶೇ.೧೫% ರಷ್ಟು ಎಂ.ಡಿ.ಎ, ಹಾಗೂ ಕೇಂದ್ರ ಸರ್ಕಾರದಿಂದ (ಕೆ.ವಿ.ಐ.ಸಿ) ಶೇ.೩೦ ಎಂ.ಎA.ಡಿ.ಎ. ನೀಡಲಾಗುವುದು ಎಂದರು.


 ಖಾದಿ ಸಂಘ-ಸ0ಸ್ಥೆಗಳಲ್ಲಿ ದುಡಿಯುತ್ತಿರುವ ಕಸುಬುದಾರರಿಗೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಮಜೂರಿಯನ್ನು (ನೂಲುಗಾರರಿಗೆ ಪ್ರತಿ ಲಡಿಗೆ ರೂ.೩ ರಂತೆ, ನೇಕಾರರಿಗೆ ಪ್ರತಿ ಮೀಟರ್‌ಗೆ ರೂ.೬ ರಿಂದ ರೂ.೭ ಗಳಿಗೆ ಇತರೇ ಕಸುಬುದಾರರಿಗೆ ಪ್ರತಿ ದಿವಸಕ್ಕೆ ರೂ.೯.೫೦ ಹಾಗೂ ಖಾದಿ ಕಾರ್ಯಕರ್ತರಿಗೆ ಉತ್ಪಾದನೆಗೆ ಶೇ.೯% ರಷ್ಟು) ನೀಡಲಾಗುವುದು. ಹಾಗೂ ೨೦೨೧-೨೨ನೇ ಸಾಲಿನಲ್ಲಿ ೧೫.೦೦ ಕೋಟಿ ರೂ. ಎಂ.ಡಿ.ಎ. ಹಾಗೂ ೧೫.೦೦ ಕೋಟಿ ರೂ.ಗಳ ಪ್ರೋತ್ಸಾಹ ಮಂಜೂರು ಅನುದಾನವನ್ನು ಖಾದಿ ಸಂಘ ಅಥವಾ ಸಂಸ್ಥೆಗಳಿಗೆ ನೀಡಲಾಗಿದೆ ಎಂದು ಹೇಳಿದರು.


 ಗ್ರಾಮೋದ್ಯೋಗ ವಲಯದಲ್ಲಿ ಖಾದಿ ಆಯೋಗದ ಮಾರ್ಗಸೂಚಿಯಂತೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ೧೯೫೭-೫೮೩ ಸಾಲಿನಿಂದ ೧೯೯೪-೯೫೩ ಸಾಲಿನವರೆಗೆ ಧನಸಹಾಯ ಸ್ವರೂಪ ಯೋಜನೆಯಡಿ, ರೂ.೧೦೬.೭೯ ಕೋಟಿಗಳನ್ನು ಸುಮಾರು ೨೧೧೮೦ ಕಸುಬುದಾರರಿಗೆ ವಿತರಿಸಲಾಗಿದೆ. ಈ ಪೈಕಿ ಖಾದಿ ಆಯೋಗಕ್ಕೆ ರೂ.೭೧.೯೯ ದಿನಾಂಕ೩೧-೦೩-೨೦೨೨ಕ್ಕೆ ಖಾದಿ ಆಯೋಗಕ್ಕೆ ಕೋಟಿ ಸಾಲವನ್ನು ಮರು ಪಾವತಿ ಮಾಡಲಾಗಿದೆ. ಮಂಡಳಿಯು ರೂ.೩೪.೮೦ ಕೋಟಿ ಸಾಲ ಹಾಗೂ ರೂ.೨೬.೮೩ ಕೋಟಿ ಬಡ್ಡಿ ಹಣವನ್ನು ಮರುಪಾವತಿ ಮಾಡಬೇಕಾಗಿರುತ್ತದೆ ಎಂದರು.

ಧನ ಸಹಾಯ ಸ್ವರೂಪ ಯೋಜನೆಯಡಿಯಲ್ಲಿ ಧನ ಸಹಾಯ ಸ್ವರೂಪ ಯೋಜನೆಯಡಿ ೧೯೫೭-೫೮ ರಿಂದ ೧೯೯೪-೯೫ರವರೆಗೆ ೫೬೩ ಘಟಕಗಳಿಗೆ ಒಟ್ಟು ೧೦೮.೪೮ ಲಕ್ಷ ನೇರ ಸಾಲ ನೀಡಲಾಗಿದ್ದು, ಈ ಪೈಕಿ ೨೦೪ ಘಟಕಗಳೀಗೆ ಒಟ್ಟು ೭೧.೮೮ ಲಕ್ಷ ವಸೂಲಾತಿಯಾಗಿದ್ದು, ಇನ್ನೂ ೩೫೯ ಘಟಕಗಳಿಂದ ಸಾಲ ಒಟ್ಟು ರೂ. ೩೬.೫೯ ವಸೂಲಾತಿ ಬಾಕಿ ಇರುತ್ತದೆ ಎಂದು ಹೇಳಿದರು.


ಸಮೂಹ ಬ್ಯಾಂಕ್ ನಿಧಿ ಯೋಜನೆ,ಸಮೂಹ ಬ್ಯಾಂಕ್ ನಿಧಿ ಯೋಜನೆಯಡಿಯಲ್ಲಿ ೧೯೯೫-೯೬ ರಿಂದ ೧೯೯೯-೨೦೦೦ರವರೆಗೆ ೫೨ ಘಟಕಗಳು ಒಟ್ಟು ರೂ. ೧೯೩.೧೧ ಲಕ್ಷ ನೇರಸಾಲ ಮಂಜೂರಾಗಿದ್ದು, ೫೧ ಘಟಕಗಳು ಸಾಲ ವಸೂಲಾತಿಯನ್ನು ಮಾಡಲಾಗಿದೆ. ಇನ್ನೂ ೦೧ ಘಟಕ ಮಾತ್ರ ೦.೮೨ ಲಕ್ಷ ವಸೂಲಾತಿ ಬಾಕಿ ಇರುತ್ತದೆ ಎಂದರು.


ಪಿ.ಎಂ.ಇ.ಜಿ.ಪಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ೨೦೨೧-೨೨ ಸಾಲಿನಲ್ಲಿ ೪೧ ಘಟಕಗಳಿಗೆ ೬೨.೨೬ ಲಕ್ಷ ರೂ.ಗಳ ಉತ್ಪಾದನೆ ಮಾಡಲಾಗಿದ್ದು ೨೯೦ ಉದ್ಯೋಗಾವಕಾಶವನ್ನು ಸೃಷ್ಟಿಸಲಾಗಿದೆ. ಅಲ್ಲದೆ ೨೦೨೨-೨೩ನೇ ಸಾಲಿನಲ್ಲಿ ೫೦ಘಟಕಗಳಿಗೆ ಗುರಿಗೆ ಪ್ರತಿಯಾಗಿ ೨೬ ಘಟಕಗಳಿಗೆ ೪೨.೫೯ ಲಕ್ಷ ರೂಪಾಯಿ ಹಚ್ಚು ಹಣವನ್ನು ಪ್ರಸ್ತಾವನೆಗಳಿಗೆ ಸಾಟಲ ಮಂಜೂರು ಮಾಡಲಾಗಿದೆ ಎಂದರು.


 ರಾಯಚೂರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಇದೇ ಅಕ್ಟೋಬರ್ ೨೦ ರಿಂದ ನವೆಂಬರ್ ೩ರವರೆಗೆ ಪ್ರತಿದಿನ ಬೆಳಿಗ್ಗೆ ೧೦ಗಂಟೆಯಿAದ ರಾತ್ರಿ ೯:೩೦ವರೆಗೂ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದ್ದು ಜಿಲ್ಲೆಯ ಸಮಸ್ತ ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ವಿ.ನಾಗರಾಜ್, ಮಂಡಳಿ ಸದಸ್ಯರಾದ ಮಲ್ಲಿಕಾರ್ಜುನ ನಾಗಪ್ಪ ಹೊಸಮನಿ, ಮುನಿರಾಜ್, ಮಂಡಳಿಯ ಜಿಲ್ಲಾ ವ್ಯವಸ್ಥಾಪಕ ರಾಯಣ್ಣ ಸೇರಿದಂತೆ ಇತರರು ಇದ್ದರು.          

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್