ಅ.29 ರಂದು ಭಕ್ತ ಕನಕದಾಸರ ಪುತ್ಥಳಿ ಅನಾವರಣ-ಬಸವಂತಪ್ಪ
ಅ.29 ರಂದು ಭಕ್ತ ಕನಕದಾಸರ ಪುತ್ಥಳಿ ಅನಾವರಣ-ಬಸವಂತಪ್ಪ
ರಾಯಚೂರು,ಅ.೨೭-ನಗರದ ಗಂಜ್ ವೃತ್ತದ ಬಳಿ ನಿರ್ಮಿಸಲಾಗಿರುವ ಭಕ್ತ ಕನಕ ದಾಸರ ನೂತನ ಪುತ್ಥಳಿ ಅನಾವರಣ ಸಮಾರಂಭವನ್ನು ಅ.29 ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಬಸವಂತಪ್ಪ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಪುತ್ಥಳಿ ಅನಾವರಣ ಕಾರ್ಯಕ್ರಮ ಅಂದು ಬೆಳಿಗ್ಗೆ ೧೦.೩೦ ಕ್ಕೆ ನೆರವೇರಲಿದ್ದು ಉದ್ಘಾಟನೆಯನ್ನು ಜವಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನೆರವೇರಿಸಲಿದ್ದು , ಘನ ಉಪಸ್ಥಿತಿ ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ, ತೋಟಗಾರಿಕೆ ಸಚಿವ ಮುನಿರತ್ನ, ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ ವಹಿಸಲಿದ್ದು , ಅಧ್ಯಕ್ಷತೆಯನ್ನು ನಗರ ಶಾಸಕ ಡಾ.ಶಿವರಾಜ ಪಾಟೀಲ ವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾಡಾ ಅಧ್ಯಕ್ಷರು, ಹಟ್ಟಿ ಚಿನ್ನದ ಗಣಿ ಅಧ್ಯಕ್ಷರು, ಎಪಿಎಂಸಿ ಅಧ್ಯಕ್ಷರು, ಆರ್ ಡಿ ಎ ಅಧ್ಯಕ್ಷರು, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ,ಸದಸ್ಯರು ಇನ್ನಿತರ ಗಣ್ಯರು ಆಗಮಿಸಲಿದ್ದು ವಿಶೇಷ ಅಹ್ವಾನಿತರಾಗಿ ರಾಜ್ಯ ಸರ್ಕಾರದ ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಜಿ.ಕುಮಾರ್ ನಾಯಕ, ಜಿಲ್ಲಾಧಿಕಾರಿ ಚಂದ್ರ ಶೇಖರನಾಯಕ, ಜಿಲ್ಲಾ ಎಸ್ಪಿ ನಿಖಿಲ್.ಬಿ, ಜಿ.ಪಂ ಸಿಇಓ ಶಶಿಧರ ಕುರೇರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಬಂಡೆಪ್ಪ ಕಾಶಂಪೂರು, ಹೆಚ್.ವಿಶ್ವನಾಥ, ಹೆಚ್.ಎಂ.ರೇವಣ್ಣ, ಮಾಜಿ ಸಂಸದ ವೀರುಪಾಕ್ಷಪ್ಪ, ಸೇರಿದಂತೆ ಸಮಾಜದ ರಾಜಕೀಯ ನಾಯಕರನ್ನು ಆಹ್ವಾನಿಸಲಾಗಿದೆ ಎಂದ ಅವರು ಇದೆ ದಿನ ಬೆಳಿಗ್ಗೆ ೮.೩೦ಕ್ಕೆ ಯರಮರಸ್ ದಂಡು ಗ್ರಾಮದ ಬಳಿ ಕನಕ ಭವನ ಅಡಿಗಲ್ಲು ಸಮಾರಂಭ ನಡೆಯಲಿದ್ದು ನಂತರ ನಗರದ ವರೆಗೆ ಬೈಕ್ ರ‍್ಯಾಲಿ, ಎಸ್ಪಿ ಕಚೇರಿಯಿಂದ ಸುಮಂಗಲಿಯರ ಕಳಸ ಕುಂಭ ಕಲಾ ತಂಡಗಳ ಮೆರವಣಿಗೆ ನಡೆಯಲಿದ್ದು ಸಮಾಜ ಬಾಂಧವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು. ಈ ಸಂದರ್ಭದಲ್ಲಿ ಬಿ.ಬಸವರಾಜ, ನೀಲಕಂಠ ಬೇವಿನ್, ಹನುಮಂತಪ್ಪ,ಕೆ. ನಾಗರಾಜ ಇತರರು ಇದ್ದರು.
Comments
Post a Comment