ಭಾರತ ಜೋಡೊ ಯಾತ್ರೆ ಅಂಗವಾಗಿ ಅ.೨೧ ರಂದು ಜಿಲ್ಲೆಗೆ ರಾಹುಲ್ ಗಾಂಧಿ: ಭಾರತ ಜೋಡೊ ಯಾತ್ರೆಯಿಂದ ಬಿಜೆಪಿ ಪಕ್ಷಕ್ಕೆ ಭಯ ಪ್ರಾರಂಭವಾಗಿದೆ- ದದ್ದಲ್

 


ಭಾರತ ಜೋಡೊ ಯಾತ್ರೆ ಅಂಗವಾಗಿ ಅ.೨೧ ರಂದು ಜಿಲ್ಲೆಗೆ ರಾಹುಲ್ ಗಾಂ
ಧಿ:

ಭಾರತ ಜೋಡೊ ಯಾತ್ರೆಯಿಂದ ಬಿಜೆಪಿ ಪಕ್ಷಕ್ಕೆ ಭಯ ಪ್ರಾರಂಭವಾಗಿದೆ- ದದ್ದಲ್

ರಾಯಚೂರು,ಅ.೧೮- ಭಾರತ ಜೋಡೊ ಯಾತ್ರೆ ಅಂಗವಾಗಿ ಕಾಂಗ್ರೆಸ್  ರಾಷ್ಟಿçÃಯ ಯುವ ನಾಯಕರಾದ ರಾಹುಲ್ ಗಾಂಧಿಯವರು ಅ.೨೧ ರಂದು ಜಿಲ್ಲೆಗೆ ಆಗಮಿಸಲಿದ್ದಾರೆಂದು ಗ್ರಾಮೀಣ ಶಾಸಕರಾದ ದದ್ದಲ ಬಸನಗೌಡ ಹೇಳಿದರು. 

ಅವರಿಂದು ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ  ಮಾತನಾಡಿ ರಾಹುಲ್ ಗಾಂಧಿಯವರು ಅ.20 ರಂದು ರಾತ್ರಿ ಮಂತ್ರಾಲಯಕ್ಕಾಗಮಿಸಿ ತಂಗಲಿದ್ದು ಅ.21 ರಂದು ಬೆಳಿಗ್ಗೆ ರಾಯರ ಬೃಂದಾವನ ದರ್ಶನ ಪಡೆದ ನಂತರ ಗಿಲ್ಲೆಸುಗೂರು ತುಂಗಭದ್ರ ನದಿ ಸೇತುವೆಯಿಂದ ತಮ್ಮ ಪಾದಯಾತ್ರೆ ನಡೆಸಲಿದ್ದು ಪಾದಯಾತ್ರೆ ವೇಳೆ ನರೇಗಾ ಕಾರ್ಮಿಕರು ಸೇರಿದಂತೆ ಇನ್ನಿತರ ಶ್ರಮ ಜೀವಿಗಳೊಂದಿಗೆ ಸಂವಾದ ನಡೆಸಲಿದ್ದು ಕೆರೆ ಬೂದೂರು ಬಳಿ ಊಟೋಪಚಾರ ನಡೆಯಲಿದ್ದು ನಂತರ ಯರಗೇರಿ ವಾಲ್ಮೀಕಿ ವೃತ್ತದಲ್ಲಿ ಕಾರ್ನರ್ ಮೀಟಿಂಗ್‌ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಾರೆ ಎಂದರು.

ಅ.೨೧ ರಂದು ರಾತ್ರಿ ಯರಗೇರಿ ರಂಗನಾಥ ಸ್ವಾಮಿ ದೇವಸ್ಥಾನ ಬಳಿ ವಾಸ್ತವ್ಯ ಹೂಡಲಿದ್ದು ಅ.22 ರಂದು ಬೆಳಿಗ್ಗೆ ಪುನ: ತಮ್ಮ ಪಾದಯಾತ್ರೆ ಪಾರಂಬಿಸಲಿದ್ದು ನಂತರ ನಗರದ ಹೊರವಲಯದ ಬೃಂದಾವನ ಹೋಟೆಲ್ ನಲ್ಲಿ ಊಟೋಪಚಾರ ನಡೆಯಲಿದ್ದು ಸಂಜೆ ನಗರದ ಬಸವೇಶ್ವರ ವೃತ್ತದ ವಾಲ್ ಕಟ್ ಮೈದಾನದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದು ತದನಂತರ ಯರಮರಸ್ ಆನಂದ ಶಾಲೆಯಲ್ಲಿ ರಾತ್ರಿ ತಂಗಲಿದ್ದುಅ.23 ಬೆಳಿಗ್ಗೆ ಶಕ್ತಿನಗರ  ಕೃಷ್ಣಾ ನದಿ ಸೇತುವೆ ಮೂಲಕ ತೆಲಂಗಾಣಕ್ಕೆ ಪಾದಯಾತ್ರೆ ಮುಂದುವರೆಸಲಿದ್ದಾರೆ0ದರು.

ಭಾರತ ಜೋಡೋ ಯಾತ್ರೆ ಗ್ರಾಮೀಣ ಕ್ಷೇತ್ರದಲ್ಲಿ ಹೆಚ್ಚು ಕ್ರಮಿಸಲಿರುವ ಕಾರಣ ತಾವು ಸೇರಿದಂತೆ ಪಕ್ಷದ ನಾಯಕರು ಸಾಮೂಹಿಕವಾಗಿ ಜವಾಬ್ದಾರಿ ನಿಭಾಯಿಸಲಿದ್ದು ಬೀದರ್, ಕಲಬುರ್ಗಿ, ಯಾದಗೀರಿ, ಕೊಪ್ಪಳ ಜಿಲ್ಲೆಗಳ ಕಾರ್ಯಕರ್ತರು ತಮಗೆ ನಿಗದಿ ಪಡಿಸಿದ ದಿನಾಂಕದ0ದು ರಾಹುಲ್ ಗಾಂಧಿಯವರೊ0ದಿಗೆ ಹೆಜ್ಜೆ ಹಾಕಲಿದ್ದಾರೆಂದ ಅವರು ಸುಮಾರು 40 ಸಾವಿರ ಜನ ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು ಜಿಲ್ಲೆಯಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಬಹುದೆಂಬ ನಿರೀಕ್ಷೆಯಿದೆ ಎಂದ ಅವರು ಅ.೨೨ ರಂದು ಪ್ರಿಯಂಕ ಗಾಂಧಿಯವರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.


ಭಾರತ ಜೋಡೊ ಯಾತ್ರೆಯ ಬಗ್ಗೆ ಬಿಜೆಪಿ ಪಕ್ಷದ ನಾಯಕರು ಬೇಕಾ ಬಿಟ್ಟಿ ಹೇಳಿಕೆ ನೀಡುತ್ತಿದ್ದು ಅವರಿಗೆ ಭಾರತ ಜೋಡೊ ಯಾತ್ರೆಗೆ ಜನರ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿರುವ ಕಾರಣ ಭಯ ಪ್ರಾರಂಭವಾಗಿದೆ ಎಂದರು. 

ಗ್ರಾಮೀಣ ಪ್ರದೇಶದಲ್ಲಿ ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಕಾಂಗ್ರೆಸ್ ಶಾಸಕರ ಕ್ಷೇತ್ರವೆಂಬ ತಾತ್ಸಾರ ಮನೋಭಾವ ಬಿಜೆಪಿ ಸರ್ಕಾರ ತೋರುತ್ತಿದೆ ಎಂದರು.

ಗ್ರಾಮೀಣ ಕ್ಷೇತ್ರದಲ್ಲಿ ನಾನು ಅನೇಕ ಜನ ಪರ ಕೆಲಸ ಮಾಡಿದ್ದೇನೆ ಕೆರೆ ತುಂಬಿಸುವ ಕಾರ್ಯ, ಶಾಲೆಗಳು, ಆರೋಗ್ಯ ಕೇಂದ್ರಗಳು, ರಸ್ತೆಗಳ ನಿರ್ಮಾಣ ಮುಂತಾದವುಗಳನ್ನು ಮಾಡಿದ್ದು ಜನರಲ್ಲಿ ನಾನು ಮಾಡಿರುವ ದುಡಿಮೆಗೆ ಕೂಲಿ ಕೇಳುತ್ತೇನೆ ಅದೇನೆಂದರೆ ಮತ್ತೊಮ್ಮೆ ನನಗೆ ಆಶೀರ್ವದಿಸಿ ಎಂದು ಎಂದರು.

ಗ್ರಾಮೀಣ ಕ್ಷೇತ್ರದಲ್ಲಿ ಬಜೆಪಿ ಪಕ್ಷ ನಮಗೆ ನೇರ ಸ್ಪರ್ದೆ ಒಡ್ಡಲಿದ್ದು ಗ್ರಾಮೀಣದಲ್ಲಿ ತ್ರಿಕೋನ ಸ್ಲರ್ದೆಯಿಲ್ಲವೆಂದ ಅವರು ತಾವು ಬಿಜೆಪಿಗೆ ಸೇರ್ಪಡೆಯಾಗಬೇಕೆಂದು ಅನೇಕ ಸಲ ಅಮೀಷವೊಡ್ಡಿದ್ದರು ನನಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಮತ್ತು ನೂರಾರು ಕೋಟಿ ರೂ.ಗಳು ಅನುದಾನ ನೀಡುವ ಅಮೀಷ ದಿಕ್ಕರಿಸಿ ಕಾಂಗ್ರೆಸ್‌ನಲ್ಲಿ ನಿಷ್ಠಾವಂತ ಕಾರ್ಯಕಯರ್ತನಾಗಿ ದುಡಿಯುತ್ತಿದ್ದೇನೆಂದರು.

ನನ್ನ ಕ್ಷೇತ್ರದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶ  ಬರುವ ಕಾರಣಕ್ಕೆ ಅಧಿಕಾರಿಗಳು ಸಮಯ ನೀಡಲು ಆಗುತ್ತಿಲ್ಲ ಯರಗೇರಿಯನ್ನು ಹೊಸ ತಾಲೂಕಾ ಕೇಂದ್ರವನ್ನಾಗಿಸಿದರೆ ಆಡಳಿತಾತ್ಮಕವಾಗಿ ಅನುಕೂಲಕರವಾಗಲಿದ್ದು ಶಿವನಗೌಡ ನಾಯಕರು ಅರಕೇರಿ ತಾಲೂಕು ಮಾಡಿಸಿಕೊಂಡ0ತೆ ಯರಗೇರಿ ತಾಲೂಕು ರಚನೆಗೆ ಕಂದಾಯ ಸಚಿವರಿಗೆ ಮನವರಿಕೆ ಮಾಡಲಿ ಎಂದರು.

ರಾಜ್ಯಕ್ಕೆ ವಿದ್ಯುತ್ ನೀಡುವ ಅರ್‌ಟಿಪಿಎಸ್ ಮತ್ತು ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿರುವ ಸಮಸ್ಯೆ ಬಗ್ಗೆ ಸದನದಲ್ಲಿ ಧ್ವನಿಯತ್ತಿದ್ದೇನೆ ನಿನ್ನೆ ಕಾರ್ಮಿಕನೊಬ್ಬ ವೇತನ  ಹೆಚ್ಚಳ ಮಾಡುವಂತೆ ಆಗ್ರಹಿಸಿ ಚಿಮಣೀ ಏರಿದ ಬಗ್ಗೆ ಗಮನಕ್ಕೆ ಬಂದ ಕೂಡಲೆ ಮೇಲಾಧಿಕಾರಿಗಳಿಗೆ ಸೂಚಿಸಿ ಲಿಖಿತ ರೂಪದಲ್ಲಿ ಭರವಸೆ ನೀಡುವಂತೆ ತಾವು ಸಹ ಒತ್ತಾಯಿಸಿದ ಹಿನ್ನಲೆ ಕಾರ್ಮಿಕ ಚಿಮಣಿಯಿಂದ ಇಳಿದಿದ್ದಾನೆಂದರು. 

ಗ್ರಾಮೀಣ ಕ್ಷೇತ್ರದಲ್ಲಿ ಜುರಾಲಾ ಡ್ಯಾಂ ಹಿನ್ನೀರಿನಿಂದ ಜಲಾವೃತವಾಗಿರುವ ನಡುಗಡ್ಡೆ ಗ್ರಾಮಗಳ ಸೇತುವೆ ಕಾಮಗಾರಿ ತ್ವರಿತ ನಿರ್ಮಾಣಕ್ಕೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆಂದ ಅವರು ಈ ಹಿಂದೆ ಗುತ್ತಿಗೆ ಪಡೆದ ಗುತ್ತಿಗೆದಾರರು ಬದಲಾಗಿದ್ದು ಸರ್ಕಾರ ಕೂಡಲೆ ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕೆಂದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಗೌಡ, ಪಂಪಾಪತಿ, ನಾಗೇ0ದ್ರಪ್ಪ ಮಟಮಾರಿ ಸೇರಿದಂತೆ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಇದ್ದರು.





Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್