ಕನ್ನಡ ನಾಡು ಭಾಷೆ ಉಳುವಿಗಾಗಿ ಪ್ರತಿಜ್ಞೆ- ಬಿ.ಆರ್.ಅಂದಾನಿ
ಕನ್ನಡ ನಾಡು ಭಾಷೆ ಉಳುವಿಗಾಗಿ ಪ್ರತಿಜ್ಞೆ- ಬಿ.ಆರ್.ಅಂದಾನಿ
ರಾಯಚೂರು,ಅ.28- ಪ್ರಸ್ತುತ ದಿನಮಾನಗಳಲ್ಲಿ ತಂತ್ರಜ್ಞಾನ ಮುಂದುವರೆದಿದ್ದು ನಮ್ಮ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ನಮ್ಮತನ ಉಳುವಿಗಾಗಿ ಪ್ರತಿಯೊಬ್ಬ ಕನ್ನಡಿಗರು ಕನ್ನಡ ಭಾಷೆ ನಾಡಿಗೊಸ್ಕರ ನಾವೆಲ್ಲರೂ ಪ್ರತಿಜ್ಞೆ ಮಾಡಬೇಕಾಗಿದೆ ಎಂದು ರಾಯಚೂರು ಜಿಲ್ಲಾ ಕಾರಾಗೃಹ ಅಧಿಕ್ಷಕರಾದ ಬಿ.ಆರ್.ಅಂದಾನಿ ಕರೆ ನೀಡಿದರು.
ಅವರು ರಾಯಚೂರು ಜಿಲ್ಲಾ ಕಾರಾಗೃಹ ಹಾಗೂ ಸುಧಾರಣಾ ಸೇವೆ ಕೇಂದ್ರದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡಿದರು.
ನಮ್ಮ ಕನ್ನಡ ಭಾಷೆಯನ್ನು ಉಳಿಸುವ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬ ಕನ್ನಡಿಗರಾದ ನಾವು ಮಾಡಬೇಕು. ಈ ನಿಟ್ಟಿನಲ್ಲಿ ಇಂದು ಕನ್ನಡ ಭಾಷೆಗಾಗಿ ಕನ್ನಡ ನಾಡು ನುಡಿಗಾಗಿ ನಾವೆಲ್ಲರೂ ಶ್ರಮಪಡೋಣ ಎಂದರು.
ನಂತರ ಕಾರಾಗೃಹದ ಬೋದಕರಾದ ತಾಯರಾಜ್ ಮರ್ಚೆಟ್ಹಾಳ್ ಮಾತನಾಡಿ ದೇಶದಲ್ಲಿ ಅಳಿವಿನ ಅಂಚಿನಲ್ಲಿ ಹಲವು ಬಾಷೆಗಳಿವೆ. ಕನ್ನಡ ಭಾಷೆಯು ಪುರತಾನವಾದುದು ಮತ್ತು ಇತಿಹಾಸ ಹೊಂದಿದ ಬಾಷೆ. ಕನ್ನಡ ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರು ಕನ್ನಡವನ್ನು ಕಲಿಯುತ್ತಾ ಕನ್ನಡೇತರರಿಗೆ ಕನ್ನಡವನ್ನು ಕಲಿಸುತ್ತ ಕನ್ನಡ ಭಾಷೆಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಜೈಲರ್ ಗಳಾದ ಬಸವರಾಜ ಪಾಟೀಲ, ರಾಜಕುಮಾರ ದೊಡ್ಡಮನಿ, ಸಹಾಯಕ ಜೈಲರ್ ಗಳಾದ ಶ್ಯಾಮ ಬಿದರಿ, ಸಾವಿತ್ರಿಬಾಯಿ ಸಂಗೀತಗಾರರಾದ ಬುದೇಪ್ಪ , ರವಿ ಇದ್ದರು.
ಕೊನೆಯಲ್ಲಿ ಪ್ರತಿಜ್ಞಾ ವಿಧಿಯನ್ನು ಕಾರಗೃಹದ ಅಧೀಕ್ಷರು ಬೋಧಿಸಿದರು.
ಈ ಸಂದರ್ಭದಲ್ಲಿ ಕಾರಾಗೃಹದ ಸಿಬ್ಬಂದಿ ವರ್ಗ ಮತ್ತು ವಿಚಾರಣಾಧೀನ ಬಂಧಿ ನಿವಾಸಿಗಳು ಭಾಗವಹಿಸಿದ್ದರು.
Comments
Post a Comment