ಭಾರತ ಜೋಡೊ ಯಾತ್ರೆ: ಮಂತ್ರಾಲಯಕ್ಕೆ ರಾಹುಲ್ ಗಾಂಧಿ ಭೇಟಿ: ರಾಯರ ಬೃಂದಾವನ ದರ್ಶನ ಪಡೆದ ರಾಹುಲ್ ಗಾಂಧಿ

 


ಭಾರತ ಜೋಡೊ ಯಾತ್ರೆ: ಮಂತ್ರಾಲಯಕ್ಕೆ ರಾಹುಲ್ ಗಾಂಧಿ ಭೇಟಿ:

ರಾಯರ ಬೃಂದಾವನ ದರ್ಶನ ಪಡೆದ ರಾಹುಲ್ ಗಾಂಧಿ

ರಾಯಚೂರು,ಅ.೨೦- ಭಾರತ ಜೋಡೊ ಯಾತ್ರೆ ಅಂಗವಾಗಿ ಪಾದಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ರಾಯರ ಬೃಂದಾವನ ದರ್ಶನ ಪಡೆದರು. 

ನಂತರ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರಿ0ದ ಆಶೀರ್ವಾದ ಪಡೆದರು. ರಾಹುಲ್ ಗಾಂಧಿಯವರಿಗೆ ಪೀಠಾಧಿಪತಿಗಳು ಸ್ಮರಣಿಕೆ ಮತ್ತು ಫಲ ಮಂತ್ರಾಕ್ಷತೆ ಹಾಗೂ ಶೇಷ ವಸ್ತç   ನೀಡಿ ಅನುಗ್ರಹಿಸಿದರು.


ಪ್ರಾರಂಭದಲ್ಲಿ ಶ್ರೀ ಮಠಕ್ಕಾಗಮಿಸಿದ ಅವರು ಶ್ರೀ ಮಂಚಾಲಮ್ಮ ದೇವಿ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ ,ಶಾಸಕ ದದ್ದಲ ಬಸನಗೌಡ ಸೇರಿದಂತೆ ಕಾಂಗ್ರೆಸ್ ಮುಖಂಡರಿದ್ದರು.


ಶ್ರೀಸುಬುಧೇ0ದ್ರತೀರ್ಥರಿ0ದ ಪೂಜ್ಯಾಯಾ ರಾಘವೇಂದ್ರಾಯ.. ಮಂತ್ರ ಬೋಧನೆ: ರಾಯರ ಮೂಲ ಬೃಂದಾವನದ  ದರ್ಶನ ಪಡೆದ ನಂತರ ರಾಹುಲ್ ಗಾಂಧಿಯವರಿಗೆ ರಾಯರ ಮಂತ್ರವಾದ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ..ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೆ ಎಂಬ ಮಂತ್ರವನ್ನು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಬೋಧಿಸಿದರು. ಡಿ.ಕೆ.ಶಿವಕುಮಾರ ಸಹ ಮಂತ್ರೋಚ್ಛಾರಣೆ ಮಾಡಿದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ