ಭಾರತ ಜೋಡೊ ಯಾತ್ರೆ: ಗಿಲ್ಲೇಸುಗೂರು ತುಂಗಭದ್ರಾ ನದಿ ಸೇತುವೆ ಮೂಲಕ ಜಿಲ್ಲೆಗೆ ಪ್ರವೇಶ.


 ಭಾರತ ಜೋಡೊ ಯಾತ್ರೆ: ಗಿಲ್ಲೇಸುಗೂರು ತುಂಗಭದ್ರಾ ನದಿ ಸೇತುವೆ ಮೂಲಕ ಜಿಲ್ಲೆಗೆ ಪ್ರವೇಶ. ರಾಯಚೂರು,ಅ.21- ಭಾರತ ಜೋಡೊ ಯಾತ್ರೆ ತಾಲೂಕಿನ ಗಿಲ್ಲೇಸುಗೂರು ತುಂಗಭದ್ರ ನದಿ ಸೇತುವೆ ಮೂಲಕ ಜಿಲ್ಲೆಗೆ  ಪ್ರವೇಶಿಸಿದೆ.  ಸೇತುವೆ ಬಳಿ ಕಾಂಗ್ರೆಸ್ ಮುಖಂಡರು ಅಪಾರ ಸಂಖ್ಯೆಯ ಕಾರ್ಯಕರ್ತರು ಅದ್ದೂರಿಯಾಗಿ ಪಾದಯಾತ್ರೆ ಬರಮಾಡಿಕೊಂಡರು.         ಡೊಳ್ಳು, ಬ್ಯಾಂಡ್ ಸದ್ದು ಮೊಳಗಿತು ಕಲಾ ತಂಡಗಳು ಯಾತ್ರೆಯ ಮೆರಗು ಹೆಚ್ಚಿಸಿದವು. ಕಳೆದ ರಾತ್ರಿ ಮಂತ್ರಾಲಕ್ಕಾಗಮಿಸಿದ ರಾಹುಲ್ ಗಾಂಧಿ ರಾಯರ ಮೂಲ ಬೃಂದಾವನ ದರ್ಶನವಪಡೆದು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರಿಂದ ಆಶೀರ್ವಾದ ಪಡೆದುಕೊಂಡರು.                                   ಬೆಳಿಗ್ಗೆ ಮಂತ್ರಾಲಯದಿಂದ ಭಾರತ ಜೋಡೊ ಪಾದಯಾತ್ರೆ ಪ್ರಾರಂಭಗೊಂಡಿತು.

ಮಾಧವಾರಂ ಮೂಲಕ ಸಾಗಿದ ಪಾದಯಾತ್ರೆ ಗಿಲ್ಲೇಸುಗೂರು ಮುಖಾಂತರ ಜಿಲ್ಲೆ ಪ್ರವೇಶಿಸಿತು ಕೆರೆ ಬುದೂರು ನಲ್ಲಿ ಭೋಜನ ವಿರಾಮ ನಂತರ ಸಂಜೆ ಯರಗೇರಿಯಲ್ಲಿ ಇಂದಿನ ಪಾದಯಾತ್ರೆ ಅಂತ್ಯಗೊಳ್ಳಲಿದ್ದು ರಂಗನಾಥ ಸ್ವಾಮಿ ದೇವಸ್ಥಾನ ಬಳಿ ರಾಹುಲ್ ಗಾಂಧಿ ತಂಗಲಿದ್ದಾರೆ.     

 ಇಂದಿನ ಪಾದಯಾತ್ರೆಯಲ್ಲಿ  ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ,   ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಧ್ಯಕ್ಷ ಈಶ್ವರ ಖಂಡ್ರೆ, ಸಲೀಂ ಅಹ್ಮದ್, ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಬೋಸರಾಜು, ಶಾಸಕರಾದ  ಪ್ರಿಯಾಂಕ ಖರ್ಗೆ, ಅಜಯಸಿಂಗ್, ಅಮರೇಗೌಡ ಬಯ್ಯಾಪೂರು, ಬಸನಗೌಡ ದದ್ದಲ, ಬಸನಗೌಡ ತುರ್ವಿಹಾಳ,  ಯುತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ, ಕೆಪಿಸಿಸಿ ಕಾರ್ಯದರ್ಶಿ ಎ.ವಸಂತ ಕುಮಾರ್,ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್   ಸೇರಿದಂತೆ ಅನೇಕ ಶಾಸಕರು, ಮಾಜಿ ಶಾಸಕರು, ಪಕ್ಷದ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಮುಖಂಡರು, ಅಪಾರ ಸಂಖ್ಯೆಯಲ್ಲಿ  ಕಾರ್ಯಕರ್ತರಿದ್ದರು. ಪಾದಯಾತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ