ನಗರದ ವಾಲ್ಕಟ್ ಮೈದಾನದಲ್ಲಿ ಭಾರತ ಜೋಡೊ ಯಾತ್ರೆ ಬೃಹತ್ ಸಮಾವೇಶ: ಬಿಜೆಪಿ ಸರ್ಕಾರ ಕೇವಲ ಹಗರಣಗಳ ಸರ್ಕಾರವಾಗಿದೆ - ರಾಹುಲ್ ಗಾಂಧಿ
ನಗರದ ವಾಲ್ಕಟ್ ಮೈದಾನದಲ್ಲಿ ಭಾರತ ಜೋಡೊ ಯಾತ್ರೆ ಬೃಹತ್ ಸಮಾವೇಶ:
ಬಿಜೆಪಿ ಸರ್ಕಾರ ಕೇವಲ ಹಗರಣಗಳ ಸರ್ಕಾರವಾಗಿದೆ-ರಾಹುಲ್ ಗಾಂಧಿ
ರಾಯಚೂರು,ಅ.೨೨-ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಹಗರಣಗಳ (ಸ್ಕ್ಯಾಮ್) ಸರ್ಕಾರವಾಗಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಆರೋಪಿಸಿದರು.
ಅವರಿಂದು ಭಾರತ ಜೋಡೊ ಯಾತ್ರೆ ಅಂಗವಾಗಿ ನಗರದ ವಾಲ್ಕಟ್ ಮೈದಾನದಲ್ಲಿ ಆಯೋಜಿಸಲಾದ ಸೆಮಿ ಕಾರ್ನರ್ ಮೀಟಿಂಗ್ ಸಮಾವೇಶದಲ್ಲಿ ಮಾತನಾಡಿದರು.
ಭಾರತ ಜೋಡೊ ಯಾತ್ರೆ ಅಂಗವಾಗಿ ದಿನನಿತ್ಯ ಬೆಳಿಗ್ಗೆಯಿಂದ ಸಂಜೆವರೆಗೆ ನಮ್ಮ ನಡಿಗೆ ವೇಳೆ ಸಹಸ್ರಾರು ಜನರು ನಮ್ಮೊಂದಿಗೆ ಹೆಜ್ಜೆ ಹಾಕುತ್ತಾರೆ ಅವರು ನಮ್ಮೊಂದಿಗೆ ತಮ್ಮ ಕಷ್ಟ ಸುಖಗಳ ಬಗ್ಗೆ ಮನದಾಳದ ಮಾತನಾಡುತ್ತಾರೆ ದಿನ ನಿತ್ಯ ನಾವು ಅವರ ಕಷ್ಟ ಆಲಿಸಿ ಅವರಿಗೆ ನೈತಿಕ ಬಲ ನೀಡಲು ಕೆಲವೆ ನಿಮಿಷಗಳ ಕಾಲ ಅವರಿಗೆ ನಮ್ಮ ಭಾಷಣದಲ್ಲಿ ನಮ್ಮ ವಿಚಾರ ವ್ಯಕ್ತ ಪಡಿಸುತ್ತೇವೆಂದ ಅವರು ದೇಶದ ಬೆನ್ನೆಲುಬಾದ ರೈತನಿಗೆ ಜಿಎಸ್ಟಿ ಕರ ಭರಿಸುವ ಶಿಕ್ಷೆ ನೀಡಲಾಗುತ್ತಿದೆ ರಸಗೊಬ್ಬರ, ಬೀಜ, ಕೀಟ ನಾಶಕ, ಟ್ರಾö್ಯಕ್ಟರ್ ಮುಂತಾದವುಗಳ ಮೇಲೆಯೂ ಕರ ವಿಧಿಸಲಾಗುತ್ತದೆ ಅವರಿಗೆ ಸರಿಯಾದ ಬೆಂಬಲ ಬೆಲೆ ಅವರ ಬೆಳೆಗೆ ಸಿಗುತ್ತಿಲ್ಲವೆಂದರು.
ರಾಜ್ಯದ ಉದ್ದಗಲಕ್ಕೂ ಒಬ್ಬ ರೈತನು ಸಹ ತಾನು ಸಂತುಷ್ಟನಾಗಿದ್ದೇನೆ0ದು ಹೇಳಿಲ್ಲವೆಂದ ಅವರು ಯುವಕರ ಸ್ಥಿತಿಯೂ ಚಿಂತಾಜನಕವಾಗಿದೆ ಅವರಿಗೆ ಉದ್ಯೋಗ ಲಭಿಸುತ್ತಿಲ್ಲವೆಂದರು.
ಪಿಎಸೈ ಹುದ್ದೇ ಪಡೆಯಬೇಕೆಂದರೆ ೮೦ ಲಕ್ಷ ರೂ.ಲಂಚ ನೀಡಬೇಕಾದ ದುರ್ಗತಿ ಈ ಸರ್ಕಾರದಲ್ಲಿದೆ ಎಂದ ಅವರು ಕೇವಲ ನಿಮ್ಮ ಬಳಿ ಪದವಿ ಪ್ರಮಾಣ ಪತ್ರವಿದ್ದರೆ ಸಾಲದು ಜೇಬಿನಲ್ಲಿ ಲಕ್ಷಾಂತರ ರೂ. ಹಣವಿರಬೇಕು ಇಲ್ಲದಿದ್ದರೆ ನಿಮಗೆ ನೌಕರಿ ಲಭಿಸುವುದಿಲ್ಲ ಎಂದರು.
ರಾಜ್ಯದಲ್ಲಿ ಪ್ರತಿ ವಿಷಯದಲ್ಲಿ ಶೇ.೪೦ ರಷ್ಟು ಲಂಚ ನೀಡಬೇಕು ಇಲ್ಲದಿದ್ದರೆ ನಿಮ್ಮ ಕೆಲಸ ವಾಗುವುದಿಲ್ಲವೆಂದ ಅವರು ರೈತರಿಗೆ ಸಿಗಬೇಕಾದ ಕೊಳವೆಭಾವಿ ಯೋಜನೆಯಲ್ಲಿ ಸುಮಾರು ನಾಲ್ಕು ನೂರು ಕೋಟಿ ರೂ. ಹಗರಣವಾಗಿದೆ , ಭೋವಿ ಅಭಿವೃದ್ದಿ ನಿಗಮ, ಅಂಬೇಡ್ಕರ್ ಅಭಿವೃದ್ದಿ ನಿಗಮ, ವಾಲ್ಮೀಕಿ ಅಭಿವೃದ್ದಿ ನಿಗಮ ಮುಂತಾದ ಯೋಜನೆಗಳಲ್ಲಿ ಹಗರಣಗಳ ಸರಮಾಲೆ ಇದೆ ಎಂದರು.
ಇದೆಲ್ಲದರ ಮಧ್ಯೆ ದಿನ ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ, ಗ್ಯಾಸ್ ಬೆಲೆ ಒಂದು ಸಾವಿರ ದಾಟಿದೆ ಮೋದಿಯವರು ಏನು ಮಾತನಾಡುತ್ತಿಲ್ಲ ನಮ್ಮ ಸರ್ಕಾರದಲ್ಲಿ ನಾಲ್ಕು ನೂರು ಇದ್ದಾಗ ಬೆಲೆ ಏರಿಕೆಯಾಗಿದೆ ಎಂದು ಗದ್ದಲ ಮಾಡುತ್ತಿದ್ದರು ಎಂದರು.
ಚುನಾವಣೆ ಪೂರ್ವ ಮೋದಿಯವರು ಪ್ರತಿ ವರ್ಷ ಸುಮಾರು ೨ ಕೋಟಿ ಉದ್ಯೋಗ ನೀಡುತ್ತೇವೆಂದು ಭರವಸೆ ನೀಡಿದ್ದರು ಅದು ಆಗಿಲ್ಲ ನೋಟ್ ಬ್ಯಾನ್, ಜಿಎಸ್ಟಿ ತೆರಿಗೆ ಮುಂತಾದ ಜನ ವಿರೋಧಿ ನಿಲುವು ತಳೆದ ಸರ್ಕಾರ ಇದಾಗಲಿದೆ ಎಂದರು.
ಪ್ರಧಾನಿ ಮೋದಿಯವರ ಆಪ್ತ ವ್ಯಕ್ತಿ ವಿಶ್ವದ ಎರಡನೆ ಶ್ರೀಮಂತ ವ್ಯಕ್ತಿಯಾಗಿದ್ದಾನೆ ಇದೊಂದು ವಿಪರ್ಯಾಸದ ಸಂಗತಿ ಯಾಗಿದೆ ಇದೆಲ್ಲವನ್ನು ಜನರಿಗೆ ತಿಳಿಸಲು ಭಾರತ ಜೋಡೊ ಯಾತ್ರೆ ನಿಮ್ಮ ಬಳಿ ಬಂದಿದೆ ಎಂದರು.
ಅಖಿಲ ಭಾರತ ಕಾಂಗ್ರೆಸ್ ಪಕ್ಷದ ರಾಷ್ಟಿçÃಯ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆಯಾಗಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆಂದ ಅವರು ಯುಪಿಎ ಸರ್ಕಾರವಿದ್ದಾಗ ಈ ಭಾಗಕ್ಕೆ ಮೀಸಲಾತಿ ನೀಡಬೇಕೆಂದು ೩೭೧ಜೆ ತಿದ್ದುಪಡಿ ತರಲಾಯಿತು ಇದರಿಂದ ಸಹಸ್ರಾರು ಯುವಕರಿಗೆ ಉದ್ಯೋಗ ನೀಡಬಹುದಾಗಿತ್ತು ಆದರೆ ಈಗಿನ ಸರ್ಕಾರ ಅದನ್ನು ಸಮರ್ಪಕವಾಗಿ ಜಾರಿಗೆ ತಂದಿಲ್ಲವೆ0ದು ದೂರಿದರು. ನಾವು ೩೭೧ ಜೆ ತಿದ್ದುಪಡಿ ಮಾಡಲು ಯೋಚಿಸಿದಾಗ ಬಿಜೆಪಿ ರಾಷ್ಟಿçÃಯ ನಾಯಕರಾದ ವಾಜಪೇಯಿ, ಅಡ್ವಾನಿಯವರು ವಿರೋಧ ವ್ಯಕ್ತಪಡಿಸಿದ್ದರು ನಂತರ ನಮ್ಮ ಸರ್ಕಾರ ಕೇಂದ್ರದಲ್ಲಿ ಬಂದಾಗ ಅದನ್ನು ಜಾರಿಗೊಳಿಸಿತ್ತುಎಂದರು.
ಸುಮಾರು ೬೦ ಸಾವಿರ ಹುದ್ದೆ ಖಾಲಿ ಉಳಿದಿವೆ ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಅದನ್ನು ಜಾರಿಗೊಳಿಸುತ್ತೇವೆಂದು ಭರವಸೆ ನೀಡಿದ ಅವರು ಭಾರತ ಜೋಡೋ ಯಾತ್ರೆಗೆ ಕರ್ನಾಟಕ ಜನತೆ ಪ್ರೀತಿ ಶಕ್ತಿ ನೀಡಿದೆ ನಮ್ಮ ಕುಟುಂಬಕ್ಕೆ ರಾಜ್ಯದ ಅನ್ಯೋನ್ಯತೆಯಿದೆ ನಮ್ಮ ಅಜ್ಜಿ ಇಂದಿರಾಗಾ0ಧಿಗೆ ಚಿಕ್ಕಮಗಳೂರಿನಿಂದ ಲೋಕಸಭೆಗೆ ಕಳಿಸಿದ್ದೀರಿ, ಅದೆ ರೀತಿ ನಮ್ಮ ತಾಯಿ ಸೋನಿಯಾಗಾಂಧಿಯವರಿಗೆ ಬಳ್ಳಾರಿಯಿಂದ ಲೋಕಸಭೆ ಕಳಿಸಿದ್ದಿರಿ ನಾವು ಅದನ್ನು ಮರೆಯುವುದಿಲ್ಲವೆಂದ ಅವರು ನಿಮ್ಮ ಪ್ರೀತಿಗೆ ಚಿರಖುಣಿಯಾಗಿದ್ದೇನೆಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ ಭಾರತ ಜೋಡೊ ಯಾತ್ರೆ ನಮ್ಮ ರಾಜ್ಯಕ್ಕೆ ಸೆ.೩೦ ರಂದು ಚಾಮರಾಜ ನಗರ ಜಿಲ್ಲೆಯ ಗುಂಡ್ಲು ಪೇಟೆಯಿಂದ ಪ್ರವೇಶಿಸಿದ್ದು ಈ ಯಾತ್ರೆ ಕೈಗೊಳ್ಳಬೇಕೆಂದು ರಾಜಸ್ತಾನದ ಉದಯಪುರದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯಿಸಲಾಗಿತ್ತು ಕನ್ಯಾಕುಮಾರಿಯಿಂದ ಕಾಶ್ಮೀರದವೆರೆಗೆ ಯಾತ್ರೆ ನಡೆಯಲಿದ್ದು ರಾಜ್ಯದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಸ್ವತಂತ್ರ ಭಾರತದಲ್ಲಿ ಇದೊಂದು ಐತಿಹಾಸಿಕ ಪಾದಯಾತ್ರೆಯಾಗಿದ್ದು ೩೫೦೦ ಕಿ.ಮಿ ಕ್ರಮಿಸುವುದು ಸುಲಭದ ಮಾತಲ್ಲ ದೇಶದಲ್ಲಿ ನಡೆಯುತ್ತಿರುವ ದ್ವೇಷದ ರಾಜಕಾರಣ ಮತ್ತು ಸಂಘ ಪರಿವಾರದವರು ಕಾನೂನು ಕೈಗೆತ್ತಿಕೊಂಡು ದೇಶದಲ್ಲಿ ಅಶಾಂತಿ ಉಂಟು ಮಾಡುತ್ತಿರುವ ಸಂಗತಿ ಖಂಡನೀಯವಾಗಿದ್ದು ಇದನ್ನು ಪ್ರಶ್ನಿಸುವವರ ಮೇಲೆ ಗಧಾ ಪ್ರಹಾರ ಮಾಡಲಾಗುತ್ತಿದೆ ಎಂದ ಅವರು ದಿನ ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದು ಅದಕ್ಕೆ ಕಡಿವಾಣ ಹಾಕಬೇಕಿದೆ ಎಂದರು.
ಇತ್ತ ರಾಜ್ಯ ಸರ್ಕಾರ ಭ್ರಷ್ಠಾಚಾರ, ಹಗರಣದಲ್ಲಿ ಮುಳಿಗಿದ್ದು ಅಲ್ಲದೆ ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ತಿಂಗಳಿಗೆ ನೂರು ರೂ. ವಂತಿಕೆ ನೀಡಬೇಕೆಂದು ಸುತ್ತೋಲೆ ಹೊರಡಿಸಿದ್ದು ಅದನ್ನು ನಾವು ವಿರೋಧಿಸುತ್ತೇವೆಂದ ಅವರು ಇದೆಲ್ಲದಕ್ಕೂ ಮುಕ್ತಿ ಪಡೆಯಬೇಕು ದೇಶದಲ್ಲಿ ಸಮೃದ್ದಿ ಶಾಂತಿ ನೆಲೆಸಲು ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಹೇಳಿದರು.
ವೇದಿಕೆ ಮೇಲೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೆ.ಸಿ.ವೇಣುಗೋಪಾಲ, ರಣದೀಪಸಿಂಗ ಸುರ್ಜೆವಾಲ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ, ಈಶ್ವರ ಖಂಡ್ರೆ, ಮಾಜಿ ಸಚಿವ ಹೆಚ್.ಕೆ.ಪಾಟೀಲ, ಕೃಷ್ಣ ಭೈರೆಗೌಡ, ಶಿವರಾಜ ತಂಗಡಗಿ,ಹೆಚ್.ಆ0ಜಿನೇಯ, ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ, ಮಾಜಿ ಸಂಸದ ದೃವನಾರಾಯಣ, ಶಾಸಕ ಬಸನಗೌಡ ದ್ದದಲ,ಬಸನಗೌಡ ತುರ್ವಿಹಾಳ, ಡಿ.ಎಸ್. ಹೂಲಗೇರಿ,ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪೂರು, ಮಾಜಿ ಶಾಸಕ ಹಂಪನೌಡ ಬಾದರ್ಲಿ, ಸೈಯದ್ ಯಾಸೀನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ್, ಸೇರಿದಂತೆ ರಾಜ್ಯ ಮಟ್ಟದ ಮತ್ತು ಜಿಲ್ಲಾಮಟ್ಟದ ಮುಖಂಡರು ಇದ್ದರು. ಶಾಸಕ ಅಜಯಸಿಂಗ್ ರಾಹುಲ ಗಾಂಧಿ ಭಾಷಣ ಅನುವಾದಿಸಿದರು.
Comments
Post a Comment