ಮಂತ್ರಾಲಯ: ದೀಪಾವಳಿ ಅಂಗವಾಗಿ ವಿಶೇಷ ಪೂಜೆ
ಮಂತ್ರಾಲಯ: ದೀಪಾವಳಿ ಅಂಗವಾಗಿ ವಿಶೇಷ ಪೂಜೆ. ರಾಯಚೂರು,ಅ.24- ದೀಪಾವಳಿ ನರಕ ಚತುರ್ದಶಿ ಅಂಗವಾಗಿ ಶ್ರೀಮಠದಲ್ಲಿ ವಿಶೇಷ ಪೂಜೆಗಳು ನಡೆದವು. ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಶ್ರೀ ಮೂಲರಾಮದೇವರಿಗೆ, ಶ್ರೀ ರಾಯರಿಗೆ ಮತ್ತು ಇತರ ಬೃಂದವನಗಳಿಗೆ ತೈಲ ಅಭ್ಯಂಜನ ಮತ್ತು ಕಾರ್ತಿಕ ಮಂಗಳಾರತಿಯನ್ನು ಮಾಡಿದರು.
ನಂತರ ತುಳಸಿಪೂಜೆ ಮತ್ತು ಗೋ ಪೂಜೆಯನ್ನು ನೆರವೇರಿಸಿದರು. ನಂತರ ಉಂಜಲ ಮಂಟಪದಲ್ಲಿ ಶ್ರೀ ಶ್ರೀಪಾದಂಗಳವರಿಗೆ ತೈಲ ಅಭ್ಯಂಜನ ಮತ್ತು ನಾರೀಕೃತ ನಿರಾಜನವನ್ನು
ಮಾಡಲಾಯಿತು. ಶ್ರೀ ಶ್ರೀಪಾದಂಗಳವರು ಅನುಗ್ರಹ ಸಂದೇಶ ಹಾಗೂ ಮಂತ್ರಾಕ್ಷತೆ ಗಳೊಂದಿಗೆ ಭಕ್ತರನ್ನು ಆಶೀರ್ವದಿಸಿದರು.
Comments
Post a Comment