ಮಹಾರಾಷ್ಟ್ರದ ಜಲ್ನಾದಿಂದ ತಿರುಪತಿಗೆ ವಿಶೇಷ ರೈಲು
ಮಹಾರಾಷ್ಟ್ರದ ಜಲ್ನಾದಿಂದ ತಿರುಪತಿಗೆ ವಿಶೇಷ ರೈಲು. ರಾಯಚೂರು,ಅ.27- ಹಬ್ಬದ ಒತ್ತಡದ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ಭಾರತೀಯ ರೈಲ್ವೆಯು ಮಹಾರಾಷ್ಟ್ರದ ಜಲ್ನಾದಿಂದ ತಿರುಪತಿಗೆ ವಿಶೇಷ ರೈಲು ಬಿಡಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಬೋರ್ಡ ಸದಸ್ಯರಾದ ಬಾಬುರಾವ್ ತಿಳಿಸಿದ್ದಾರೆ. ಈ ವಿಶೇಷ ರೈಲುಗಳು ಅಕ್ಟೋ ಬರ್ 30, ನವಂಬರ 6, 13 ,20 ಮತ್ತು 27 ರಂದು ಮತ್ತು ಡಿಸೆಂಬರ್ 4 ರಂದು ಪ್ರಯಾಣಿಕರ ಸೇವೆಗೆ ಲಭ್ಯವಿರುತ್ತವೆ. ಈ ರೈಲುಗಳ ನಂಬರ್ 07413 ಆಗಿದೆ. ತಿರುಪತಿಯಿಂದ ಮಹಾರಾಷ್ಟ್ರದ ಜಾಲ್ನಾಕ್ಕೆ ಹೋಗುವ ( 07414 ) ರೈಲು ನವಂಬರ್ ತಿಂಗಳ 1, 8, 15, 22, ಮತ್ತು 29 ರಂದು ಹೊರಡುತ್ತದೆ. ಈ ರೈಲು ಬೀದರ,ಗುಲ್ಬರ್ಗಾ, ಯಾದಗಿರ, ರಾಯಚೂರ, ಮಂತ್ರಾಲಯ ಮತ್ತು ಗುಂತಕಲ್ ಮೂಲಕ ತಿರುಪತಿಗೆ ತೆರಳುತ್ತದೆ.ಇದು ತಿರುಪತಿ ಸಂಜೆ 6.35 ಕ್ಕೆ ಬಿಟ್ಟು ರಾಯಚೂರಗೆ 1.58 ಕ್ಕೆ ಬರುತ್ತದೆ.
ಪ್ರಯಾಣಿಕರು ಇದರ ಪ್ರಯೋಜನ ಪಡೆಯಲು ಬಾಬುರಾವ್ ಕೋರಿದ್ದಾರೆ.
Comments
Post a Comment