ರಾಜ್ಯೋತ್ಸವ ಅಂಗವಾಗಿ ಮನೆ ಮನೆಗೆ ನಾಡ ಧ್ವಜ ಕಾರ್ಯಕ್ರಮ-ಶಿವಶಂಕರ
ರಾಜ್ಯೋತ್ಸವ ಅಂಗವಾಗಿ ಮನೆ ಮನೆಗೆ ನಾಡ ಧ್ವಜ ಕಾರ್ಯಕ್ರಮ-ಶಿವಶಂಕರ
ರಾಯಚೂರು,ಅ.೨೭-ಕನ್ನಡ ರಾಜ್ಯೋತ್ಸವ ಅಂಗವಾಗಿ ಜೆಡಿಎಸ್ ಪಕ್ಷದಿಂದ ಮನೆ ಮನೆಗೆ ಕನ್ನಡ ನಾಡ ಧ್ವಜ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾ ಕಾರ್ಯಧ್ಯಕ್ಷ ಎನ್.ಶಿವಶಂಕರ ವಕೀಲರು ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಜೆಡಿಎಸ್ ಪಕ್ಷದ ವರಿಷ್ಟರ ಸೂಚನೆಯಂತೆ ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲೆಯಾದ್ಯಂತ ಮನೆ ಮನೆಗೆ ಕನ್ನಡ ನಾಡ ಧ್ವಜ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಉತ್ತಮವಾಗಿ ಕನ್ನಡ ನಾಡ ಧ್ವಜಾರೋಹಣ ನೆರವೇರಿಸುವವರಿಗೆ ಪ್ರಥಮ ಬಹುಮಾನವಾಗಿ ೨೫೦೦ ರೂ, ದ್ವಿತೀಯ ಬಹುಮಾನವಾಗಿ ೧೫೦೦ ಹಾಗೂ ತೃತೀಯ ಬಹುಮಾನವಾಗಿ ೧೦೦೦ ರೂ ನೀಡಲಾಗುತ್ತದೆ ಎಂದರು.
ಅ.೩೧ ರಂದು ನಗರದ ನಗರಸಭೆ ಮುಂಬಾಗದಲ್ಲಿ ಜೆಡಿಎಸ್ ಪಕ್ಷದಿಂದ ಸಾರ್ವಜನಿಕರಿಗೆ ಉಚಿತವಾಗಿ ಕನ್ನಡ ಬಾವುಟವನ್ನು ನೀಡಲಾಗುತ್ತದೆ ಎಂದರು.
ಜೆಡಿಎಸ್ ಶಾಸಕರಿರುವ ಕ್ಷೇತ್ರದಲ್ಲಿ ಹೆಚ್ಚಿನ ಬಾವುಟಗಳನ್ನು ವಿತರಿಸುವ ಕಾರ್ಯ ಮಾಡಲಾಗುತ್ತದೆ ಎಂದ ಅವರು ಜೆಡಿಎಸ್ ಪಕ್ಷ ಮಾತೃಭಾಷೆಗೆ ಪ್ರಧಾನ್ಯತೆ ನೀಡುವ ಪಕ್ಷವಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗಲಿದ್ದು ನಾಡು ನುಡಿ ಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಿಜಾಮುದ್ದೀನ್,ತಿಮ್ಮಾರೆಡ್ಡಿ, ದಾನಪ್ಪ ಯಾದವ್ ಇದ್ದರು.
Comments
Post a Comment