ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಶ್ರದ್ಧಾಂಜಲಿ ಸಭೆ: ಸುಧೀಂದ್ರ ಕಸ್ಬೆ ಬ್ರಾಹ್ಮಣ ಸಮಾಜದ ರಾಜಕೀಯ ಶಕ್ತಿಯಾಗಿದ್ದರು-ಡಿ.ಕೆ.ಮುರಳೀಧರ್

 



ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ  ಶ್ರದ್ಧಾಂಜಲಿ ಸಭೆ:

ಸುಧೀಂದ್ರ ಕಸ್ಬೆ ಬ್ರಾಹ್ಮಣ ಸಮಾಜದ ರಾಜಕೀಯ ಶಕ್ತಿಯಾಗಿದ್ದರು-ಡಿ.ಕೆ.ಮುರಳೀಧರ್


ರಾಯಚೂರು,ಅ.೩೦-ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಸುಧೀಂದ್ರ ಕಸ್ಬೆಯವರುಬ್ರಾಹ್ಮಣ ಸಮಾಜದ ರಾಜಕೀಯ ಶಕ್ತಿಯಾಗಿದ್ದರು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಸಂಚಾಲಕ ಡಿ.ಕೆ.ಮುರಳಿಧರ್ ಅಭಿಪ್ರಾಯ ಪಟ್ಟರು.

ಅವರಿಂದು ನಗರದ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದಿಂದ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸುಧೀಂದ್ರ ಕಸ್ಬೆ ಯವರು ಕಲ್ಮಲಾ ಕ್ಷೇತ್ರದಿಂದ ಆಯ್ಕೆಯಾಗಿ ಗುಂಡುರಾವ್ ಸರ್ಕಾರದಲ್ಲಿ ಮುಜರಾಯಿ ಮತ್ತು ಮಾರುಕಟ್ಟೆ ಸಚಿವರಾಗಿ ಅನೇಕ ಜನ ಪರ ಕಾರ್ಯ ಮಾಡಿದ್ದರು ಬ್ರಾಹ್ಮಣ ಸಮಾಜದ ಅನೇಕರಿಗೆ ಸಹಾಯ ಸಹಕಾರ ನೀಡಿದ್ದರು ಅಲ್ಲದೆ ನಾನು ನನ್ನ ಸಹೋದರ ಒಡಗೂಡಿ ಪತ್ರಿಕೆ ಮಾಡಿದಾಗ ಅದಕ್ಕೆ ಸಹಾಯ ಸಹಕಾರ ನೀಡಿದ್ದರು ಎಂದು ಅವರ ಒಡನಾಟ ಹಂಚಿಕೊAಡರು.

ಹಿರಿಯರಾದ ನರಸಿಂಗರಾವ್ ದೇಶಪಾಂಡೆ ಮಾತನಾಡಿ ನನ್ನ ಅತ್ಯುತ್ತಮ ಸ್ನೇಹಿತರಲ್ಲಿ ಅವರೊಬ್ಬರು ಆಗಿದ್ದರು ಜಿಲ್ಲೆಗೆ ಹತ್ತಿ ಮಾರುಕಟ್ಟೆ ಸ್ಥಾಪಿಸುವಲ್ಲಿ ಅವರ ಕೊಡುಗೆ ಇದೆ ವಿಶ್ವದಲ್ಲಿ ಎರಡನೆ ದೊಡ್ಡ ಹತ್ತಿ ಮಾರುಕಟ್ಟೆ ಎಂಬ ಹೆಗ್ಗಳಿಕೆ ಜಿಲ್ಲೆಗೆ ಬರಲು ಅವರು ಕಾರಣಕರ್ತರು ಅವರು ಸಮಾಜದ ಅನೇಕ ಅರ್ಹರಿಗೆ ನೌಕರಿ ಕೊಡಿಸಿ ಅನೇಕ ಕುಟುಂಬಗಳಿಗೆ ನೆರವಾಗಿದ್ದರು ಎಂದರು.


ಬOಡುರಾವ್ ಚಾಗಿ ಮಾತನಾಡಿ ನನ್ನ ಅವರ ನಡುವೆ ನಿಕಟ ಸಂಪರ್ಕವಿತ್ತು ಅವರು ಕಲ್ಮಲಾ ಕ್ಷೇತ್ರದಿಂದ ಶಾಸಕರಾಗಿ ಮಂತ್ರಿಯಾದ ಮೇಲೆ ಅನೇಕ ಜನ ಪರ ಕಾರ್ಯ ಮಾಡಿದರು ಗುರುರಾಜ ಭಜನಾ ಮಂಡಳಿಗೆ ಶಕ್ತಿ ತುಂಬಿದರು ಇಂದಿನ ಅನೇಕ ರಾಜಕೀಯ ನಾಯಕರಿಗೆ ರಾಜಕೀಯ ಗುರುವಾಗಿದ್ದರು ಅವರು ಪಕ್ಷ ಬದಲಾಯಿಸದೆ ಒಂದೆ ಪಕ್ಷದಲ್ಲಿ ಉಳಿದಿದ್ದರೆ ಮತ್ತಷ್ಟು ರಾಜಕೀಯ ಬೆಳವಣಿಗೆ ಕಾಣಬಹುದಿತ್ತು ಎಂದು ಅವರೊಂದಿಗೆ ಒಡನಾಟ ಹಂಚಿಕೊ0ಡರು.

ಕಿಶನರಾವ್ ವ್ಯಕ್ರನಾಳ ಮಾತಾನಡಿ ಕಸಬೆ ಅವರು ನಾನು ಸಹಪಾಠಿಯಾಗಿದ್ದೆವು ಅವರು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವ ಮುಂಚಿನಿ0ದಲು  ಅವರೊಂದಿಗಿರುವ ಒಡನಾಟ ಹಂಚಿಕೊ0ಡು ಕಾಡ್ಲೂರು ದೇಸಾಯಿವರು ಕಸ್ಬೆ ಅವರಿಗೆ ಚುನಾವಣೆಯಲ್ಲಿ ಕ್ಯಾನವಸಿಂಗ್ ಮಾಡಲು ತಮ್ಮ ಸ್ವಂತ ಜೀಪನ್ನು ನೀಡಿದ್ದರು ಎಂದು ಅಂದಿನ ದಿನಗಳನ್ನು ಸ್ಮರಿಸಿಕೊಂಡರು.

ಪ್ರಾಣೇಶ ಮುತಾಲಿಕ ಮಾತನಾಡಿ ಕಸ್ಬೆ ಸಹೃದಯಿ ವ್ಯಕ್ತಿಯಾಗಿದ್ದರು ಅವರು ಮಂತ್ರಿಯಾಗಿದ್ದಾಗ ಶಾಲಾ ಕಾಲೇಜು, ಸರ್ಕಾರಿ ಕಟ್ಟಡಗಳ ನಿರ್ಮಾಣವಾದವು ಎಂದು ಅವರ ಅಭೀವೃದ್ದಿ ಕಾರ್ಯ ಕೊಂಡಾಡಿದರು.


ಡಾ.ಆನ0ದ ತೀರ್ಥ ಫಡ್ನೀಸ್ ಮಾತನಾಡಿ ಅವರು ಜಿಲ್ಲೆಯ ಬ್ರಾಹ್ಮಣ ಸಮುದಾಯದಿಂದ ಮಂತ್ರಿಯಾದ ಏಕೈಕ ವ್ಯಕ್ತಿ ಜಿಲ್ಲೆಗೆ ಕೀರ್ತಿ ತಂದಿದ್ದರು ಎಂದು ಅವರ ನಿಧನಕ್ಕೆ ಶ್ರದ್ದಾಂಜಲಿ ಸಲ್ಲಿಸಿದರು.

ಜಯ ಕುಮಾರ್ ದೇಸಾಯಿ ಕಾಡ್ಲೂರ ಮಾತನಾಡಿ ಕಸ್ಬೆಯವರು ಸಚಿವರಾಗಿದ್ದಾಗ ಮಾಡಿರುವ ಅನೇಕ ಕಾರ್ಯಗಳನ್ನು ಜನರು ಇಂದಿಗೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಅವರಿಗೆ ನಮ್ಮ ತಂದೆಯವರು ಅನೇಕ ಸಹಾಯ ಮಾಡಿದ್ದನ್ನು ಕೆಲವರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ ಎಂದರು.

ರಾಘವೇ0ದ್ರರಾವ್ ಕಲ್ಮಲಾ ಮಾತನಾಡಿ ಅಂದಿನ ಕಾಂಗ್ರೆಸ್ ಪಕ್ಷದಲ್ಲಿ ಜಿಲ್ಲೆಯಲ್ಲಿ ಅವರೊಬ್ಬರೆ ಮಂತ್ರಿಯಾಗಲು ಅರ್ಹರಿದ್ದರು ಅನೇಕ ರಾಜಕೀಯ ನಾಯಕರನ್ನು ಬೆಳೆಸಿದ್ದರು ಎಂದು ಅವರ ಒಟನಾಟ ಹಂಚಿಕೊ0ಡರು.

ಗಣೇಕಲ ರಾಮರಾವ್ ಮಾತನಾಡಿ ಸುಧೀಂದ್ರ ಕಸ್ಬೆ ತಮಗೆ ನೆಂಟರು ಆಗಿದ್ದರು ಅವರು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಎಂದರು.

ಪ್ರಹ್ಲಾದ ಕಲ್ಮಲಾ ವಕೀಲರು ಮಾತನಾಡಿ ಕಲ್ಮಾಲಾ ಕ್ಷೇತ್ರದಿಂದ ಅವರು ಜಯಿಸಿದಾಗ ನಾವಿನ್ನು ಶಾಲಾ ವಿದ್ಯಾರ್ಥಿಗಳಾಗಿದ್ದೆವು ಅವರನ್ನು ನಾವು ಸಮಿಪದಿಂದ ಬಲ್ಲವರಾಗಿದ್ದು ನಮಗೆ ಅವರು ಬಂಧುಗಳಾಗಬೇಕು ಎಂದರು.

ವಸುಧೇ0ದ್ರ ಸಿರವಾರ ಮಾತನಾಡಿ  ಅವರೊಂದಿಗೆ ತಮ್ಮ ಕುಟು0ಬ ಬಾಂಧವ್ಯ ಮತ್ತು  ತಮ್ಮ ತಂದೆಯವರೊ0ದಿಗೆ ಬಾಂಧವ್ಯ ಸ್ಮರಿಸಿಕೊಂಡರು.

ವಿನೋದ ಸಾಗರ್ ಮಾತನಾಡಿ ಅವರ ಅನ್ನದ ಋಣ ನಮ್ಮ ಮೇಲಿದೆ ಎಂದು ಅವರ ಸಹಕಾರ ಮನೋಭಾವ ಕೊಂಡಾಡಿದರು.

ಶ್ರದ್ದಾ0ಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸುಧೀರ್, ವೇಣುಗೋಪಾಲ ಇನಾಂದಾರ್, ವಿಷ್ಣುತೀರ್ಥ ಸಿರವಾರ್, ವೆಂಕಟೇಶ ಕೋಲಾರ್,ತಿರುಮಲರಾವ್, ವಿನೋದ ಕಕ್ಕೇರಿ,ಪ್ರಸನ್ನ ಆಲಂಪಲ್ಲಿ, ವೆಂಕಟೇಶ ನವಲಿ, ತಾರಾನಾಥ ಜೇಗರಕಲ್,ಸುಬ್ಬರಾವ್,ಹನುಮೇಶ,ಪಾಂಡುರ0ಗ ಕುರ್ಡಿಕರ್,ಅನಿಲ್ ಕುಮಾರ್, ಪ್ರಹ್ಲಾದ್  ಸೇರಿದಂತೆ ಸಮಾಜದ ಅನೇಕರು ಉಪಸ್ಥಿತರಿದ್ದರು.


 


 


 

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್