ಬಿಜೆಪಿಯಿಂದ ಮಾತ್ರ ಶೋಷಿತರಿಗೆ ಮೀಸಲಾತಿ ನೀಡಲು ಸಾಧ್ಯ: ಐದು ವರ್ಷಕ್ಕೊಮ್ಮೆ ಸಿದ್ದರಾಮಯ್ಯಗೆ ಅಹಿಂದ ನೆನಪಾಗುತ್ತದೆ-ಶ್ರೀರಾಮುಲು

 


ಬಿಜೆಪಿಯಿಂದ ಮಾತ್ರ ಶೋಷಿತರಿಗೆ ಮೀಸಲಾತಿ ನೀಡಲು ಸಾಧ್ಯ: 

ಐದು ವರ್ಷಕ್ಕೊಮ್ಮೆ ಸಿದ್ದರಾಮಯ್ಯಗೆ ಅಹಿಂದ ನೆನಪಾಗುತ್ತದೆ-ಶ್ರೀರಾಮುಲು

ರಾಯಚೂರು,ಅ.೩೧-ಮಾಜಿ ಸಿಎಂ ಸಿದ್ದರಾಮಯ್ಯರವರಿಗೆ ಪಂಚವಾರ್ಷಿಕ ಯೋಜನೆಯಂತೆ ಐದು ವರ್ಷಕ್ಕೊಮ್ಮೆ ಮಾತ್ರ ಅಹಿಂದಾ ನೆನಪಿಗೆ ಬರುತ್ತದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.

ಅವರಿಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾದ ಎಸ್ಟಿ ಸಮಾವೇಶ ಪೂರ್ವಭಾವಿ ಸಭೆಗೂ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಮಾಜಿ ಸಿಎಂ ಸಿದ್ದರಾಮಯ್ಯರವರಿಗೆ ಐದು ವರ್ಷಕ್ಕೊಮ್ಮೆ ಮಾತ್ರ ಬಡವರು ಅಲ್ಪಸಂಖ್ಯಾತರು ಹಿಂದುಳಿದವರು ದಲಿತರು  ನೆನಪಿಗೆ ಬರುತ್ತಾರೆ ಎಂದು ಲೇವಡಿ ಮಾಡಿದರು.

ಬಿಜೆಪಿ ಸರ್ಕಾರದಲ್ಲಿ ಸಿಎಂ ಬೊಮ್ಮಾಯಿಯವರು ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚು ಮಾಡಿದ್ದು ಐತಿಹಾಸಿಕ ತೀರ್ಮಾನವಾಗಿದ್ದು ಅದನ್ನು ಸಹಿಸದೆ ಕಾಂಗ್ರೆಸ್ ಪಕ್ಷದ ನಾಯಕರು ಇಲ್ಲ ಸಲ್ಲದ ಹೇಳಿಕೆ ನೀಡಿ ಇದೊಂದು ಚುನಾವಣೆ ತಂತ್ರವೆ0ದು ಅರೋಪಿಸುತ್ತಿರುವುದು ಅವರಿಗೆ ಹತಾಶೆ ಮನೋಭಾವ ಕಾಡುತ್ತಿದೆ ಎಂದರು.

೨೦೧೬ ರಲ್ಲಿ ರಾಜ್ಯ ಸರ್ಕಾರದ ಪ್ರಿನ್ಸಿಪಲ್ ಸೆಕ್ರೆಟರಿ ಕೆಳ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು  ಶಿಫಾರಸ್ಸು ಮಾಡಿದ್ದರು ಅಂದು ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದರು ಅವರೇಕೆ ಆಗ ಆಯೋಗ ರಚಿಸಿ ಮೀಸಲಾತಿ ಹೆಚ್ಚಳ ಮಾಡಲಿಲ್ಲವೆಂದು ಪ್ರಶ್ನಿಸಿದರು.


ಸಿದ್ದರಾಮಯ್ಯ ಕೇವಲ ಸುಳ್ಳು ಹೇಳಿಕೆ ನೀಡುತ್ತಾರೆ ಸುಳ್ಳು ಅವರ ಮನೆ ದೇವರು ಇರಬಹುದೆಂದ ಕುಟುಕಿದ ಅವರು ಈ ರಾಜ್ಯದಲ್ಲಿ ಮೀಸಲಾತಿ ನೀಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ನೀಡದಿರುವ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ ಎಂದ ಅವರು ಬೋಮ್ಮಾಯಿ ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ನೀಡಿದ್ದು ಅವರ ಹೃದಯ ವೈಶಲ್ಯತೆ ತೋರಿಸುತ್ತದೆ ಅಂತಹ ಹೃದಯವಂತಿಕೆ ಕಾಂಗ್ರೆಸ್ ಪಕ್ಷದವರಿಗೆ ಇಲ್ಲವೆಂದರು.

ರಾಹುಲ ಗಾಂಧಿ ಭಾರತ ಜೋಡೊ ಯಾತ್ರೆ ಮಾಡಿದ್ದು ಅದು ಸಿದ್ದು ಡಿಕೆಶಿ ಜೋಡೊ ಆಗಿದೆ ಎಂದು ಲೇವಡಿ ಮಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಹಿಂದುಳಿದ ವರ್ಗ ಪರಿಶಿಷ್ಟ ವರ್ಗ ಪರಿಶಿಷ್ಟ ಪಂಗಡಗಳ ಬಗ್ಗೆ ಕಾಳಜಿಯಿಲ್ಲವೆಂದರು.

ಮಾಜಿ ಸಿಎಂ ಸಿದ್ದರಾಮಯ್ಯನವರು ಕಿಕ್ ಬ್ಯಾಕ್ ಪಡೆದು ಹುದ್ದೆ ನೀಡಿದ್ದಾರೆ, ಚೆಕ್ ಮೂಲಕ ಲಂಚ ಪಡೆದಿದ್ದಾರೆ ಎಂಬ ಅರೋಪ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ನನಗೆ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ ಅಪೂರ್ಣ ಮಾಹಿತಿ ಹಿನ್ನಲೆ ನಾನು ಅದರ ಬಗ್ಗೆ ಪ್ರತಿಕ್ರಯಿಸುವುದಿಲ್ಲವೆಂದರು.

ಜನಾರ್ಧನ ರೆಡ್ಡಿ ಬಿಜೆಪಿ ಬಗ್ಗೆ ಅಸಮಾಧಾನ ಹೊರಹಾಕಿದ್ದು ಪತ್ರಿಕೆ ಮೂಲಕ ತಿಳಿದುಕೊಂಡಿದ್ದೇನೆ ಅವರೊಂದಿಗೆ ಚರ್ಚಿಸುತ್ತೇನೆಂದ ಅವರು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತೊಮೆ ಬಿಜೆಪಿ ಸರ್ಕಾರ ಬರುತ್ತದೆ ಎಂದರು.

ಸಾರಿಗೆ ಇಲಾಖೆಯ ಕುಂದು ಕೊರತೆ ನೀಗಿಸುತ್ತೇನೆ ಡಕೋಟಾ ಬಸ್ಸುಗಳ ಬದಲಿಗೆ ಸುಸಜ್ಜಿತ ೧೬೦೦ ಎಲೆಕ್ಟಿçಕ್ ಬಸ್ಸುಗಳ ಖರೀದಿ ಮಾಡಲಾಗುತ್ತದೆ ೨೦೩೦ ನೇ ಇಸ್ವಿ ವೇಳೆಗೆ ೨೭೦೦೦ ಎಲೆಕಟ್ರಿಕ್ ಬಸ್ಸು ಖರೀದಿಸುವ ಬಗ್ಗೆ ಈಗಾಗಲೆ ಯೋಜನೆ ರೂಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ರಾಜು ಗೌಡ, ಕೆ.ಶಿವನಗೌಡ ನಾಯಕ, ಸಂಸದ ಅಮರೇಶ್ವರ ನಾಯಕ, ಮಾಜಿ ಶಾಸಕರಾದ ತಿಪ್ಪರಾಜ ಹವಾಲ್ದಾರ್, ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ಅಯ್ಯಪ್ಪ ನಾಯಕ ಇದ್ದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್