ಸೂರ್ಯ ಗ್ರಹಣ : ದೇವಸ್ಥಾನ, ಮಠಗಳಲ್ಲಿ ಗ್ರಹಣ ಶಾಂತಿ ಹೋಮ.
ಸೂರ್ಯ ಗ್ರಹಣ : ದೇವಸ್ಥಾನ, ಮಠಗಳಲ್ಲಿ ಗ್ರಹಣ ಶಾಂತಿ ಹೋಮ. ರಾಯಚೂರು,ಅ.25- ಸೂರ್ಯ ಗ್ರಹಣ ಅಂಗವಾಗಿ ವಿವಿಧ ದೇವಸ್ಥಾನಗಳಲ್ಲಿ ಗ್ರಹಣ ಶಾಂತಿ ಹೋಮ ನಡೆಯಿತು. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ರಾಯರ ಬೃಂದಾವನಕ್ಕೆ ಮಂಗಳಾರತಿ ನೆರವೇರಿಸಿದರು. ಗ್ರಹಣ ಶಾಂತಿ ಮತ್ತು ನವಗ್ರಹ ಶಾಂತಿ ಹೋಮ ನೆರವೇರಿಸಲಾಯಿತು .
ತಾಲೂಕಿನ ಕಾಡ್ಲೂರು ಕೃಷ್ಣಾ ನದಿ ತೀರದ ಶ್ರೀ ವನವಾಸಿ ರಾಮದೇವರ ಹಾಗೂ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನದಲ್ಲಿ ಸ್ತೋತ್ರಗಳ ಪಠಣ, ಮಂಗಳಾರತಿ ನೆರವೇರಿತು ಗ್ರಾಮದ ವಿಪ್ರ ಬಾಂಧವರು ಭಾಗವಹಿಸಿದ್ದರು.
ನಗರದ ಜವಾಹರ ನಗರ ರಾಯರ ಮಠದಲ್ಲಿ , ಗಾಜಗಾರಪೇಟೆ ಉತ್ತರಾಧಿ ಮಠದಲ್ಲಿ ಹೋಮ ನೆರವೇರಿತು ಮಾರುತಿ ಭಜನಾ ಮಂಡಳಿ ಸದಸ್ಯರು ಭಾಗವಹಿಸಿದ್ದರು.
ಎನ್ ಜಿ ಓ ಕಾಲೋನಿ ವೆಂಕಟರಮಣ ದೇವಸ್ಥಾನ, ಜೋಡು ವೀರಾಂಜಿನೇಯ ದೇವಸ್ಥಾನ,
ಮಾಧವ ತೀರ್ಥ ಮಠ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ
ಹೋಮ ನೆರವೇರಿತು. ಭಕ್ತರು ದೇವರ ನಾಮಸ್ಮರಣೆಯಲ್ಲಿ ತೊಡಗಿದ್ದರು. ಗ್ರಹಣ ಮೋಕ್ಷ ನಂತರ ನದಿ, ಭಾವಿಗಳಲ್ಲಿ ಜನರು ಸ್ನಾನಗೈದರು.
Comments
Post a Comment