ಭಾರತ ಜೋಡೊ ಪಾದಯಾತ್ರೆ ಭದ್ರತೆಗೆ ೨ ಸಾವಿರ ಪೊಲೀಸರ ನಿಯೋಜನೆ : ರಾಹುಲ್ ಗಾಂಧಿ ಪಾದಯಾತ್ರೆ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ನಿಷೇಧ- ನಿಖಿಲ್.ಬಿ


 ಭಾರತ ಜೋಡೊ ಪಾದಯಾತ್ರೆ ಭದ್ರತೆಗೆ ೨ ಸಾವಿರ ಪೊಲೀಸರ ನಿಯೋಜನೆ:

ರಾಹುಲ್ ಗಾಂಧಿ ಪಾದಯಾತ್ರೆ ಮಾರ್ಗದಲ್ಲಿ ವಾಹನಗಳ  ಸಂಚಾರಕ್ಕೆ ನಿಷೇಧ-ನಿಖಿಲ್.ಬಿ

ರಾಯಚೂರು,ಅ.೧೯-ಜಿಲ್ಲೆಯಲ್ಲಿ ಮೂರು ದಿನಗಳ ವರೆಗೆ ನಡೆಯುವ ಭಾರತ ಜೋಡೊ ಪಾದ ಯಾತ್ರೆ ಹಿನ್ನಲೆ ಭದ್ರತೆಗಾಗಿ ಸುಮಾರು ಎರೆಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದ್ದು ಪಾದಯಾತ್ರೆ ಸಂಚರಿಸುವ ಮಾರ್ಗದಲ್ಲಿ ಸಂಚಾರ ನಿಷೇಧಿಸಲಾಗಿದ್ದು ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ .ಬಿ ಹೇಳಿದರು.

ಅವರಿಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಭಾರತ ಜೋಡೊ ಪಾದಯಾತ್ರೆ ಜಿಲ್ಲೆಯಲ್ಲಿ ಸಂಚರಿಸುವ ಹಿನ್ನಲೆ ಭದ್ರತಾ ದೃಷ್ಟಿಯಿಂದ ಕೆಲ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ ಅವರು ಪಾದಯಾತ್ರೆ ಸಾಗುವ ಮಾರ್ಗದಲ್ಲಿ ನಿಗದಿತ ಸಮಯದಲ್ಲಿ ಸಾರ್ವಜನಿಕರ ಮತ್ತು ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು ಅದಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಿಲಾಗಿದ್ದು ವಾಹನ ಸವಾರರು ಆ ಮಾರ್ಗದಲ್ಲಿ ಸಂಚರಿಸಬೇಕೆ0ದರು.

ನಗರದಲ್ಲಿ ಪೊಲೀಸ್ ಇಲಾಖೆಯಿಂದ ಬ್ಯಾನರ್ ಅಳವಡಿಸುವ ಮೂಲಕ ಜನರಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದ್ದು ಸಾರ್ವಜನಿಕರು, ವ್ಯಾಪಾರಸ್ಥರು, ಶಾಲಾ ,ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದ0ತೆ ಕ್ರಮ ವಹಿಸಲಾಗಿದೆ ಎಂದ ಅವರು ವ್ಯಾಪಾರ ವಹಿವಾಟಿಗೆ ಯಾವುದೆ ಅಡೆ ತಡೆ ಮಾಡುವುದಿಲ್ಲವೆಂದರು.


ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ: ಅ.೨೧ ರಂದು ಬೆಳಿಗ್ಗೆ ೫ ರಿಂದ ರಾತ್ರಿ ೧೦ ರವರೆಗೆ ರಾಯಚೂರಿನಿಂದ ಮಂತ್ರಾಲಯಕ್ಕೆ ತೆರಳುವವರು ತುಂಟಾಪೂರು, ಕ್ರಾಸ್, ಮಾಸದೊಡ್ಡಿ,, ಜಂಬಲದಿನ್ನಿ,ಪುಚ್ಚಲದಿನ್ನಿ,, ಇಡಪನೂರು, ಗಾಣಧಾಳ,ಗಿಲ್ಲೆಸುಗೂರು ಕ್ಯಾಂಪ್ ಮಾರ್ಗವಾಗಿ ಸಂಚರಿಸಬೇಕು. ಮಂತ್ರಾಲಯದಿ0ದ ರಾಯಚೂರಿಗೆ ಬರುವ ವಾಹನಗಳು ಗಿಕಲ್ಲೆಸುಗೂರು, ತುರಕನಡೋಣಿ,ಪುರತಿಪ್ಲಿ,ನಾಗಲಾಪೂರು, ಉಡುಮಗ ಖಾನಾಪೂರು , ಆಶಾಪೂರು ಮಾರ್ಗವಾಗಿ ಸಂಚರಿಸಬೇಕು.

ಅ.೨೨ ರಂದು ಬೆಳಿಗ್ಗೆ ೫ ರಿಂದ ರಾತ್ರಿ ಹತ್ತರವೆಗೆ ರಾಯಚೂರು ನಿಂದ ಮಂತ್ರಾಲಯಕ್ಕೆ ತೆರಳುವವರು ನವೋದಯ ಕಾಲೇಜು, ಸಿದ್ದರಾಮಪೂರು,ಬಿಜನಗೇರಿ, ರಾಜಲಬಂಡಿ, ಮಾಸದೊಡ್ಡಿ,ಜಂಬಲದಿನ್ನಿ, ಪುಚ್ಚಲದಿನ್ನಿ,ಇಡಪನೂರು,ಗಾಣಧಾಳ,ಗಿಲ್ಲೆಸುಗೂರು ಮುಖಾಂತರ ತೆರಳಬೇಕು .ಅ.೨೨ ರಂದು ಶಕ್ತಿನಗರದಿಂದ ಬರುವವರು ಬೆಳಿಗ್ಗೆ ೫ ರಿಂದ ರಾತ್ರಿ ೧೦ರವರೆಗೆ ಶಕ್ತಿ ನಗರ ೨ನೇ ಕ್ರಾಸ್, ಗಂಜಳ್ಳಿ,ಇಬ್ರಾಹಿ0ದೊಡ್ಡಿ,ಸಗಮಕು0ಟಾ,ಯರಗು0ಟಾ,ವಡ್ಡೆಪಲ್ಲಿ,ಅಪ್ಪನದೊಡ್ಡಿ,ನಾಗನದೊಡ್ಡಿ,ಮ0ಡ್ಲಗೇರಾ, ಸಿಂಗನೋಡಿ,ಬಾಪೂರು,ಐಜಾಪೂರು,ರಾಜಲಬ0ಡಿ,ಮುಖಾ0ತರ ಮಂತ್ರಾಲಯಕ್ಕೆ ತೆರಳಬೇಕು.

ಅ.೨೨ ರಂದು ಬೆಳಿಗ್ಗೆ ೫ ರಿಂದ ರಾತ್ರಿ ೧೦ರವರೆಗೆ ಶಕ್ತಿನಗರ ದಿಂದ ಮಾನ್ವಿ ಕಡೆಗೆ ಹೋಗುವವರು ಕುಕನೂರು , ಮರ್ಚೆಡ್,ಮಂಚಲಾಪೂರು,ಯಕ್ಲಾಸಪೂರು, ಬೈಪಾಸ್ ಮಾಘವಾಗಿ ತೆರಳಬೇಕು ಪರ್ಯಾಯ ಮಾರ್ಗದಲ್ಲಿ ಸಂಚರಿಸಿ ಸಹಕರಿಸುವಂತೆ ಕೋರಿದರು.

ಪೊಲೀಸ್ ಸಿಬ್ಬಂದಿ ನಿಯೋಜನೆ:  ಎಸ್ಪಿ, ಎಎಸ್ಪಿ, ೬ ಡಿಎಸ್ಪಿ, ೨೬ ಸಿಪಿಐ, ೭೩ ಪಿಎಸ್‌ಐ, ೧೪೦೮ ಪಿಸಿ, ೯೬ ಮಹಿಳಾ ಪೊಲೀಸ್, ೨೦೦ ಗೃಹ ರಕ್ಷಕ ದಳ ನಿಯೋಜಿಸಲಾಗಿದೆ. 

ನೆರೆಯ ಆಂಧ್ರ ಮತ್ತು ತೆಲಂಗಾಣ ಪೊಲೀಸರೊಂದಿಗೆ ಸಮಾಲೊಚನೆ ಸಭೆ ನಡೆಸಲಾಗಿದೆ ಎಂದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್