ದೇವದುರ್ಗದಲ್ಲಿ ಕೆ.ಶಿವನಗೌಡ ನಾಯಕರ ನಿರಂಕುಶ ಆಡಳಿತ ವಿರುದ್ದ ನ.೪ ರಂದು ಪ್ರತಿಭಟನೆ-ವಿರುಪಾಕ್ಷಿ
ದೇವದುರ್ಗದಲ್ಲಿ ಕೆ.ಶಿವನಗೌಡ ನಾಯಕರ ನಿರಂಕುಶ ಆಡಳಿತ ವಿರುದ್ದ ನ.೪ ರಂದು ಪ್ರತಿಭಟನೆ-ವಿರುಪಾಕ್ಷಿ
ರಾಯಚೂರು,ಅ.೩೧-ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ನಿರಂಕುಶ ಆಡಳಿತವಿದೆಯೇ ಎಂಬ ಅನುಮಾನ ಮೂಡುತ್ತಿದ್ದು ಅಲ್ಲಿಯ ಶಾಸಕರಾದ ಕೆ.ಶಿವನಗೌಡ ನಾಯಕರು ತಮ್ಮ ಹಿಂಬಾಲಕರ ಮೂಲಕ ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರ ಮೇಲೆ ನಿರಂತರ ದಬ್ಬಾಳಿಕೆ ಮಾಡುತ್ತಿದ್ದಾರೆ ಇದೆಲ್ಲದರ ವಿರುದ್ದ ನ.೪ ರಂದು ದೇವದುರ್ಗದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆOದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಇತ್ತೀಚೆಗೆ ನಮ್ಮ ಪಕ್ಷದ ದೇವದುರ್ಗ ವಿಧಾನ ಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಕರೆಮ್ಮ ನಾಯಕರ ಮೇಲೆ ಶಾಸಕ ಶಿವನಗೌಡರ ಚಿತಾವಣೆ ಮೇರೆಗೆ ಕೆಲವರು ಹಲ್ಲೆ ಮಾಡಲು ಮುಂದಾಗಿದ್ದು ಅವರ ಮಗಳ ಮೇಲೆಯೂ ಹಲ್ಲೆ ಯತ್ನ ಮಾಡಲಾಗಿ ಮೊಬೈಲ್ ಕಸಿದುಕೊಳ್ಳುವ ಪ್ರಯತ್ನ ಮಾಡಲಾಗಿದ್ದು ಇದುವರೆಗೂ ಆರೋಪಿಗಳ ಬಂಧನ ವಾಗಿಲ್ಲವೆಂದರು.
ಶಿವನಗೌಡರ ಕೃಪಾ ಕಟಾಕ್ಷದಿಂದ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆದಿದ್ದು ಕಾನೂನು ಬಾಹಿರ ಚಟುವಟಿಕೆ ಸಹ ನಡೆಯುತ್ತಿದ್ದು ತಾಲೂಕಾಡಳಿತ, ಪೊಲೀಸ್ ಇಲಾಖೆ ಮೂಕ ಪ್ರೇಕ್ಷಕರಾಗಿದ್ದಾರೆಂದು ದೂರಿದರು.
ಸಿಎಂ ಬೊಮ್ಮಾಯಿಯವರು ವೇರಾವೇಷದಲ್ಲಿ ಜನ ಸಂಕಲ್ಪ ಯಾತ್ರೆ ತಡೆಯಲು ಯಾರಿಗೆ ದಮ್ಮು, ತಾಕತ್ತು ಇದೆ ಎಂದು ಪ್ರಶ್ನಿಸುತ್ತಾರೆ ನಾವು ಅದಕ್ಕೆ ಪ್ರತಿಯಾಗಿ ಕೇಳುತ್ತೇವೆ ನಿಮಗೆ ದಮ್ಮು ತಾಕತ್ತು ಇದ್ದರೆ ದೇವದುರ್ಗದಲ್ಲಿ ಶಿವನಗೌಡ ನಾಯಕರ ದುರಾಡಳಿತ ಕೊನೆಗಾಣಿಸಿ ಇಲ್ಲದಿದ್ದರೆ ಜನರೆ ತಕ್ಕ ಪಾಠ ಚುನಾವಣೆಯಲ್ಲಿ ತೋರಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಕರೆಮ್ಮ ನಾಯಕ , ಬುಡ್ಡನಗೌಡ, ಯೂಸೂಫ್ ಖಾನ್ ,ಖಾಜನಗೌಡ ಇದ್ದರು.
Comments
Post a Comment