ನಗರದಲ್ಲಿ ಜರುಗಿದ ಭಾರತ ಜೋಡೊ ಯಾತ್ರೆ ಅಭೂತ ಪೂರ್ವ ಯಶಸ್ಸಿಗೆ ಆಭಾರಿ- ರವಿ ಬೋಸರಾಜು

 


ನಗರದಲ್ಲಿ ಜರುಗಿದ ಭಾರತ ಜೋಡೊ ಯಾತ್ರೆ ಅಭೂತ ಪೂರ್ವ ಯಶಸ್ಸಿಗೆ ಆಭಾರಿ-ರವಿ ಬೋಸರಾಜು

ರಾಯಚೂರು,ಅ.೩೧-ನಗರದಲ್ಲಿ ಜರುಗಿದ ಭಾರತ ಜೋಡೊ ಯಾತ್ರೆ ಅಭೂತ ಪೂರ್ವ ಯಶಸ್ಸಿಗೆ ಸಹಕರಿಸಿದ ಪಕ್ಷದ ಹಿರಿಯ ಕಿರಿಯ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಆಭಾರಿಯಾಗಿದ್ದೇನೆಂದು ಕಾಂಗ್ರೆಸ್ ಯುವ ಮುಖಂಡರಾದ ರವಿ ಬೋಸರಾಜು ಹೇಳಿದರು.

ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಭಾರತ ಜೋಡೊ ಯಾತ್ರೆ ಅಂಗವಾಗಿ ರಾಹುಲ ಗಾಂಧಿವರು ತಾಲೂಕಿನ ಗಿಲ್ಲೆಸುಗೂರಿನ ತುಂಗಭದ್ರಾ ನದಿ  ಸೇತುವೆಯಿಂದ ಪ್ರಾರಂಭವಾಗಿ ಕೃಷ್ಣಾ ನದಿ ಸೇತುವೆ ವರೆಗಿನ ಪಾದಯಾತ್ರೆ ಸುಗಮವಾಗಿ ನಡೆದಿದ್ದು ರೈತರೊಂದಿಗೆ ಸಂವಾದ ಸಹ ನಡೆಯಿತು ಅತ್ಯಂತ ಕಡಿಮೆ ಅವಧಿಯಲ್ಲಿ ನಗರದ ವಾಲ್ಕಟ್ ಮೈದಾನದಲ್ಲಿ ಸೆಮಿಕಾರ್ನರ್ ಮೀಟಿಂಗನಲ್ಲಿ ರಾಹುಲ ಗಾಂಧಿ ಭಾಷಣ ಆಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು ಹರ್ಷ ತಂದಿದೆ ಎಂದ ಅವರು ನಗರದಲ್ಲಿ ರಾಹುಲ್ ಗಾಂಧಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾರೆ ಎಂದು ಅ.೧೭ ರಂದು ಪಕ್ಷದ ವರಿಷ್ಟರು ನಿರ್ಧರಿಸಿದರು ಅತ್ಯಂತ ಕಡಿಮೆ ಸಮಯದಲ್ಲಿ ಸ್ಥಳದ ವ್ಯವಸ್ಥೆ ಹಾಗೂ ಇನ್ನಿತರ ವ್ಯವಸ್ಥೆ ಮಾಡಲಾಯಿತು ಇದಕ್ಕೆ ತಂಡಗಳನ್ನು ರಚಿಸಿಲಾಯಿತು ಎಲ್ಲರ ಸಹಕಾರ ಸ್ಮರಿಸುತ್ತೇವೆಂದರು.

ಸುಮಾರು ೫೫ ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಆಗಮಿಸಿದ್ದರು ಏಮ್ಸ್ ಹೋರಾಟಕ್ಕೆ ವಿಧ್ಯಾರ್ಥಿಗಳು ಬೆಂಬಲಿಸಿ ಭಾರತ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು ಎಂದ ಅವರು ಅಂದು ಆರ್‌ಟಿಓ ವೃತ್ತದಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಯಾತ್ರೆಯನ್ನು ಸ್ವಾಗತಿಸಿದರು ಎಂದರು.

ಭಾರತ ಜೋಡೊ ಯಾತ್ರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಣದೀಪ ಸಿಂಗ ಸುರ್ಜೇವಾಲ, ಜೈರಾಮ ರಮೇಶ, ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ . ಡಿ.ಕೆ.ಸುರೇಶ, ಈಶ್ವರ ಖಂಡ್ರೆ , ಎನ್.ಎಸ್.ಬೋಸರಾಜು ಸೇರಿದಂತೆ ಅನೇಕ ನಾಯಕರು ಸಹಕರಿಸಿದ್ದರು ಎಂದರು.

ಭಾರತ ಜೋಡೊ ಯಾತ್ರೆ ಕೇವಲ ರಾಜಕೀಯಕ್ಕಾಗಿ ಮಾಡಿಲ್ಲ ಬದಲಾಗಿ ದೇಶದಲ್ಲಿ ನಡೆಯುತ್ತಿರುವ ಕೋಮು ದ್ವೇಷ, ಭ್ರಷ್ಟಾಚಾರ ಮುಂತಾದ ವಿಷಯಗಳನ್ನು ಪ್ರಮುಖವಾಗಿ ಇಟ್ಟುಕೊಂಡು ಜನರಿಗೆ ಧೈರ್ಯ ತುಂಬಲು ಭಾರತ ಜೋಡೋ ಯಾತ್ರೆ ನೆರವೇರಿತು ಜನರು ಸಹ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡಿದ್ದರು ಎಂದ ಅವರು ಸಣ್ಣ ಪುಟ್ಟ ಲೋಪ ದೋಷವನ್ನು ಸರಿಪಡಿಸಕೊಂಡು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಬಲ ಇಮ್ಮಡಿಗೊಳಿಸಿಕೊಂಡಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಿತ್ತೊಗೆಯಬೇಕೆಂದು ಜನರು ತೀರ್ಮಾನಿಸಿದ್ದಾರೆ ಎಂದ ಅವರು ನಗರದಲ್ಲಿ ನಿರಂತರ ಕುಡಿಯುವ ನೀರಿನ ಯೋಜನೆ ವಿಫಲವಾಗಲು ನಗರ ಶಾಸಕ ಡಾ.ಶಿವರಾಜ ಪಾಟೀಲ ಆಡಳಿತ ವೈಫಲ್ಯವೆ ಕಾರಣವೆಂದರು.

ಈ ಸಂದರ್ಭದಲ್ಲಿ ನರಸಿಂಹಲು ಮಾಡಗಿರಿ, ಸಾಜಿದ ಸಮೀರ,ಗೋವಿಂದ ರೆಡ್ಡಿ ಇತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ