ಅ.೨೧ ರಿಂದ ೨೩ ರವರೆಗೆ ಜಿಲ್ಲೆಯಲ್ಲಿ ರಾಹುಲ್ ಗಾಂಧಿಯಿoದ ಭಾರತ ಜೋಡೊ ಪಾದಯಾತ್ರೆ : ಅ.೨೨ ರಂದು ನಗರದ ವಾಲ್‌ಕಟ್ ಮೈದಾನದಲ್ಲಿ ಸೆಮಿ ಕಾರ್ನರ್ ಮೀಟಿಂಗ್-ಬೋಸರಾಜು


 ಅ.೨೧ ರಿಂದ ೨೩ ರವರೆಗೆ ಜಿಲ್ಲೆಯಲ್ಲಿ ರಾಹುಲ್ ಗಾಂಧಿಯಿ0ದ ಭಾರತ ಜೋಡೊ ಪಾದಯಾತ್ರೆ:

ಅ.೨೨ ರಂದು  ನಗರದ ವಾಲ್‌ಕಟ್ ಮೈದಾನದಲ್ಲಿ ಸೆಮಿ ಕಾರ್ನರ್ ಮೀಟಿಂಗ್-ಬೋಸರಾಜು

ರಾಯಚೂರು,ಅ.೧೯- ಭಾರತ ಜೋಡೊ ಯಾತ್ರೆ ಅಂಗವಾಗಿ ಕಾಂಗ್ರೆಸ್ ರಾಷ್ಟಿçÃಯ ಯುವ ನಾಯಕರಾದ ರಾಹುಲ್ ಗಾಂಧಿಯವರು ಅ.೨೧ ರಿಂದ ೨೩ರವರಗೆ ಜಿಲ್ಲೆಯಲ್ಲಿ  ಪಾದಯಾತ್ರೆ ಮಾಡಲಿದ್ದು ಅ.೨೨ ರಂದು ನಗರದ ವಾಲ್ ಕಟ್ ಮೈದಾನದಲ್ಲಿ ಸೆಮಿ ಕಾರ್ನರ್ ಮೀಟಿಂಗ್‌ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತಾಡಲಿದ್ದಾರೆಂದು ಎಐಸಿಸಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜು ಹೇಳಿದರು.

ಅವರಿಂದು ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅ.೨೦ ರಂದು ಮಂತ್ರಾಲಯಕ್ಕೆ ಆಗಮಿಸುವ ಅವರು ರಾಯರ ಬೃಂದಾವನ ದರ್ಶನ ಪಡೆಯಲಿದ್ದು ಮರು ದಿನ ಅ.೨೧ ರಂದು ಬೆಳಿಗ್ಗೆ   ಗಿಲ್ಲೆಸುಗೂರಿನ ತುಂಗಭದ್ರಾ ನದಿ ಸೇತುವೆಯಿಂದ ಪಾದಯಾತ್ರೆ ನಡೆಸಲಿದ್ದಾರೆಂದರು.

ಯರಗೇರದಲ್ಲಿ ಅಂದು ವಾಸ್ತವ್ಯ ಮಾಡಲಿರುವ ಅವರು ಮರುದಿನ ಬೆಳಿಗ್ಗೆ ಅ.೨೨ ರಂದು  ಯರಗೇರದಿಂದ ಪಾದಯಾತ್ರೆ ಪುನಾರಂಭಿಸಿ  ನಗರದ ಮಲಿಯಬಾದ್ ಕ್ರಾಸ್ ಬಳಿ ಬೃಂದಾವನ ಹೋಟೆಲ್‌ನಲ್ಲಿ ಊಟೋಪಚಾರ ಮಾಡಲಿದ್ದು ರೈತರೊಂದಿಗೆ ಸಂವಾದ ಸಹ ನಡೆಸಲಿದ್ದಾರೆ ಎಂದರು.


 

ನಂತರ ನಗರದ ಅರ್‌ಟಿಓ ವೃತ್ತ, ಸ್ಟೇಶನ್ ರಸ್ತೆ ಮೂಲಕ ಬಸವೇಶ್ವರ ವೃತ್ತದ ಬಳಿಯ ವಾಲ್‌ಕಟ್ ಮೈದಾನದಲ್ಲಿ ರಾಹುಲ್ ಗಾಂಧಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದು ಸುಮಾರು ೨೫ ಸಾವಿರ ಜನರು ಸೇರುವ ನಿರೀಕ್ಷೆಯಿದೆ ಎಂದ ಅವರು ನಂತರ  ಗಂಜ್ ವೃತ್ತದ ಮೂಲಕ ಯರಮರಸ್ ಆನಂದ ಶಾಲೆಯಲ್ಲಿ ವಾಸ್ತವ್ಯ ಹೂಡಿ ಮರುದಿನ ಬೆಳಿಗ್ಗೆ  ಅ.೨೩ ರಂದು ಶಕ್ತಿ ನಗರದ ಕೃಷ್ಣಾನದಿ ಸೇತುವೆ ಮುಖಾಂತರ ತೆಲಂಗಾಣಕ್ಕೆ ತೆರಳಲಿದ್ದಾರೆ  ಪ್ರಿಯಾಂಕ ಗಾಂಧಿಯವರಿಗೆ ಆಹ್ವಾನಿಸಿದ್ದೇವೆ ಬರುವ ನಿರೀಕ್ಷೆಯಿದೆ ಎಂದರು.

ಒಟ್ಟಾರೆ ಜಿಲ್ಲೆಯಲ್ಲಿ ನಗರ  ಮತ್ತು ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ೫೩ ಕಿ.ಮಿ ಕ್ರಮಿಸಲಿದ್ದು ಜಿಲ್ಲೆಯಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಕೊಪ್ಪಳ, ಕಲಬುರ್ಗಿ, ಬೀದರ್, ಯಾದಗೀರಿ ಜಿಲ್ಲೆಗಳಿಂದ ಕಾರ್ಯಕರ್ತರು ಬರಲಿದ್ದು ನಿಗದಿತ ಆಯಾ ದಿನಾಂಕದ0ದು ಅವರು ಆಗಮಿಸಲಿದ್ದಾರೆಂದರು.

ಇಡಿ ರಾಜ್ಯದಲ್ಲಿ ಬಳ್ಳಾರಿಯಲ್ಲಿ ಮಾತ್ರ ಬಹಿರಂಗ ಸಮಾವೇಶ ನಡೆಸಿದ್ದು ಇದೀಗ ಕರ್ನಾಟಕದಿಂದ ಪಾದಯಾತ್ರೆ ಬೇರೆ ರಾಜ್ಯಕ್ಕೆ ತರಳುವ ಕಾರಣಕ್ಕೆ ನಮ್ಮ ಕೋರಿಕೆ ಮೇರೆಗೆ ನಗರದಲ್ಲಿ ಉಪ ಸಮಾವೇಶ(ಸೆಮಿ ಕಾರ್ನರ್ ಮೀಟಿಂಗ್) ಮಾಡಲಿದ್ದಾರೆಂದರು.

ಜಿಲ್ಲಾ ಕಾಂಗ್ರೆಸ್ ನಲ್ಲಿ ಯಾವುದೆ ಭಿನ್ನಮತವಿಲ್ಲ ಕಾಂಗ್ರೆಸ್ ಗೆ ಜನಪ್ರಿಯತೆ ಮತ್ತು ಜನಮನ್ನಣೆ ಕಾರಣಕ್ಕಾಗಿ ಚುನಾವಣೆಯಲ್ಲಿ ಸ್ಪರ್ದಿಸಲು ಅಕಾಂಕ್ಷಿಗಳು ಹೆಚ್ಚಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ  ಮಾಜಿ ಸಂಸದ ಬಿ.ವಿ.ನಾಯಕ, ಶಾಸಕರಾದ ಬಸನಗೌಡ ದದ್ದಲ್, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಾಗವೇಣಿ ಪಾಟೀಲ, ಮುಖಂಡರಾದ ಜಯಣ್ಣ, ಜಯವಂತರಾವ್ ಪತಂಗೆ, ಕೆ.ಶಾಂತಪ್ಪ, ಅಬ್ದುಲ್ ಕರೀಮ್,ಜಿ.ಶಿವಮೂರ್ತಿ,ತಾಯಣ್ಣ ನಾಯಕ ಇನ್ನಿತರರು ಇದ್ದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ