ಸಾಯಿಬಾಬಾರವರು ಉಡುಗೊರೆಯಾಗಿ ನೀಡಿದ್ದ ಒಂಬತ್ತು ರಜತ ನಾಣ್ಯಗಳು ನಗರಕ್ಕೆ: ಡಿ.8 ರಂದು ಓಂ ಸಾಯಿ ಧ್ಯಾನ ಮಂದಿರದಲ್ಲಿ ನಾಣ್ಯಗಳ ದರ್ಶನ - ಸಾಯಿ ಕಿರಣ ಆದೋನಿ


 ಸಾಯಿಬಾಬಾರವರು ಉಡುಗೊರೆಯಾಗಿ ನೀಡಿದ್ದ ಒಂಬತ್ತು ನಾಣ್ಯಗಳು ನಗರಕ್ಕೆ:

ಡಿ.8 ರಂದು ಓಂ ಸಾಯಿ ಧ್ಯಾನ ಮಂದಿರದಲ್ಲಿ ನಾಣ್ಯಗಳ ದರ್ಶನ - ಸಾಯಿ ಕಿರಣ ಆದೋನಿ

ರಾಯಚೂರು,ನ.೩೦-ಸಾಯಿಬಾಬಾರವರಿಗೆ ಸುಮಾರು ೩೫ ವರ್ಷಗಳ ಕಾಲ ಮಾತೃ ಹೃದಯದಿಂದ ಊಟ ನೀಡಿ ಆಶ್ರಯ ನೀಡಿದ್ದರ ಪ್ರತಿಯಾಗಿ ಸಾಯಿಬಾಬಾರವರು ಸೇವೆಯನ್ನು ಮೆಚ್ಚಿ ಲಕ್ಷಿö್ಮ ಬಾಯಿ ಶಿಂಧೆಯವರಿಗೆ ನೀಡಿದ್ದ  ನಾಣ್ಯಗಳು ಪ್ರಪ್ರಥಮ ಬಾರಿಗೆ ಡಿ.8ಕ್ಕೆ ನಗರಕ್ಕೆ ಬರಲಿವೆ ಎಂದು ಓಂ ಸಾಯಿ ಧ್ಯಾನ ಮಂದಿರದ ಸಾಯಿ ಕಿರಣ ಆದೋನಿ ಹೇಳಿದರು.

ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಗರದ ರಂಗಮ0ದಿರ ಹಿಂಭಾಗದಲ್ಲಿರುವ ಓಂ ಸಾಯಿ ಧ್ಯಾನ ಮಂದಿರದಲ್ಲಿ ಡಿ.8 ರಂದು ಶಿರಡಿಯಿಂದ ಸಾಯಿ ಬಾಬಾರವರು ತಮ್ಮ ಸೇವೆಗೈದ ಭಕ್ತೆಗೆ ಉಡುಗೊರೆಯಾಗಿ ನೀಡಿದ್ದ ಒಂಬತ್ತು ನಾಣ್ಯಗಳ ನಗರಕ್ಕೆ ಆಗಮಿಸಲಿದ್ದು ಅಂದು ಬೆಳಿಗ್ಗೆ 6 ಗಂಟೆಯಿ0ದ ರಾತ್ರಿ 9 ರವರಗೆ ಓಂ ಸಾಯಿ ಧ್ಯಾನ ಮಂದಿರದಲ್ಲಿ ದರ್ಶನಕ್ಕಾಗಿ ಇರಿಸಲಿದ್ದು  ಭಕ್ತರು, ಸಾರ್ವಜನಿಕರು ದರ್ಶನ ಪಡಯಬಹುದೆಂದರು.

ಲಕ್ಷಿö್ಮÃ ಬಾಯಿಯವರ ಐದನೆ ತಲಮಾರು ಈ ನಾಣ್ಯಗಳನ್ನು ಸಂರಕ್ಷಿಸಿಕೊ0ಡು ಬಂದಿದ್ದು ಅನೇಕರು ವಿದೇಶದಲ್ಲಿರುವವರು ಕೋಟ್ಯಾಂತರ ರೂ. ನೀಡುವುದಾಗಿ ಹೇಳಿದರು ಇದನ್ನು ಮಾರಾಟ ಮಾಡದೆ ಈ ನಾಣ್ಯಗಳನ್ನು ಭಕ್ತರ ದರ್ಶನಕ್ಕಾಗಿ ಮೀಸಲಿಡಲಾಗಿದೆ ಮುಂದಿನ ದಿನದಲ್ಲಿ ಶಿರಡಿಯಲ್ಲಿ ದೇವಸ್ಥಾನ ನಿರ್ಮಿಸಿ ಶಾಶ್ವತವಾಗಿ ಇಡಲಾಗುತ್ತಿದ್ದು ನಗರದ ಭಕ್ತರಿಗೆ ಇದೊಂದು ಸುವರ್ಣಾವಕಾಶವಿದ್ದು ಭಕ್ತರು  ದರ್ಶನ ಪಡೆದು ಸಾಯಿ ಬಾಬಾರ ಅನುಗ್ರಹಕ್ಕೆ ಪಾತ್ರರಾಗಬೇಕೆಂದರು.

ಭಕ್ತರ ಮನೆಗೂ ಪೂಜೆಗೆ ನಾಣ್ಯಗಳನ್ನು ಬರಮಾಡಿಕೊಳ್ಳಬಹುದೆಂದ ಅವರು ಮುಂಚಿತವಾಗಿ ಹೆಸರು ನೊಂದಯಾಸಬೇಕೆ0ದ ಅವರು ಡಿ.12 ರವರಗೆ ಭಕ್ತರ ಮನೆಗೆ ನಾಣ್ಯಗಳನ್ನು ಪೊಜೆಗೆ ಬರಮಾಡಿಕೊಳ್ಳಬಹುದೆಂದರು.

ಈ ಸಂದರ್ಭದಲ್ಲಿ ಪ್ರವೀಣ ಪ್ರಭು ಶೆಟ್ಟರ್, ಡಿ.ಕೆ.ಮುರಳಿ ಯಾದವ್,ಅರುಣ ಕುಮಾರ್ ,ಪ್ರಣವ್ ಆದೋನಿ ಇದ್ದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್