ಮಾಜಿ ರಾಜ್ಯ ಸಭಾ ಸದಸ್ಯರಾದ ಅಬ್ದುಲ್ ಸಮದ್ ಸಿದ್ದೀಖಿ (87) ನಿಧನ


  ಮಾಜಿ ರಾಜ್ಯ ಸಭಾ ಸದಸ್ಯರಾದ ಅಬ್ದುಲ್ ಸಮದ್ ಸಿದ್ದೀಖಿ (87)   ನಿಧನ .                            ರಾಯಚೂರು,ನ.21- ನಗರದ ಹಿರಿಯ ರಾಜಕೀಯ ಮುತ್ಸದ್ದಿ ಮಾಜಿ ರಾಜ್ಯ ಸಭಾ ಸದಸ್ಯರಾದ ಅಬ್ದುಲ್ ಸಮದ್ ಸಿದ್ದೀಖಿ (87)  ಇವರು ನಿಧನರಾಗಿದ್ದಾರೆ. ಬಹುದಿನಗಳಿಂದ ವಯೋಸಹಜ  ಕಾಯಿಲೆಯಿಂದ ಬಳಲುತ್ತಿದ್ದ ಇವರು ಇಂದು  ಇಹಲೋಕ ತ್ಯಜಿಸಿದ್ದಾರೆ.

ಅಬ್ದುಲ್ ಸಮದ್ ಸಿದ್ದೀಖಿ ಇವರು ರಾಯಚೂರು ನಗರದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡವರ ಶಿಕ್ಷಣಕ್ಕೆ ಕಾರಣೀಭೂತರಾಗಿದ್ದರು, ಅದರಲ್ಲಿ ನ್ಯೂ ಏಜುಕೇಶನ್ ಸೋಸೈಟಿ(ರಿ) ಅಡಿಯಲ್ಲಿ ವಿಶೇಷವಾಗಿ ಪ್ರಾಥಮಿಕ, ಪ್ರೌಡ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳನ್ನು ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಾರಣೀಭೂತರಾಗಿದ್ದರು. ಅಲ್ಲದೇ ರಾಯಚೂರಿನಲ್ಲಿ ಸಫೀಯಾ  ಸಂಸ್ಥೆ ಸ್ಥಾಪಿಸಿ ಮಹಿಳೆಯರಿಗೆ ಡಿ.ಎಡ್. ಕಾಲೇಜು ಸ್ಥಾಪಿಸಿದರು.                                   ರಾಜಕೀಯ ಕುಟುಂಬದಿಂದ ಬಂದಿದ್ದ ಅಬ್ದುಲ್ ಸಮದ್ ಸಿದ್ದೀಖಿ ಇವರು ರಾಯಚೂರು ನಗರ ವಿಧಾನಸಭಾ  ಕ್ಷೇತ್ರದ ಮೊದಲ ಶಾಸಕರಾದ ಸೈಯದ ಮೂಸಾ ಇವರ ಮೊಮ್ಮಗ ರಾದ ಅಬ್ದುಲ್ ಸಮಸದ್ ಸಿದ್ದೀಖಿ ಇವರು ರಾಯಚೂರು ನಗರಸಭೆಯ  ಸದಸ್ಯರಾಗಿ ಆಯ್ಕೆಯಾಗಿದ್ದರು, ನಂತರ ಜನತಾದಳದಿಂದ 1988 ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿ 1994 ರ ವರೆಗೆ ಕಾರ್ಯನಿರ್ವಹಿಸಿದ್ದರು.                                ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪತ್ರಿಯರನ್ನು ಮತ್ತು ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.

ಇವರ ಅಂತ್ಯಕ್ರಿಯೆ ನಾಳೆ ಮದ್ಯಾಹ್ನ ನಗರದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. 

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ