ನಗರದಲ್ಲಿ ಕನ್ನಡ ಹಬ್ಬ ಕಾರ್ಯಕ್ರಮ: ಕನ್ನಡತನವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು: ಏಮ್ಸ್ ಗಾಗಿ ಬೆಂಗಳೂರುವರೆಗೆ ಪಾದಯಾತ್ರೆಗೂ ಸಿದ್ಧ-ಶಿವನಗೌಡ ನಾಯಕ


 ನಗರದಲ್ಲಿ ಕನ್ನಡ ಹಬ್ಬ ಕಾರ್ಯಕ್ರಮ: ಕನ್ನಡತನವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು:

ಏಮ್ಸ್ ಗಾಗಿ ಬೆಂಗಳೂರುವರೆಗೆ ಪಾದಯಾತ್ರೆಗೂ ಸಿದ್ಧ-ಶಿವನಗೌಡ ನಾಯಕ

ರಾಯಚೂರು,ನ.೧೭-ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಸ್ಥಾಪನೆಗಾಗಿ ಯಾವುದೆ ರಾಜಿ ಮಾಡಿಕೊಳ್ಳದೆ ಬೆಂಗಳೂರು ವರೆಗೂ ಪಾದಯಾತ್ರೆ ಮಾಡಲು ಸಿದ್ದವೆಂದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ರವರು ಹೇಳಿದರು.

ಅವರಿಂದು ನಗರದ ರಂಗಮ0ದಿರದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ  ವಿಜಯ ಕರ್ನಾಟಕ ಪತ್ರಿಕೆ ವತಿಯಿಂದ ಆಯೋಜಿಸಿದ ಕನ್ನಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ನಗರದಲ್ಲಿ ಕಳೆದ ಆರು ತಿಂಗಳಿನಿ0ದ ಏಮ್ಸ್ ಗಾಗಿ ನಿರಂತರ ಧರಣಿ ಸತ್ಯಾಗ್ರಹ ನಡೆದಿದ್ದು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದನೆ ದೊರಕದಿದ್ದರೆ ಯಾವುದೆ ಮುಲಾಜಿಗೂ ಒಳಗಾಗದೆ , ಪಕ್ಷ ಹಾಗೂ ಸರ್ಕಾರ ದೊ0ದಿಗೆ ರಾಜೀಗೂ ಒಳಗಾಗದೆ ಬೆಂಗಳೂರುವರೆಗೂ ಪಾದಯಾತ್ರೆ ಮಾಡುವುದಾಗಿ ಹೇಳಿದರು.

ನನ್ನನ್ನು ಪಕ್ಷದಿಂದ ತೆಗೆದುಹಾಕಿದರೂ ಸರಿ ನಾನು ಏಮ್ಸ್ ಪಡೆದೆ ತೀರುವ ಸಂಕಲ್ಪ ಮಾಡಿದ್ದು ಜಿಲ್ಲೆಗೆ ಏಮ್ಸ್ ದೊರಕುತ್ತದೆ ಎಂದು ಆಶಾಭಾವನೆ ಯಿದ್ದು ಮುಖ್ಯಮಂತ್ರಿಗಳಿಗೂ ನಾನು ಮತ್ತೊಮೆ ವಿನಂತಿಸುತ್ತೇನೆ0ದ ಅವರು ಜಿಲ್ಲೆಗೆ ಏಮ್ಸ್ ದೊರೆತರೆ ಈ ಭಾಗಕ್ಕೆ ಆರೋಗ್ಯ ಭಾಗ್ಯ ಸಿಕ್ಕಂತಾಗುತ್ತದೆ ಎಂದರು.


ಜನಪ್ರತಿನಿಧಿಗಳಿಗೆ ಬದ್ದತೆಯಿರಬೇಕು ನಾವು ಗೆದ್ದಾಗ ಬೀಗದೆ ಸೋತಾಗ ಕುಗ್ಗದೆ ಸಮಚಿತ್ತರಾಗಿ ಕ್ಷೇತ್ರದ ಏಳ್ಗೆಗಾಗಿ ಶ್ರಮಿಸಬೇಕೆಂದ ಅವರು ವಿರೋಧ ಪಕ್ಷಗಳು ಆಡಳಿತ ಪಕ್ಷದೊಂದಿಗೆ ಒಮ್ಮೊಮ್ಮೆ ರಾಜಿ ಮಾಡಿಕೊಳ್ಳಬಹುದು ಆದರೆ ಪತ್ರಿಕಾ ಕ್ಷೇತ್ರ ನಿಷ್ಪಕ್ಷಪಾತವಾಗಿ ಜನರ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸಿ ಕಿವಿ ಹಿಂಡುವ ಕೆಲಸ ಮಾಡುತ್ತಿದ್ದು ಒಮ್ಮೆಮ್ಮೆ ಅಚಾತುರ್ಯದಿಂದ ಅರೋಪಗಳು ಸುಳ್ಳು ಸುದ್ದಿಗಳು ಹರಡುತ್ತವೆ ಎಂದು ತಮ್ಮ ಮೇಲೆ ಈ ಹಿಂದೆ ಪತ್ರಿಕೆಯೊಂದರ ವರದಿ ಅನ್ವಯ ಲೋಕಾಯುಕ್ತಕ್ಕೆ ದೂರು ದಾಖಲಾಗಿದ್ದನ್ನು ಸ್ಮರಿಸಿಕೊಂಡರು.

ಕೇವಲ ರಾಜ್ಯೋತ್ಸವ ಸಂದರ್ಭದಲ್ಲಿ ಮಾತ್ರ ಕನ್ನಡಕ್ಕೆ ಜೈ ಎನ್ನದೆ ಸದಾ ನಮ್ಮ ಉಸಿರಲ್ಲಿ ಕನ್ನಡ ಬೆರೆಯಬೇಕೆಂದ ಅವರು ಕನ್ನಡ ನಮ್ಮ ಹೆಮ್ಮೆ ಎಂದ ಅವರು ಕನ್ನಡ ತನವನ್ನು ನಾವೆಲ್ಲರೂ ರೂಡಿಸಿಕೊಂಡು ಸರ್ಕಾರಗಳು ಕನ್ನಡಿಗರಿಗೆ ಮೊದಲು ಆದ್ಯತೆ ನೀಡಬೇಕು ಖಾಸಗಿ ಸಂಸ್ಥೆಗಳು ಕನ್ನಡಕ್ಕೆ ಪ್ರಶಸ್ತö್ಯ ನೀಡಬೇಕೆಂದರು.

ರಜಾಕ ಉಸ್ತಾದ ಮಾತನಾಡಿ ಏಷಿಯಾದಲ್ಲೆ ಅತ್ಯಂತ ಹಿಂದುಳಿದ ತಾಲೂಕು ಒಳಗೊಂಡ ಜಿಲ್ಲೆ ನಮ್ಮದಾಗಿದ್ದು ಒಂದು ಕ್ಷೇತ್ರ ಅಥವಾ ಜಿಲ್ಲೆ ಹಿಂದುಳಿದಿದೆ ಎನ್ನಲು ಅಲ್ಲಿರುವ ಸೂಚ್ಯಂಕ ತಿಳಿಸುತ್ತದೆ ಆರೋಗ್ಯ, ಪೌಷ್ಟಿಕತೆ, ಉದ್ಯೋಗ, ರಸ್ತೆ ಇನ್ನಿತರ ವಿಷಯಗಳ ಮೇಲೆ ಜಿಲ್ಲೆಯ ಅಭೀವೃದ್ದಿ ಸೂಚಿಸುತ್ತದೆ ಎಂದ ಅವರು ನಂಜು0ಡಪ್ಪ ವರದಿ ಅನ್ವಯ ಈ ಭಾಗಕ್ಕೆ ಸರ್ಕಾರ ಇಂತಿಷ್ಟು ಅನುದಾನ ಬಜೆಟ್ ನಲ್ಲಿ  ನೀಡಬೇಕು ಆದರೆ ಒಂದು ಬಾರಿ ಮೀಸಲಿಟ್ಟ ಅನುದಾನವನ್ನೆ ಪ್ರತಿ ಬಜೆಟ್ ನಲ್ಲಿ ನೀಡುವಂತಿಲ್ಲ ಆಯಾ ಕಾಲಮಾನ ತಕ್ಕಂತೆ ಅನುದಾನ ಹೆಚ್ಳಳವಾಗಬೇಕೆಂದರು.

ಇಲ್ಲಿನ ಜನ ಸಂಖ್ಯೆಗೆ ಅನುಗುಣವಾಗಿ ಅರೋಗ್ಯ ಕ್ಷೇತ್ರ, ಉದ್ಯೋಗ, ಸಾರಿಗೆ, ಮೂಲಭೂತ ಸೌಲಭ್ಯ ವೃದ್ದಿಸಬೇಕೆಂದ ಅವರು ಓಪೆಕ್ ಆಸ್ಪತ್ರೆಯನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡಿ ಅರೋಗ್ಯ ಸೇವೆಗೆ ಸನ್ನದ್ದಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ವೇದಿಕೆ ಮೇಲೆ ಜಿಲ್ಲಾ ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ, ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಆಂಜಿನೇಯ,ಶಾಮಾಚಾರ್ ಗಾಣಧಾಳ,ವೆಂಕಟೇಶ ಬೇವಿನಬೆಂಚಿ,ರಾಕೇಶ ರಾಜಲಬಂಡಿ,ಬಾಬುರಾವ ಶೇಗುಣಸಿ ಇತರರು ಇದ್ದರು.

 ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕ ಗಂಗಾಧರ ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡವನ್ನು ಕಟ್ಟುವ ಕೆಲಸ ನಮ್ಮೆಲ್ಲರದ್ದಾಗಬೇಕೆಂದರು. 

ವಿಜಯ ಕರ್ನಾಟಕ ಜಿಲ್ಲಾ ವರದಿಗಾರ ಜಗನ್ನಾಥ ದೇಸಾಯಿ ಸ್ವಾಗತಿಸಿದರು. ಪ್ರತಿಭಾ ಗೋನಾಳ ಪ್ರಾರ್ಥಿಸಿದರು. ಕನ್ನಡಾಭಿಮಾನಿಗಳು, ವಿದ್ಯಾರ್ಥಿಗಳಿದ್ದರು.


Comments

Popular posts from this blog