ನಗರಕ್ಕೆ ಶ್ರೀ ಶೈಲ ಜಗದ್ಗುರುಗಳ ಪಾದಯಾತ್ರೆ ಪ್ರವೇಶ: ವೀರಶೈವ ಲಿಂಗಾಯಿತ ಹಿಂದೂ ಹೊರತಾದ ಪ್ರತ್ಯೇಕ ಧರ್ಮವಲ್ಲ- ಡಾ.ಶ್ರೀ ಚನ್ನಸಿದ್ಧರಾಮ ಶ್ರೀಗಳು
ನಗರಕ್ಕೆ ಶ್ರೀ ಶೈಲ ಜಗದ್ಗುರುಗಳ ಪಾದಯಾತ್ರೆ ಪ್ರವೇಶ:
ವೀರಶೈವ ಲಿಂಗಾಯಿತ ಹಿಂದೂ ಹೊರತಾದ ಪ್ರತ್ಯೇಕ ಧರ್ಮವಲ್ಲ-ಡಾ.ಶ್ರೀ ಚನ್ನಸಿದ್ಧರಾಮ ಶ್ರೀಗಳು
ರಾಯಚೂರು,ನ.೧೮-ವೀರಶೈವ ಲಿಂಗಾಯಿತ ಹಿಂದೂ ಹೊರತಾದ ಪ್ರತ್ಯೇಕ ಧರ್ಮವಲ್ಲವೆಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರಿಂದು ನಗರದಲ್ಲಿ ಪಾದಯಾತ್ರೆ ಪ್ರಾರಂಭಿಸುವ ಮುನ್ನ ನಗರದ ಹೊರವಲಯದ ಹರ್ಷಿತಾ ಗಾರ್ಡ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ವೀರಶೈವ ಮತ್ತು ಲಿಂಗಾಯಿತ ಹಿಂದೂ ಧರ್ಮದ ಭಾಗವೆ ಆಗಿದ್ದಾರೆ ನಮ್ಮ ಆಚರಣೆ ವಿಶಿಷ್ಟವಾಗಿದ್ದು ನಾವೆಲ್ಲರೂ ಹಿಂದೂ ಧರ್ಮದಲ್ಲಿದ್ದೇವೆಂದರು.
ಕೆಲವು ಮಠಾಧೀಶರ ಹೇಳಿಕೆ ಅವರ ವಯಕ್ತಿಕ ಹೇಳಿಕೆಯಂದ ಅವರು ಅನೇಕ ವಿರಕ್ತ ಮಠಗಳು ವೈದಿಕ ಸಂಪ್ರದಾಯಗಳನ್ನು ಒಪ್ಪದವರು ಸಹ ನಮ್ಮ ಪಾದಯಾತ್ರೆಯಲ್ಲಿ ಪಾಲ್ಗೊಂಡು ಲಕ್ಷಾಂತರ ರೂ. ದೇಣೀಗೆ ನೀಡಿದ್ದಾರೆ ಈ ಐತಿಹಾಸಿಕ ಪಾದಯಾತ್ರೆ ಬೆಳಗಾವಿ ಜಿಲ್ಲೆಯಿಂದ ಅ.೨೧ ರಂದು ಪ್ರಾರಂಭವಾಗಿದ್ದು ದೇಶದ ೧೨ ಜೋತಿರ್ಲಿಂಗಗಳ ಪೈಕಿ ಒಂದಾದ ಶ್ರೀಶೈಲ ಮಲ್ಲಿಕಾರ್ಜುನನ ಸನ್ನಿಧಾನದವರೆಗೆ ಪಾದಯಾತ್ರೆ ನಡೆಯಲಿದ್ದು ಅನೇಕ ಜಿಲ್ಲೆಗಳ ಮೂಲಕ ಹಾದು ಇಂದು ರಾಯಚೂರು ಪ್ರವೇಶಿಸಿದ್ದು ಈ ಪಾದಯಾತ್ರೆ ಜಾತ್ಯಾತೀತವಾಗಿ ಎಲ್ಲರು ಪಾಲ್ಗೊಂಡಿದ್ದು ಪಾದಯಾತ್ರೆ ಉದ್ದೇಶ ವ್ಯಸನ ಮುಕ್ತ ಸಮಾಜ ಮತ್ತು ಧರ್ಮ ಜಾಗೃತಿ ಹಾಗೂ ಪರಿಸರ ಸಂರಕ್ಷಣೆ ಮಾಡುವು ಪ್ರಮುಖ ಉದ್ದೇಶ ಹೊಂದಿದೆ ಎಂದರು.
ಅನೇಕ ಜನರು ಲಕ್ಷಾಂತರ ಸಂಖ್ಯೆಯಲ್ಲಿ ಶ್ರೀಶೈಲಕ್ಕೆ ಪಾದಯಾತ್ರೆ ಮಾಡುತ್ತಾರೆ ಪಾದಯಾತ್ರೆ ಸಂದರ್ಭದಲ್ಲಿ ಅವರಿಗಾಗುವ ಸಮಸ್ಯೆ, ಅಡತಡೆ ಅರಿತುಕೊಳ್ಳಲು ನಾವು ಸಹ ಪಾದಯಾತ್ರೆ ಮಾಡುತ್ತಿದ್ದೇವೆಂದ ಅವರು ಪ್ರಚಾರ ಮತ್ತು ಶಕ್ತಿ ಪ್ರದರ್ಶನಕ್ಕಾಗಿ ಪಾದಯಾತ್ರೆ ಮಾಡುತ್ತಿಲ್ಲವೆಂದರು.
ಶ್ರೀಶೈಲದಲ್ಲಿ ರಾಷ್ಟಿçÃಯ ಮಟ್ಟಡ ಧರ್ಮ ಸಮ್ಮೇಳನ ನಡೆಯುತ್ತಿದ್ದು ವೇದಾಂತ, ವಚನ ಸೇರಿದಂತೆ ಅನೇಕ ವಿಷಯಗಳ ಚಿಂತನ ಮಂಥನ ನಡೆಯಲಿದೆ ಎಂದ ಅವರು ಪಾದಯಾತ್ರೆ ವೇಳೆ ಅನೇಕ ಕಡೆ ತುಲಾಭಾರ ಕಾರ್ಯಕ್ರಮ ಮಾಡಿದರು ಅದನ್ನು ಶ್ರೀಶೈಲದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ವಿನಿಯೋಗಿಸುತ್ತೇವೆಂದ ಅವರು ಈಗಾಗಲೆ ಶ್ರೀಶೈಲದಲ್ಲಿ ಅಲ್ಲಿನ ಸರ್ಕಾರ ಐದು ಎಕರೆ ಜಾಗ ನೀಡಿದ್ದು ಇನ್ನೂ ಐ ದು ಎಕರೆ ಜಾಗ ನೀಡಲಿದ್ದು ಯಾತ್ರಾರ್ಥಿಗಳಿಗೆ ವಸತಿ ಗೃಹ, ಮಕ್ಕಳಗೆ ಆಂಗ್ಲ ಶಾಲೆ ಸೇರಿದಂತೆ ಭಕ್ತರ ಸೌಕರ್ಯಕ್ಕಾಗಿ ವಿವಿಧ ಅಭಿವೃದ್ದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಕಳೆದ ಬಾರಿ ಯುಗಾದಿ ಸಂದರ್ಭದಲ್ಲಿ ಭಕ್ತರ ಮೇಲೆ ಕೆಲ ಕಿಡಿಗೇಡಿಗಳು ಹಲ್ಲೆ ನಡೆಸಿದ ಅಹಿತಕರ ಘಟನಯನ್ನು ನಾವು ಖಂಡಿಸಿದ್ದು ಮುಂದೆ ಹಾಗಾಗದಂತೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಅಲ್ಲಿನ ಸರ್ಕಾರಕ್ಕೆ ವಿನಂತಿಸಿದ್ದೇವೆ ಕರ್ನಾಟಕ ಸರ್ಕಾರವು ಪೊಲೀಸರನ್ನು ನಿಯೋಜಿಸಬೇಕೆಂದರು.
ಜಿಲ್ಲೆಯಲ್ಲಿ ಏಮ್ಸ್ ಗಾಗಿ ನಡೆಯುತ್ತಿರುವ ಹೋರಾಟ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು ಜನರ ಒಳತಿಗಾಗಿ ಕಾನೂನು ಬದ್ಧವಾಗಿ ಸಿಗುವ ಸೌಲಭ್ಯಗಳು ದೊರಕಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜಾಪೂರು ಜೈನಾಪೂರು ಮಠದ ಶ್ರೀಗಳು, ಬಿಚ್ಚಾಲಿ ಮಟಮಾರಿ ಶ್ರೀಗಳು, ಸೋಮವಾರ ಪೇಟೆ ಮಠದ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು, ಸಂಸದ ಅಮರೇಶ್ವರ ನಾಯಕ, ಶಾಸಕರಾದ ಎ.ಎಸ್.ನಡಹಳ್ಳಿ, ಡಾ.ಶಿವರಾಜ ಪಾಟೀಲ, ಬಸನಗೌಡ ದದ್ದಲ, ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜು ಇನ್ನಿತರರು ಇದ್ದರು.
Comments
Post a Comment