ಉತ್ತಮ ಸಮಾಜಕ್ಕೆ ಪತ್ರಕರ್ತರ ಮಾರ್ಗದರ್ಶನ ಅಗತ್ಯ-ಬೋಸರಾಜು




ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ:   
                            ಉತ್ತಮ ಸಮಾಜಕ್ಕೆ ಪತ್ರಕರ್ತರ ಮಾರ್ಗದರ್ಶನ ಅಗತ್ಯ-ಬೋಸರಾಜು     
                                    

ರಾಯಚೂರು.ನ.20- ಉತ್ತಮ ಸಮಾಜ ನಿರ್ಮಾಣಕ್ಕೆ ಪತ್ರಕರ್ತರ ಮಾರ್ಗದರ್ಶನ ಬಹಳ ಮುಖ್ಯ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಎಐಸಿಸಿ ಕಾರ್ಯದರ್ಶಿ ಎನ್.ಎಸ್ ಬೋಸರಾಜ್ ತಿಳಿಸಿದರು. 

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಪ್ರಯುಕ್ತ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಿಪೋರ್ಟರ್ ಗೀಲ್ಡ್ ಸಹಯೋಗದಲ್ಲಿ ರವಿವಾರ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. 

ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಅನೇಕ ಪತ್ರಕರ್ತರನ್ನು ಕಂಡಿದ್ದೇನೆ . ಉತ್ತಮ ಸಮಾಜಕ್ಕಾಗಿ ಪತ್ರಕರ್ತರು ಹಗಲಿರಳು ಶ್ರಮಿಸುತ್ತಿದ್ದಾರೆ. ಜನಪ್ರತಿನಿಧಿಗಳನ್ನು ತಮ್ಮ ವರದಿಗಳ ಮೂಲಕ ಸದಾ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕ ಬದುಕನ್ನು ಲೆಕ್ಕಿಸದೆ ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಸದಾ ಒತ್ತಡದ ಮಧ್ಯ ಕೆಲಸ ಮಾಡುವ ಪತ್ರಕರ್ತರಿಗೆ ಇಂಥ ಕ್ರೀಡೆಗಳು ಮತ್ತಷ್ಟು ಉತ್ಸಾಹ ನೀಡಲಿವೆ ಎಂದರು.


ನಗರಸಭೆ ಹಿರಿಯ ಸದಸ್ಯ ಜಯಣ್ಣ ಮಾತನಾಡಿ, ಪತ್ರಕರ್ತರು 24/7 ರೀತಿ ಬಿಡುವಿಲ್ಲದೇ ಕೆಲಸ ಮಾಡುತ್ತಾರೆ. ಅವರಿಗೆ ವೈಯಕ್ತಿಕ ಜೀವನಕ್ಕೆ ಸಮಯ ಕೊಡಲು ಆಗುವುದಿಲ್ಲ. ಇಂಥ ಕ್ರೀಡೆಗಳಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಪತ್ರಕರ್ತರು ಕೆಲಸದ ಒತ್ತಡದ ನಡುವೆಯೂ ಕ್ರೀಡೆಗಳಿಗಾಗಿ ಸಮಯ ಮೀಸಲಿಡುವುದು ಒಳ್ಳೆಯ ಬೆಳವಣಿಗೆ ಎಂದರು.  ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಈರೇಶ ನಾಯಕ, ಕ್ರೀಡಾಚಟುಗಳಿಗೆ ನಿಮ್ಮ ಉತ್ಸಾಹ ಹೆಚ್ಚಿಸಲು ಸಹಕಾರಿಯಾಗಲಿವೆ. ಇಂಥ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು ಎಂದರು. ಪತ್ರಕರ್ತ ಸತ್ಯನಾರಾಯಣ ಮಾತನಾಡಿ, ಸುದ್ದಿಗಾಗಿ ಸದಾ ಮಿಡಿಯುವ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆ ನಿಷ್ಕಾಳಜಿ ವಹಿಸುತ್ತಾರೆ. ಪತ್ರಕರ್ತರು ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕು ಎಂದರು.


ಹಿರಿಯ ಪತ್ರಕರ್ತ ವೀರಾರೆಡ್ಡಿ, ಕಾಂಗ್ರೆಸ್ ಮುಖಂಡ ರುದ್ರಪ್ಪ ಅಂಗಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಗುರುನಾಥ್, ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್ ಅಧ್ಯಕ್ಷ ಚೆನ್ನಬಸವಣ್ಣ , ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ್, ಹಿರಿಯ ಪತ್ರಕರ್ತರಾದ ವೆಂಕಟ ಸಿಂಗ್, ಜಗನ್ನಾಥ ದೇಸಾಯಿ, ನಾಗರಾಜ್ ಚಿನಗುಂಡಿ , ಸೇರಿ ಅನೇಕ ಹಿರಿಯ ,ಕಿರಿಯ ಪತ್ರಕರ್ತರು ಪಾಲ್ಗೊಂಡಿದ್ದರು.

ಪತ್ರಕರ್ತರ ಮೂರು ತಂಡಗಳಾದ ಕಾಂತಾರ, ಕ್ರಾಂತಿ, ಕೆಜಿಎಫ್ ತಂಡಗಳು ಭಾಗಿಯಾಗಿದ್ದವು. ಪತ್ರಕರ್ತ ವಿಜಯ್ ಜಾಗಟಗಲ್ ನಿರೂಪಿಸಿದರು.                                     ಕಾಂತಾರ ತಂಡ ವಿಜಯಶಾಲಿಫೈನಲ್ ಪಂದ್ಯದಲ್ಲಿ ಚೆನ್ನಬಸವಣ್ಣ ನಾಯಕರಾಗಿದ್ದ ಕಾಂತಾರ ತಂಡ ವಿಜಯಶಾಲಿಯಾಯಿತು. ಆರ್.ಗುರುನಾಥ ನಾಯಕರಾಗಿದ್ದ ಕ್ರಾಂತಿ ತಂಡ ಎರಡನೇ ಸ್ಥಾನ ಪಡೆಯಿತು. ಬಿ.ವೆಂಕಟಸಿಂಗ್ ನಾಯಕರಾಗಿದ್ದ ಕೆಜಿಎಫ್ ತಂಡ ಮೂರನೆ ಸ್ಥಾನ ಪಡೆಯಿತು.




Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್