ಸಮ್ಮೇಳನ ಲಾಂಛನ ಬಿಡುಗಡೆ- ಸರ್ವಾನುಮತದಿಂದ ಸರ್ವಾಧ್ಯಕ್ಷರಾಗಿ ವೀರ ಹನುಮಾನ ಆಯ್ಕೆ: ಡಿ.೧೦ ಮತ್ತು ೧೧ ರಂದು ಲಿಂಗಸ್ಗೂರಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ-ಅಳ್ಳುಂಡಿ
ಸಮ್ಮೇಳನ ಲಾಂಛನ ಬಿಡುಗಡೆ-ಸರ್ವಾನುಮತದಿಂದ ಸರ್ವಾಧ್ಯಕ್ಷರಾಗಿ ವೀರ ಹನುಮಾನ ಆಯ್ಕೆ
ಡಿ.೧೦ ಮತ್ತು ೧೧ ರಂದು ಲಿಂಗಸ್ಗೂರಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ-ಅಳ್ಳುಂಡಿ
ರಾಯಚೂರು,ನ.೨೧-ಮು0ದಿನ ತಿಂಗಳು ಡಿ.೧೦ ಮತ್ತು ೧೧ ರಂದು ಲಿಂಗಸ್ಗೂರಿನಲ್ಲಿ ೧೧ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು ಸರ್ವಾನುಮತದಿಂದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವೀರ ಹನುಮಾನ್‌ರವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸಮ್ಮೇಳನ ಲಾಂಛನ ಬಿಡುಗಡೆ ಮಾಡುತ್ತಿದ್ದು ಲಿಂಗಸ್ಗೂರಿನ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಎರೆಡು ದಿನಗಳ ಕಾಲ ಸಮೇಳನ ಆಯೋಜಿಸಲಾಗಿದ್ದು ಸಮ್ಮೇಳನದಲ್ಲಿ ಕವಿ ಗೋಷ್ಟಿ, ಮಕ್ಕಳ ಗೋಷ್ಟಿ ಸೇರಿದಂತೆ ಅನೇಕ ಗೋಷ್ಟಿ ಆಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಮತ್ತು ಗಜಲ್ ಕವನ ಸಂಕಲನ ಬಿಡುಗಡೆ ಮಾಡಲಾಗುತ್ತದೆ ಎಂದರು.
ಲಿ0ಗಸ್ಗೂರು ಶಾಸಕ ಡಿ.ಎಸ್.ಹೂಲಗೇರಿ ಮತ್ತು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ ಸೇರಿದಂತೆ ಎಲ್ಲರ ಸಹಕಾರವಿದ್ದು ಯಾವುದೆ ಅಸಮಾಧಾನವಿಲ್ಲವೆಂದ ಅವರು ಸರ್ವಾಧ್ಯಕ್ಷರ ನೇಮಕದಲ್ಲಿ ಯಾವುದೆ ಅಪಸ್ವರವಿಲ್ಲವೆಂದ ಅವರು ಕಾರ್ಯಕಾರಿ ಸಮಿತಿಯಲ್ಲಿ ಕೈಗೊಂಡ ನಿರ್ಣಯದಂತೆ ವೀರ ಹನುಮಾನರವರನ್ನು ಸರ್ವಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದರು.
ಈ ಹಿಂದೆ ಸಮ್ಮೇಳನ ನಡೆಯುವ ತಾಲೂಕಿನವರನ್ನೆ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಂಪ್ರದಾಯವನ್ನು ಈ ಬಾರಿ ಪರಿಗಣಿಸಿಲ್ಲ ಜಿಲ್ಲಾ ಸಮ್ಮೇಳನದಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಹಿರಿಯ ಸಾಹಿತಿಗಳು ಮತ್ತು ಅವರ ಸಾಹಿತಿಕ ಚಟುವಟಿಕೆ ಪರಿಗಣಿಸಿ ಸರ್ವಾಧ್ಯಕ್ಷರ ಆಯ್ಕೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಂಜುನಾಥ , ಮಲ್ಲಿಕಾರ್ಜುನ,ವೆಂಕಟೇಶ ಬೇವಿನಬೆಂಚಿ, ತಾಯಪ್ಪ ಹೊಸೂರು ಇದ್ದರು.
Comments
Post a Comment