ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಪ್ರಯುಕ್ತ ಚೆಸ್, ಕೇರಂ ಕ್ರೀಡಾಕೂಟ: ಪತ್ರಕರ್ತರಲ್ಲಿ ಕ್ರೀಡಾಸ್ಫೂರ್ತಿ ನಿರಂತರವಾಗಿರಲಿ-ಸುಶಿಲೇಂದ್ರ ಸೋದೆಗಾರ


 ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಪ್ರಯುಕ್ತ ಚೆಸ್, ಕೇರಂ ಕ್ರೀಡಾಕೂಟ:                                ಪತ್ರಕರ್ತರಲ್ಲಿ ಕ್ರೀಡಾಸ್ಫೂರ್ತಿ ನಿರಂತರವಾಗಿರಲಿ-ಸುಶಿಲೇಂದ್ರ ಸೋದೆಗಾರ 

ರಾಯಚೂರು,ನ.22- ಪತ್ರಕರ್ತರಲ್ಲೂ ಸಾಕಷ್ಟು ಕ್ರೀಡಾಸ್ಫೂರ್ತಿಯಿದ್ದು, ಅದು ಕೇವಲ ಒಂದೆರಡು ದಿನಗಳಿಗೆ ಸೀಮಿತವಾಗಿರದೆ ನಿರಂತರವಾಗಿರಲಿ ಎಂದು   ರಾಯಚೂರು ಪ್ರಭ ಹಿರಿಯ ಸಂಪಾದಕ ಸುಶಿಲೇಂದ್ರ ಸೋದೆಗಾರ ತಿಳಿಸಿದರು. 

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಪ್ರಯುಕ್ತ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಚೆಸ್, ಕೇರಂ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರನ್ನು ಇನ್ನಷ್ಟು ಲವಲವಿಕೆಯಿಂದ ಇರುವಂತೆ ಮಾಡಲು ಕ್ರೀಡೆಗಳು ಬಹಳ ಮಹತ್ವದ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಕ್ರೀಡಾ ಸಮಿತಿ ರಚಿಸಿ ನಿರಂತರ ಕ್ರೀಡೆಗಳನ್ನು ಆಯೋಜಿಸುವ ಕೆಲಸವಾಗಲಿ ಎಂದರು.   


               ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಗುರುನಾಥ್ ಮಾತನಾಡಿ ಪತ್ರಕರ್ತರು ಕ್ರೀಡಾ ಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ಸುದ್ದಿ ಜಂಜಾಟದಲ್ಲಿ ಸದಾ ಮಗ್ನರಾಗಿರುವ ಪತ್ರಕರ್ತರು ಬ್ಯಾಡಮೆಂಟನ್, ಕ್ರೀಕೆಟ್ ಮುಂತಾದ ಆಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ಸಂತಸ ತಂದಿದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ ಮಾತನಾಡಿ, ನಮ್ಮ ಪತ್ರಕರ್ತ ಸ್ನೇಹಿತರಲ್ಲಿಯೂ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಈಚೆಗೆ ಆಯೋಜಿಸಿದ್ದ ಕ್ರೀಡಾಕೂಟಗಳಲ್ಲಿ ಸಾಕಷ್ಟು ಪತ್ರಕರ್ತರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ನಿರಂತರ ಅಭ್ಯಾಸ ಮಾಡಿದಲ್ಲಿ ಖಂಡಿತ ಉತ್ತಮ ಸಾಧನೆ ಮಾಡಬಲ್ಲರು ಎಂದು ವಿಶ್ವಾಸ ವ್ಯಕ್ತಪಡಿಸಿದರು.   


                                ರಾಯಚೂರು ರಿಪೋರ್ಟ್‌ರ್ಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿ ವಿಜಯ್ ಜಾಗಟಗಲ್  ನಿರೂಪಿಸಿದರು.

ವೇದಿಕೆ ಮೇಲೆ ಕ್ರೀಡಾಕೂಟದ ತೀರ್ಪುಗಾರರಾದ ದೈಹಿಕ ಶಿಕ್ಷಕರಾದ


ಹನುಮಂತಪ್ಪ ಹಾಗೂ ಸುಭಾಷ್ ಪಾಟೀಲ್  ,ಪ್ರಧಾನ ಕಾರ್ಯದರ್ಶಿ ಮೆಹಬೂಬ್ ಪಾಷ ಹಟ್ಟಿ, ಉಪಸ್ಥಿತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್