ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿಯೋಗದಿಂದ ರಾಜ್ಯಪಾಲರ ಭೇಟಿ


ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿಯೋಗದಿಂದ ರಾಜ್ಯಪಾಲರ ಭೇಟಿ 

ರಾಯಚೂರು,ನ.23-  ಸರ್ವೋಚ್ಚ ನ್ಯಾಯಾಲಯವು ಆರ್ಥಿಕವಾಗಿ  ದುರ್ಬಲರಾದ ಮೇಲ್ವರ್ಗದ ಸಮುದಾಯಗಳಿಗೆ ಮೀಸಲಾತಿ ಅನ್ವಯ 103ನೇ ತಿದ್ದುಪಡಿಯನ್ನು ಎತ್ತಿ ಹಿಡಿದಿದ್ದು ಈ ಕುರಿತು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಈ ತೀರ್ಪನ್ನು ಸ್ವಾಗತಿಸಿರುತ್ತಾರೆ, ಸದರಿ ಮೀಸಲಾತಿಯನ್ನು ಅನೇಕ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತಂದಿದ್ದು, ಈ ಮೀಸಲಾತಿಯನ್ನು ಕರ್ನಾಟಕ ರಾಜ್ಯದಲ್ಲಿಯೂ ಸಹ ಜಾರಿಗೆ ತರುವಂತೆ ಮಾನ್ಯ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿಲು ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್‌ ಚಂದ್‌ ಗೆಹ್ಲೋಟ್‌ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ,  ನಿರ್ದೇಶಕರಾದ ಸುಬ್ಬರಾಯ ಎಂ ಹೆಗಡೆ. ಶ್ರೀ ಪವನ್ ಕುಮಾರ್.  ಜಗನ್ನಾಥ ಕುಲಕರ್ಣಿ.  ವತ್ಸಲ ನಾಗೇಶ್.  ಜಗದೀಶ ಹುನಗುಂದ. ಹಾಗೂ ವಿಶ್ವ ವಿಪ್ರತ್ರಯ ಪರಿಷತ್ ಅಧ್ಯಕ್ಷರಾದ ರಘುನಾಥ್ ರವರು, ವಿಪ್ರ ಮುಖಂಡರಾದ ಡಾ|| ಎ.ವಿ.ಪ್ರಸನ್ನ, ಸತ್ಯಪ್ರಕಾಶ್, ವಿ.ಮಂಜುನಾಥ್, ದಿಲೀಪ್ ಸತ್ಯಾ,  ಕುಮಾರ್,  ನಾಗೇಶ್ ಹಾಗೂ ಶರತ್ ರವರು ಉಪಸ್ಥಿತರಿದ್ದರು.



Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್