ಪತ್ರಿಕಾ ರಂಗ ಕ್ಷೇತ್ರದಲ್ಲಿ ಕೆ.ಸತ್ಯನಾರಾಯಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ: ನ.೨೦ ರಂದು ಮಹಾಂತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ- ಗೋನಾಳ


 ಪತ್ರಿಕಾ ರಂಗ ಕ್ಷೇತ್ರದಲ್ಲಿ ಕೆ.ಸತ್ಯನಾರಾಯಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ:

ನ.೨೦ ರಂದು ಮಹಾಂತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ-ಗೋನಾಳ

ರಾಯಚೂರು,ನ.೧೭-ಮಾತೋಶ್ರೀ ಮಹಾಂತಮ್ಮ ಶಿವಬಸಪ್ಪ ಗೋನಾಳ ಪ್ರತಿಷ್ಠಾನ ಅರ್ಪಿಸುವ ಪ್ರತಿಭಾ ಸುಗಮ ಸಂಗೀತ ಸಂಸ್ಥೆಯ ೧೩ನೇ ವಾರ್ಷಿಕೋತ್ಸವ ಅಂಗವಾಗಿ ನ.೨೦ ರಂದು ಮಹಾಂತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಮತ್ತೆ ಹಾಡಿತು ಕೋಗಿಲೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶರಣಪ್ಪ ಗೋನಾಳ ಹೇಳಿದರು.

ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ ೧೦.೩೦ಕ್ಕೆ ಸಿದ್ದರಾಮ ಜಂಬಲದಿನ್ನಿ ರಂಗಮAದಿರದಲ್ಲಿ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಇಲಕಲ್ ಚಿತ್ತರಗಿ ಸಂಸ್ಥಾನ ಮಠ ಗುರು ಮಹಾಂತಸ್ವಾಮಿಗಳು , ಚೌಕಿ ಮಠ ಚಿಕ್ಕಸೂಗೂರು ಮಠದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಲಿದ್ದು ಉದ್ಘಾಟನೆಯನ್ನು ಶಾಸಕ ಡಾ.ಶಿವರಾಜ ಪಾಟೀಲ ಮಾಡಲಿದ್ದು ಅಧ್ಯಕ್ಷತೆಯನ್ನು ಗ್ರಾಮೀಣ ಶಾಸಕ ದದ್ದಲ ಬಸನಗೌಡ ವಹಿಸಲಿದ್ದು ಪ್ರಶಸ್ತಿ ಪ್ರದಾನವನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಸಂಸದ ರಾಜ ಅಮರೇಶ್ವರ ನಾಯಕ, ಅರ್ ಡಿ ಎ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ಸೇರಿದಂತೆ ಅನೇಕ ಮುಖಂಡರು ಗಣ್ಯರು ಭಾಗವಹಿಸಲಿದ್ದಾರೆಂದರು.

ಈ ಬಾರಿಯ ವಿಜಯ ಮಹಾಂತ ಅನುಗ್ರಹ ಪ್ರಶಸ್ತಿಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಶಿವರಾಜ ಪಾಟೀಲ ರವರಿಗೆ ನೀಡಲಾಗುತ್ತಿದ್ದು ಮಹಾಂತ ಕಾಯಕಯೋಗಿ ಪ್ರಶಸ್ತಿಯನ್ನು ಗಣಪತಿ ಸಾಕರೆ ರವಿರಿಗೆ ನೀಡಲಾಗುತ್ತಿದೆ ಗುರು ಅನುಗ್ರಹ ಪ್ರಶ್ತಿಯನ್ನು ನಿವೃತ್ತ ಹಿರಿಯ ವಾಹನ ನಿರೀಕ್ಷಕ ವೆಂಕಟೇಶ್ವರ ರಾವ್ ರವರಿಗೆ ನೀಡಲಾಗುತ್ತಿದೆ ಹಾಗೂ ಆದರ್ಶ ದಂಪತಿಗಳು ಪ್ರಶಸ್ತಿಯನ್ನು ಸುಶೀಲಮ್ಮ ಮತ್ತು ಡಾ.ವಿ.ಎ.ಮಾಲೀಪಾಟೀಲ, ಲಲಿತಾ ಕಡಗೋಲ ಆಂಜಿನೇಯ,ಶಾರದಾದೇವಿ ಬಸವಪ್ರಸಾದ ಸ್ವಾಮೀಜಿ ಇಲಕಲ್ ಮಠ ಇವರಿಗೆ ನೀಡಲಾಗುತ್ತದೆ ಎಂದರು.

ಪತ್ರಿಕಾ ರಂಗ ಕ್ಷೇತ್ರದಲ್ಲಿ ಕೆ.ಸತ್ಯನಾರಾಯಣ  ಸೇರಿದಂತೆ ವೈದ್ಯಕೀಯ, ಸಮಾಜ ಸೇವೆ, ಧಾರ್ಮಿಕ ಕ್ಷೇತ್ರ, , ಶಿಕ್ಷಣ, ನ್ಯಾಯಾಂಗ ಮತ್ತು  ವಿವಿಧ ಕ್ಷೇತ್ರಗಳ ಸಾಧಕರಿಗೆ ಮಹಾಂತಶ್ರೀ ಪ್ರಶಸ್ತಿ ನೀಡಲಾಗುತ್ತಿದೆ ಎಂದ ಅವರು ಮಹಾಂತ ಪುರಸ್ಕಾರ ಪ್ರಶಸ್ತಿಯನ್ನು ಆರು ವಿವಿಧ ಕ್ಷೇತ್ರಗಳ ವಿಶೀಷ್ಟ ಸಾಧಕರಿಗೆ ನೀಡಲಾಗುತ್ತಿದೆ ಎಂದರು. ಅತ್ಯುತ್ತಮ ಶಿಕ್ಷಣ ಸಂಸ್ಥೆ ಪ್ರಶಸ್ತಿಯನ್ನು ರಾಮಾಂಜನೇಯಲು ಅವರ ಜಾನ್ ಮಿಲ್ಟನ್ ಟೆಕ್ನೋ ಶಾಲೆಗೆ ನೀಡಲಾಗುತ್ತಿದೆ ಎಂದರು.

ಸAಜೆ ೬ ಕ್ಕೆ ನಡೆಯುವ ಮತ್ತೆ ಹಾಡಿತು ಕೋಗಿಲೆ  ಸಂಗೀತ ಮತ್ತು ಹಾಸ್ಯ ಕಾರ್ಯಕ್ರಮದಲ್ಲಿ ಜ್ಯೂ.ವಿಷ್ಣು ವರ್ಧನ್, ಜಿ ಟೀವಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಘವೇಂದ್ರ ಸೇರಿದಂತೆ ಸ್ಥಳಿಯ ಕಲಾವಿದರಿಂದ ಸಂಗೀತ , ಹಾಸ್ಯ ಕಾರ್ಯಕ್ರಮ ನಡೆಯಲಿದ್ದು  ಸಾನಿಧ್ಯವನ್ನು ಸೋಮವಾರ ಪೇಟೆ ಶ್ರೀಗಳು ವಹಿಸಲಿದ್ದು, ಉದ್ಘಾಟನೆಯನ್ನು ಮಾಜಿ ಶಾಸಕ ಎ.ಪಾಪರೆಡ್ಡಿ, ಮಾಡಲಿದ್ದು, ಅಧ್ಯಕ್ಷೆತೆಯನ್ನು ಲಲಿತಾ ಕಡಗೋಲ ಆಂಜಿನೇಯರವರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಬಿ.ವಿ.ನಾಯಕ, ಕೆಪಿಸಿಸಿ ಕಾರ್ಯದರ್ಶಿ ಎ.ವಸಂತ ಕುಮಾರ್,ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ ಅತ್ತನೂರು ಸೇರಿದಂತೆ ಅನೇಕ ಮುಖಂಡರು, ಗಣ್ಯರು, ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆಂದ ಅವರು ವಿಶೇಸ ಪ್ರಶಸ್ತಿಯನ್ನು ಜಿ.ಟಿವಿ ಯ ರಾಘವೇಂದ್ರ ರಾಯಚೂರು ರವರಿಗೆ ನೀಡಲಾಗುತ್ತಿದೆ ಎಂದರು.

ಪ್ರಶಸ್ತಿಗೆ ಆಯ್ಕೆ ಯಾದ ಸಾಧಕರನ್ನು ವಿವಿಧ ಮೂಲಗಳಿಂದ ಅವರ ಸಾಧನೆಯನ್ನು ಪರಿಶೀಲಿಸಿ ಆಯ್ಕೆ ಮಾಡಲಾಗಿದ್ದು ಯಾವುದೆ ದುರುದೇಶ ಮತ್ತು ವಯಕ್ತಿಕ ಹಿತಸಕ್ತಿಯಿಲ್ಲದೆ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಎಲ್.ಜಿ.ಶಿವಕುಮಾರ್, ಪ್ರತಿಭಾ ಗೋನಾಳ ಇದ್ದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್