ಪತ್ರಕರ್ತರು ವೃತ್ತಿಯ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು- ಬಿ.ವಿ.ಮಲ್ಲಿಕಾರ್ಜುನಯ್ಯ
ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ಸಂವಿಧಾನ ಓದು ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟನೆ : ಪತ್ರಕರ್ತರು ವೃತ್ತಿಯ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು- ಬಿ.ವಿ.ಮಲ್ಲಿಕಾರ್ಜುನಯ್ಯ
ರಾಯಚೂರು,ನ.26- ಪತ್ರಕರ್ತರು ಇಂದಿನ ಆಧುನಿಕ ಜಗತ್ತಿನಲ್ಲಿ ಕೆಲಸ ಮಾಡುವಾಗ ಅನೇಕ ಸವಾಲುಗಳನ್ನು ಎದುರಿಸುವುದರ ಜೊತೆಗೆ ವೃತ್ತಿಯ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು ಎಂದು ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಬಿ.ಮಲ್ಲಿಕಾರ್ಜುನಯ್ಯ ಸಲಹೆ ನೀಡಿದರು.
ಅವರಿಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಸಣ್ಣ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘ ಹಾಗೂ ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ಸಂವಿಧಾನ ಓದು ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರಾಗಬೇಕು ಎಂಬುವುದು ಇತ್ತೀಚೆಗೆ ಫ್ಯಾಶನ್ ಆಗಿದೆ. ಯಾವ ಕೆಲಸ ಮಾಡದವರು ಪತ್ರಕರ್ತರಾಗಲು ಸುಲಭ ಎಂಬ ಧೋರಣೆ ಇದೆ. ಪತ್ರಿಕಾವೃತ್ತಿ ಪವಿತ್ರ ವೃತ್ತಿಯಾಗಿದೆ. ವೃತ್ತಿಯ ಪಾವಿತ್ರ್ಯತೆ ಇಂದು ಹಾಳು ಮಾಡುವ ಘಟನೆ ನಡೆಯುತ್ತಿದೆ. ಇದನ್ನು ತಡೆಯಬೇಕು, ಇಲ್ಲದಿದ್ದರೆ ಮುಂದೆ ಮತ್ತಷ್ಟು ಕಲುಷಿತವಾಗಬಹುದು ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ್ ನಾಯಕ ಮಾತನಾಡಿ, ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದೆ. ಪತ್ರಿಕಾ ಕ್ಷೇತ್ರಕ್ಕೂ ತನ್ನದೇ ಆದ ಜವಾಬ್ದಾರಿ ಇದೆ. ಪತ್ರಕರ್ತರು ಸಂವಿಧಾನ ರಕ್ಷಣೆ ಮಾಡುವ ಜೊತೆಗೆ ಅದನ್ನು ಉಳಿಸಿ ಬೆಳೆಸಬೇಕು. ಜನರ ಸಮಸ್ಯೆಗಳನ್ನು ಆಳುವ ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಕಾರ್ಯ ಮೆಚ್ಚುವಂತಹದ್ದು ಪತ್ರಕರ್ತರು ತಮ್ಮ ವೃತ್ತಿಯ ಮೂಲಕ ಸಮಾಜಿಕ ನ್ಯಾಯ ಒದಗಿಸಿ ಜನಪರವಾಗಿ ಕೆಲಸ ಮಾಡಬೇಕು ಎಂದು ಸಲಹೆ ನಿಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾತನಾಡಿ, ಪೊಲೀಸರ ಹಾಗೂ ಪತ್ರಕರ್ತರ ಕೆಲಸವೋ ಒಂದೇ ರೀತಿಯಾಗಿದೆ. ನಿರಂತರವಾದ ಕೆಲಸ. ಇಂತಹದ್ದೇ ಸಮಯ ಮಾತ್ರ ವೃತ್ತಿ ನಿರ್ವಹಿಸುವುದಿಲ್ಲ. ಸಮಾಜ ನೀಡಿರುವ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸೋಣ. ಯಾವುದೇ ಒತ್ತಡದಲ್ಲಿ ಕೆಲಸ ಮಾಡಿದರೂ ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ಚನ್ನಬಸವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಪತ್ರಕರ್ತರು ಸಮಾಜದ ಅಂಕು ಡೊಂಕು ತಿದ್ದುವವರಾಗಿದ್ದು ವೃತ್ತಿಯನ್ನು ಯವುದೆ ಆಸೆ, ಆಮೀಷಕ್ಕೊಳಗಾಗದೆ ನಿರ್ವಹಿಸುತ್ತೇವೆ ಎಂದ ಅವರು ಗಿಲ್ಡ್ ನಡೆದು ಬಂದ ಹಾದಿ ಬಗ್ಗೆ ತಿಳಿಸ ಅದಕ್ಕೆ ಶ್ರಮಿಸಿದವರನ್ನು ಕೊಂಡಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಗುರುನಾಥ ಮಾತನಾಡಿ, ಸರ್ಕಾರಗಳು ಸಣ್ಣ ಹಾಗೂ ಪ್ರಾದೇಶಿಕ ಪತ್ರಿಕೆಗಳತ್ತ ಗಮನ ಹರಿಸಬೇಕು. ಗ್ರಾಮೀಣ ಮಟ್ಟದ ಪತ್ರಕರ್ತರಿಗೆ ಬಸ್‌ಬಸ್ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಹಿರಿಯ ಪತ್ರಕರ್ತ ಕಿಶನರಾವ್ ಹಾಗೂ ಛಾಯಾ ಕಿಶನ್‌ರಾವ್ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿ.ಕೆ. ಕಿಶನ್ ರಾವ್ ನನಗೆ ಸನ್ಮಾನ ಮಾಡುತ್ತಿರುವುದು ಅದು ನನಗೊಂದೆ ಸಲ್ಲುವುದಿಲ್ಲ ಎಲ್ಲ ಪತ್ರಕರ್ತರಿಗೂ ಸಲ್ಲುತ್ತದೆ ರಿಪೋರ್ಟರ್ಸ್ ಗಿಲ್ಡ್ ಸ್ಥಾಪನೆಯಲ್ಲಿ ಎಲ್ಲರ ಸಹಕಾರವಿದ್ದು ಜನ ಪ್ರತಿನಿಧಿಗಳು ಸಹ ಸಹಕರಿಸಿದ್ದು ಅವರಿಗೂ ಧನ್ಯವಾದ ಅರ್ಪಿಸುತ್ತೇನೆಂದ ಅವರು ಪತ್ರಕರ್ತರಿಗೆ ವಸತಿ ಯೋಜನೆ, ಆರೋಗ್ಯ ಮತ್ತು ಪತ್ರಕರ್ತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಗಿಲ್ಡ್ ಚಿಂತಿಸಬೇಕೆಂದ ಅವರು ಎಲ್ಲ ಸಹಕಾರ ನೀಡುವುದಾಗಿ ಹೇಳಿದರು.
ಸಂವಿಧಾನದ ಪೀಠಿಕೆ ಓದುವ ಮೂಲಕ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಜಿಲ್ಲಾ ಸಣ್ಣ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ವೀರಾರೆಡ್ಡಿ, ರಾಜ್ಯ ಸಮಿತಿ ಸದಸ್ಯ ಅರವಿಂದ ಕುಲಕರ್ಣಿ ಇದ್ದರು.
ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಪ್ರಧಾನಕಾರ್ಯದರ್ಶಿ ವಿಜಯ ಜಾಗಟಗಲ್ ಸ್ವಾಗತಿಸಿದರು. ಪ್ರತಿಭಾ ಗೋನಾಳ, ಶರಣಪ್ಪ ಗೋನಾಳ ಪ್ರಾರ್ಥಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ವೆಂಕಟೇಶ ಹೂಗಾರ ನಿರೂಪಿಸಿದರು. ಪತ್ರಕರ್ತ ಸಿದ್ದಯ್ಯಸ್ವಾಮಿ ಹಿರೇಮಠ ವಂದಿಸಿದರು.
ವಿಜೇತರಿಗೆ ಬಹುಮಾನ ವಿತರಣೆ: ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ನಿಮಿತ್ತ ಇತ್ತೀಚೆಗೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಕಾಂತಾರ, ರನ್ನರ್ ಅಪ್ ಸ್ಥಾನ ಪಡೆದ ಕ್ರಾಂತಿ ತಂಡ ಹಾಗೂ ಮೂರನೇ ಸ್ಥಾನ ಪಡೆದ ಕೆಜಿಎಫ್ ತಂಡಕ್ಕೆ ಬಹುಮಾನ ನೀಡಲಾಯಿತು. ಅಲ್ಲದೇ ಶೆಟಲ್ ಬ್ಯಾಂಡ್ಮಿಂಟನ್ ಸಿಂಗಲ್ ನಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀಕಾಂತ ಸಾವೂರ್, ದ್ವಿತೀಯ ಸ್ಥಾನ ಪಡೆದ ನೀಲಕಂಠಸ್ವಾಮಿ ದಿನ್ನಿ ಹಾಗೂ ಶೆಟಲ್ ಬ್ಯಾಂಟ್ಮಿಂಟನ್ ಡಬಲಸ್ ತಂಡದ ಪ್ರಥಮ ಸ್ಥಾನ ಪಡೆದ ಶ್ರೀಕಾಂತ ಸಾವೂರ್ ಹಾಗೂ ನಾಗರಾಜ ಸಿ, ದ್ವಿತೀಯ ಸ್ಥಾನ ಪಡೆದ ಮಹಾನಂದಾ ಹಾಗು ಬಾವಸಲಿ ಅವರ ತಂಡಕ್ಕೆ ಹಾಗೂ ಚೆಸ್, ಕ್ಯಾರೆಮ್ ಸಿಂಗಲ್ಸ್ ಹಾಗೂ ಡಬಲ್ಸ್ ನಲ್ಲಿ ವಿಜೇತರಾದ ಪತ್ರಕರ್ತರಿಗೆ ಬಹುಮಾನ ನೀಡಲಾಯಿತು.
Comments
Post a Comment