ನಾಳೆ ನಗರಕ್ಕೆ ಶ್ರೀಶೈಲ ಜಗದ್ಗುರು ಡಾ.ಚನ್ನ ಸಿದ್ಧರಾಮ ಶ್ರೀಗಳ ಪಾದಯಾತ್ರೆ- ಮಿರ್ಜಾಪೂರು

 


ನಾಳೆ ನಗರಕ್ಕೆ ಶ್ರೀಶೈಲ ಜಗದ್ಗುರು ಡಾ.ಚನ್ನ ಸಿದ್ಧರಾಮ ಶ್ರೀಗಳ ಪಾದಯಾತ್ರೆ- ಮಿರ್ಜಾಪೂರು

ರಾಯಚೂರು,ನ.೧೬-ಶ್ರೀ ಶೈಲ ಜಗದ್ಗುರುಗಳಾದ ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಪಾದಯಾತ್ರೆ ನಗರಕ್ಕೆ ನ.೧೭ ಕ್ಕೆ ಆಗಮಿಸಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪೂರು ಹೇಳಿದರು.

ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಪೂಜ್ಯ ಸ್ವಾಮಿಗಳು ಪಾದಯಾತ್ರೆ ಮೂಲಕ ನಗರಕ್ಕೆ ನ.೧೭ ಸಂಜೆ ಆಗಮಿಸಲಿದ್ದು ಅಂದು ಹರ್ಷಿತಾ ಗಾರ್ಡ್ನ್ ನಲ್ಲಿ ಧರ್ಮ ಸಭೆ , ಪ್ರಸಾದ ವಿನಿಯೋಗ ನಡೆಯಲಿದೆ ಎಂದ ಅವರು ನ.೧೮ ರಂದು ಬೆಳಿಗ್ಗೆ ಹರ್ಷಿತಾ ಗಾರ್ಡ್ನ್ ನಿಂದ ಪಾದಯಾತ್ರೆ ಪ್ರಾರಂಬಗೊಳ್ಳಲಿದ್ದು ನಗರದ ವೀರಶೈವ ಕಲ್ಯಾಣ ಮಂಟಪಕ್ಕೆ ಆಗಮಿಸುವ ಸ್ವಾಮಿಗಳು ಅಲ್ಲಿ ಧರ್ಮ ಸಭೆ ,ಪೂಜೆ, ಪ್ರಸಾದ ಸಂಜೆ ವಿಶೇಷ ಪ್ರವಚನ ನೀಡಲಿದ್ದು ನಂತರ ಬಿಜನಗೇರಾ ಗ್ರಾಮಕ್ಕೆ ಪಾದಯಾತ್ರೆ ಸಾಗಲಿದೆ ಎಂದ ಅವರು  ಸುಮಾರು ೧೦ ಸಾವಿರ ಜನರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ಬಿಚ್ಚಾಲಿ ಮಟಮಾರಿ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಶ್ರೀಗಳು ಮಾತನಾಡಿ ಪಾದಯಾತ್ರೆ ಉದ್ದೇಶ ಧರ್ಮ ಜಾಗೃತಿ ಮತ್ತು ಭಕ್ತರಲ್ಲಿ ಆಧ್ಯಾತ್ಮ ಜ್ಯೋತಿ ಬೆಳಗಿಸಿ ಅವರಲ್ಲಿರುವ ರೋಗ ನಿವಾರಣೆ ಮಾಡಿ ಅಧ್ಯಾತ್ಮದ ಮೂಲಕ ಸುಖ ಶಾಂತಿ ನೆಲೆಸುವ ಪ್ರಯತ್ನವಾಗಿದೆ ಎಂದರು.

ಈ ಸಂದರ್ಭದಲ್ಲಿ ಸೋಮವಾರಪೇಟೆ ಹಿರೇಮಠದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯ ಶ್ರೀಗಳು, ಶರಣಭೂಪಾಲ ನಾಡಗೌಡ, ಕಲ್ಲಯ್ಯ ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ