ಜೋಡು ವೀರಾಂಜಿನೇಯ ದೇವಸ್ಥಾನ: ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಭೇಟಿ.
ಜೋಡು ವೀರಾಂಜಿನೇಯ ದೇವಸ್ಥಾನ: ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಭೇಟಿ. ರಾಯಚೂರು,ನ.19. ನಗರದ ಸಾವಿತ್ರಿ ಕಾಲೋನಿಯ ಜೋಡು ವೀರಾಂಜಿನೇಯ ದೇವಸ್ಥಾನಕ್ಕೆ ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಆಂಜಿನೇಯ ಭೇಟಿ ನೀಡಿದರು.
ತಮ್ಮ ಹುಟ್ಟು ಹಬ್ಬದಂಗವಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ಜೋಡು ಹನುಮಂತ ದೇವರ ದರ್ಶನ ಪಡೆದು ಆಶೀರ್ವಾದ ಪಡೆದರು. ದೇವಸ್ಥಾನ ಸಮಿತಿಯಿಂದ ಹುಟ್ಟು ಹಬ್ಬದ ಶುಭಾಶಯ ಕೋರಿ ಸನ್ಮಾನಿಸಲಾಯಿತು.
ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭದ ಆಮಂತ್ರಣ ಪತ್ರ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಕಡಗೋಲ ಆಂಜಿನೇಯ, ದಾನಪ್ಪ ಯಾದವ , ಪ್ರಮೋದ ಕುಮಾರ, ವೇಣುಗೋಪಾಲ ಆಚಾರ ಇನಾಂದಾರ್, ವಿಷ್ಣುತೀರ್ಥ, ವೆಂಕಟೇಶ ನವಲಿ,ಗುರುರಾಜ ಕುಲಕರ್ಣಿ ಲಕ್ಷ್ಮಣಾಚಾರ ಕುರ್ಡಿ, ಜಯಕುಮಾರ ದೇಸಾಯಿ ಕಾಡ್ಲೂರು ಇತರರು ಇದ್ದರು.
Comments
Post a Comment